Advertisement

ಕೋವಿಡ್: 12ದಿನದಲ್ಲಿ ಒಂದೇ ಕುಟುಂಬದ ನಾಲ್ವರ ಸಾವು; ಇಬ್ಬರು ಮಕ್ಕಳು ಅನಾಥ

04:26 PM May 13, 2021 | Team Udayavani |

ನವದೆಹಲಿ: ಭಾರತದಲ್ಲಿ ಕೋವಿಡ್ ನ ಎರಡನೇ ರೂಪಾಂತರಿ ಅಲೆ ತೀವ್ರಗತಿಯಲ್ಲಿ ಹರಡುತ್ತಿದೆ. ಕೋವಿಡ್ ಸೋಂಕಿನಿಂದ ಕುಟುಂಬಗಳು ಒಡೆದು ಹೋಗಿದ್ದು, ಜನರ ಬದುಕು ಹಳಿತಪ್ಪಿದ ರೈಲಿನಂತಾಗಿದೆ ಎಂದು ತಿಳಿಸಿದೆ. ಕೋವಿಡ್ ಸೋಂಕಿನಿಂದ ಸಂಭವಿಸಿದ ಹೃದಯವಿದ್ರಾವಕ ಘಟನೆಗಳನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿದ್ದು, ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲೂ ಇಂತಹ ಘಟನೆಯೊಂದು ನಡೆದಿದೆ.

Advertisement

ಕೋವಿಡ್ ಸೋಂಕಿನಿಂದಾಗಿ ತಂದೆ, ತಾಯಿ ಮತ್ತು ಅಜ್ಜ, ಅಜ್ಜಿ ನಿಧನರಾಗಿದ್ದು, ಇದರ ಪರಿಣಾಮ ಅರು ಮತ್ತು ಎಂಟು ವರ್ಷದ ಇಬ್ಬರು ಹೆಣ್ಣುಮಕ್ಕಳು ಅನಾಥರಾಗಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ. ಕೇವಲ 12 ದಿನಗಳ ಅವಧಿಯಲ್ಲಿ ನಾಲ್ಕು ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ.

ಕೋವಿಡ್ 19 ಸಾವನ್ನಪ್ಪಿರುವ ಘಟನೆ ನಂತರ ಗಾಜಿಯಾಬಾದ್ ವಸತಿ ಸಮುಚ್ಛಯದಲ್ಲಿ ಜನರು ಆತಂಕಕ್ಕೆ ಒಳಗಾಗಿರುವುದಾಗಿ ವರದಿ ಹೇಳಿದೆ. ಏಪ್ರಿಲ್ ನಲ್ಲಿ ಈ ಹೆಣ್ಮಕ್ಕಳ ಅಜ್ಜನಿಗೆ ಮೊದಲು ಕೋವಿಡ್ 19 ಸೋಂಕು ದೃಢಪಟ್ಟಿತ್ತು.

ದುರ್ಗೇಶ್ ಪ್ರಸಾದ್ ಅವರು ಪತ್ನಿ ಹಾಗೂ ಮಗ, ಸೊಸೆ ಜತೆ ಗಾಜಿಯಾಬಾದ್ ನ ವಸತಿ ಸಮುಚ್ಛಯದಲ್ಲಿ ವಾಸವಾಗಿದ್ದರು. ಪ್ರಸಾದ್ ಅವರು ನಿವೃತ್ತ ಶಿಕ್ಷಕರಾಗಿದ್ದು, ಸಕ್ರಿಯ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಕೋವಿಡ್ 19 ಸೋಂಕು ದೃಢಪಟ್ಟ ಬಳಿಕ ದುರ್ಗೇಶ್ ಅವರಿಗೆ ಮನೆಯಲ್ಲಿಯೇ ಐಸೋಲೇಶನಲ್ಲಿದ್ದರು. ಬಳಿಕ ಮನೆಯಲ್ಲಿದ್ದ ಇತರ ಮೂವರಿಗೂ ಕೋವಿಡ್ ಸೋಂಕು ತಗುಲಿತ್ತು. ಏಪ್ರಿಲ್ 27ರಂದು ದುರ್ಗೇಶ್ ಪ್ರಸಾದ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.

ಒಂದು ವಾರದ ನಂತರ ದುರ್ಗೇಶ್ ಅವರ ಪುತ್ರ ಕೋವಿಡ್ ಸೋಂಕಿಗೆ ಬಲಿಯಾಗಿದ್ದರು. ಬಳಿಕ ಮೇ 7ರಂದು ದುರ್ಗೇಶ್ ಅವರ ಪತ್ನಿ, ಸೊಸೆ ಕೂಡಾ ವಿಧಿವಶರಾಗಿದ್ದು, ಇದರೊಂದಿಗೆ ಇಬ್ಬರು ಹೆಣ್ಣು ಮಕ್ಕಳು ಅನಾಥಪ್ರಜ್ಞೆಯಲ್ಲಿ ಬದುಕುವಂತಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next