Advertisement

ಇರಾನ್‌ ಕಾರಾಗೃಹದಲ್ಲಿ ಅಗ್ನಿ ಅವಘಡ: 4 ಸಾವು; 61 ಕೈದಿಗಳಿಗೆ ಗಾಯ

09:01 PM Oct 16, 2022 | Team Udayavani |

ಟೆಹ್ರಾನ್‌: ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿರುವ ಎವಿನ್‌ ಜೈಲಿನಲ್ಲಿ ಶನಿವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದೆ.

Advertisement

ಘಟನೆಯಲ್ಲಿ ನಾಲ್ವರು ಕೈದಿಗಳು ಸಾವಿಗೀಡಾಗಿದ್ದಾರೆ. 61 ಕೈದಿಗಳ ಆರೋಗ್ಯ ಹದಗೆಟ್ಟಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ಹೊತ್ತಿ ಉರಿಯುತ್ತಿರುವಾಗ ಜೈಲಿನಲ್ಲಿರುವ ಸ್ಫೋಟಕಗಳು ಸ್ಫೋಟಿಸಿದ ಸದ್ದು ಕೇಳಿಸಿದೆ. ಆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಿದೆ.

ಹಿಜಾಬ್‌ ವಿರುದ್ಧ ಇರಾನ್‌ನಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಅನೇಕ ಪ್ರತಿಭಟನಾಕಾರರ ಬಂಧನವಾಗುತ್ತಿರುವ ನಡುವೆಯೇ ಈ ಘಟನೆ ನಡೆದಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next