Advertisement

ಜುಬಿಲಿ ಹಿಲ್ಸ್‌ ಅತ್ಯಾಚಾರ ಪ್ರಕರಣ: ನಾಲ್ವರು ಅಪ್ರಾಪ್ತರನ್ನು ವಯಸ್ಕರೆಂದು ಪರಿಗಣನೆ

08:25 PM Oct 01, 2022 | Team Udayavani |

ಹೈದರಾಬಾದ್‌: ಐವರು ಅಪ್ರಾಪ್ತರು ಸೇರಿ ಆರು ಮಂದಿ 17 ವರ್ಷದ ಹದಿಹರೆಯದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಹೈದರಾಬಾದ್‌ ಜುಬಿಲಿ ಹಿಲ್ಸ್‌ ಪ್ರಕರಣದಲ್ಲಿ ನಾಲ್ವರು ಅಪ್ರಾಪ್ತರನ್ನು ವಯಸ್ಕರು ಎಂದು ಪರಿಗಣಿಸಬಹುದು ಎಂದು ತೆಲಂಗಾಣ ಬಾಲ ನ್ಯಾಯ ಮಂಡಳಿ ಅನುಮತಿ ನೀಡಿದೆ.

Advertisement

ಅಲ್ಲದೇ ಆರೋಪ ಪಟ್ಟಿಯಲ್ಲಿ ಇರುವಂತೆ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಸ್ಥಳೀಯ ಶಾಸಕನ ಮಗನನ್ನು ಅಪ್ರಾಪ್ತ ಎಂದು ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟಿದೆ.

ಮೇ 28ರಂದು ಐವರು ಅಪ್ರಾಪ್ತರು ಸೇರಿ ಆರು ಮಂದಿ ಜುಬಿಲಿ ಹಿಲ್ಸ್‌ನ ಪಬ್‌ನಿಂದ 17 ವರ್ಷದ ಯುವತಿಯನ್ನು ಅಪಹರಿಸಿದ್ದಾರೆ. ಈ ವೇಳೆ ಅವಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ನಂತರ ಶಾಸಕನ ಮಗ ಅಲ್ಲಿಂದ ಹೊರಟು ಹೋಗಿದ್ದಾನೆ. ಉಳಿದ ಐವರು ಜುಬಿಲಿ ಹಿಲ್ಸ್‌ನ ನಿರ್ಜನ ಪ್ರದೇಶಕ್ಕೆ ಅವಳನ್ನು ಕರೆದುಕೊಂಡು ಹೋಗಿ ಕಾರಿನಲ್ಲಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಪೊಲೀಸರು ಡಿಎನ್‌ಎ ಸ್ಯಾಂಪಲ್‌ ವರದಿ ಸೇರಿದಂತೆ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next