Advertisement

4 ಕಾಲಿನ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

11:36 AM Feb 10, 2017 | |

ಬೆಂಗಳೂರು: ಎರಡು ಜೋಡಿ ಕಾಲು ಮತ್ತು ಎರಡು ಅಂಗಾಂಗಳೊಂದಿಗೆ ಜನಿಸಿದ್ದ ಶಿಶುವಿನ ಪೋಷಕರು ಈಗ ನೆಮ್ಮದಿಯ ಭಾವ ತಳೆದಿದ್ದು, ನಾರಾಯಣ ಹೆಲ್ತ್‌ ಸಿಟಿಯಲ್ಲಿ ಶಿಶುಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. 

Advertisement

ಅಸಹಜವಾಗಿ ಬೆಳೆದಿದ್ದ ಮಗುವಿನ ದೇಹದ ಭಾಗವನ್ನು ವೈದ್ಯರು ಮೂರು ಗಂಟೆಗಳ ಶಸ್ತ್ರಚಿಕಿತ್ಸೆಯ ಮೂಲಕ ತೆಗೆದಿದ್ದಾರೆ. ಮಕ್ಕಳ ಶಸ್ತ್ರಚಿಕಿತ್ಸ ತಜ್ಞ  ಡಾ. ಅಶೆ ಡಿ ಕ್ರೂಜ್‌ ಹಾಗೂ ನಾರಾಯಣ ಹೆಲ್ತ್‌ ಸಿಟಿಯ ಸೀನಿಯರ್‌ ಕನ್ಸಲ್ಟೆಂಟ್‌ ಮಕ್ಕಳ ತಜ್ಞರಾದ ಡಾ.ಸಂಜಯ್‌ ರಾವ್‌ ನೇತೃತ್ವದ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ. 

ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಕ್ಕಳ ತಜ್ಞ ಡಾ.ಸಂಜಯ್‌ ರಾವ್‌, ರಾಯಚೂರು ಜಿಲ್ಲೆಯ  ಪುಲಂದಿನಿ ಗ್ರಾಮದ ಚೆನ್ನಬಸವ ದಂಪತಿಗೆ ಜ.21ರಂದು ಗಂಡು ಮಗು ಜನಿಸಿತ್ತು. ಅಸಹಜ ಬೆಳವಣಿಗೆ ಕಂಡ ಪೋಷಕರು ಶಿಶುವನ್ನು ಬಳ್ಳಾರಿಯ ಖಾಸ‌ಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆರ್ಥಿಕವಾಗಿ ಪೋಷಕರು ಹಿಂದುಳಿದಿದ್ದರಿಂದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿಸುವಷ್ಟು ಶಕ್ತರಾಗಿರಲಿಲ್ಲ.

ಈ ಬಗ್ಗೆ ಮಾಧ್ಯಮದಲ್ಲಿ ವರದಿ ಬಂದಿರುವುದನ್ನು ಗಮನಿಸಿ ಉಚಿತ ಶಸ್ತ್ರಚಿಕಿತ್ಸೆ ನೆರವೇರಿಸಲು ನಾರಾಯಣ ಹೆಲ್ತ್‌ ಸಿಟಿ ಮುಂದಾಯಿತು,” ಎಂದು ಹೇಳಿದರು. “ಶಿಶುವನ್ನು ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ಜ. 24ರಂದು ದಾಖಲು ಮಾಡಲಾಗಿತ್ತು. ಸುಮಾರು 300 ಕಿ.ಮೀ ದೂರದಿಂದ ಶಿಶು ಪ್ರಯಾಣ ಬೆಳೆಸಿದ್ದರಿಂದ ಬಳಲಿತ್ತು. ಮಗುವಿಗೆ ಉಸಿರಾಟಕ್ಕಾಗಿ ಆಮ್ಲಜನಕದ ಅಗತ್ಯ ಇದ್ದ ಕಾರಣ ಮಕ್ಕಳ ತಜ್ಞರು ಮತ್ತು ನರರೋಗ ತಜ್ಞ ವೈದ್ಯರ ತಂಡ ಶಿಶುನ ಆರೈಕೆ ಮಾಡಿ ಸಹಜ ಸ್ಥಿತಿಗೆ ತಂದರು.

Advertisement

ಶಿಶುನ ಮೂತ್ರಪಿಂಡಗಳು ಸಹಜವಾಗಿ, ಉತ್ತಮ ಸ್ಥಿತಿಯಲ್ಲಿವೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಅಲ್ಟ್ರಾಸೌಂಡ್‌ ಮಾಡಿ ಎಕ್ಸ್‌ರೇ ಪಡೆಯಲಾಯಿತು. ಬೆನ್ನುಮೂಳೆ, ಶ್ವಾಸಕೋಶವನ್ನು ತಪಾಸಣೆ ನಡೆಸಲಾಯಿತು. ಅಲ್ಲದೇ, ರಕ್ತದ ಸಂಚಲನೆ ಅರಿಯಲು ಶಿಶುನ ಧಮನಿಗೆ ಇಂಜೆಕ್ಷನ್‌ ನೀಡಲಾಯಿತು,” ಎಂದು ವಿವರಿಸಿದರು. 
“ರಕ್ತದ ಮೂಲ ಅರಿಯುವುದು ಮುಖ್ಯವಾಗಿತ್ತು. ಇದೇ ಕಾರಣಕ್ಕೆ ಶಸ್ತ್ರಚಿಕಿತ್ಸೆಯ ಯೋಜನೆ ರೂಪಿಸಲು ಎಲ್ಲಾ ರೀತಿಯ ತಪಾಸಣೆಯನ್ನೂ  ನಡೆಸುವುದು ಅಗತ್ಯವಾಗಿತ್ತು,” ಎಂದರು. 

“ಶಿಶು ಈಗ ಸಹಜ ಬೆಳವಣಿಗೆ ಕಾಣುತ್ತಿದ್ದು, ಎಲ್ಲ ರೀತಿಯ ಔಷಧಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲ ಅಗತ್ಯ ಲಸಿಕೆಗಳನ್ನು ನೀಡಲಾಗುತ್ತಿದೆ. ಕೆಲ ಸಮಯದವರೆಗೆ ಈ ಕುಟುಂಬವೂ ಬೆಳವಣಿಗೆ ಗಮನಿಸಿಕೊಳ್ಳಲು ನಾರಾಯಣ ಹೆಲ್ತ್‌ ಸಿಟಿಗೆ ಬರಬೇಕಾಗುತ್ತದೆ. ತದನಂತರ ಟೆಲಿಮೆಡಿಸಿನ್‌ ಸಮಾಲೋಚನೆ ಮೂಲಕ ಬಳ್ಳಾರಿಯಿಂದಲೇ ತಪಾಸಣೆಗೆ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು. 

ಏಕೆ ಹೀಗಾಗುತ್ತದೆ?
ಭ್ರೂಣದಲ್ಲಿಯೇ ಅವಳಿ ಮಕ್ಕಳಾಗುವ ಸಾಧ್ಯತೆಗಳಿದ್ದಾಗ ಈ ರೀತಿಯ ಲೋಪಗಳಾಗುತ್ತವೆ. ಈ ಹಂತದಲ್ಲಿ ಎರಡನೇ ಮಗು ಪೂರ್ಣವಾಗಿ ರೂಪುಗೊಂಡಿರುವುದಿಲ್ಲ. ಮೂಲ ಶಿಶುನಿಂದ ಬೇರ್ಪಡೆ ಆಗಿರುವುದಿಲ್ಲ. ಈ ಪ್ರಕರಣದಲ್ಲಿಯೂ ಇಂಥದೇ ಸಾಧ್ಯತೆಗಳು ದಟ್ಟವಾಗಿವೆ,” ಎಂದು ಮಕ್ಕಳ ತಜ್ಞ ಡಾ.ಸಂಜಯ್‌ ರಾವ್‌ ಹೇಳಿದ್ದಾರೆ. “ವೈದ್ಯಕೀಯ ಭಾಷೆಯಲ್ಲಿ ಇಂಥ ಪ್ರಕರಣವನ್ನು ಅಟೊಸೈಟ್‌ ಎಂದು ಗುರುತಿಸಲಾಗುತ್ತದೆ. ಗರ್ಭದಲ್ಲಿ ಭ್ರೂಣದ ಜತೆಗೆ ಕೆಲವೊಂದು ಮಾಂಸಖಂಡ (ಭ್ರೂಣದಲ್ಲಿ ಭ್ರೂಣ) ಬೆಳೆಯಲಿದೆ. ಈ ಪ್ರಕರಣದಲ್ಲಿಯೂ ಇಂಥದೇ ಆಗಿರಬಹುದು,” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next