Advertisement

ಸಿಂದಗಿ ಬಳಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ : ನಾಲ್ವರ ಸ್ಥಿತಿ ಗಂಭೀರ

11:41 AM Sep 14, 2021 | Team Udayavani |

ಸಿಂದಗಿ : ಎರಡು ಲಾರಿಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ರಸ್ತೆಯಲ್ಲಿರುವ ಲೋಯಲ್ ಶಾಲೆಯ ಬಳಿ ಮುಂಜಾನೆ ಸಂಭವಿಸಿದೆ.

Advertisement

ಜೇವರಗಿ ಕಡೆಯಿಂದ ಸಿಂದಗಿ ಕಡೆಗೆ ಹೊರಟಿದ್ದ ಲಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಲಾರಿ ನಡುವೆ ಅಪಘಾತ ಸಂಭವಿಸಿದೆ ಘಟನೆ ಮುಂಜಾನೆ ಸುಮಾರು 5 ಗಂಟೆಯ ಸಮಯದಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡವರ ವಿವರ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

ಒಂದು ಲಾರಿ ಆಂಧ್ರಪ್ರದೇಶ ಮೂಲದ್ದಾಗಿದ್ದು ಹಾಗೂ ಇನ್ನೊಂದು ವಿಜಯಪುರ ಜಿಲ್ಲೆಯದ್ದಾಗಿದೆ.  ಅಪಘಾತದ ಭೀಕರತೆಗೆ ಎರಡು ಲಾರಿಗಳು ನುಜ್ಜುಗುಜ್ಜಾಗಿವೆ.

ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಶಿವುಕುಮಾರ ಬಾಗೇವಾಡಿ, ಹಣಮಂತ ಮಂಚೇಂದ್ರ, ಸಿದ್ದಣ್ಣ ರೋಡಗಿ, ಮಲಕಣ್ಣ ತೆಗ್ಗಿಹಳ್ಳಿ, ವಿಷ್ಣು ಜಾದವ, ಮುತ್ತುರಾಜ ಹುಣಸಗಿ, ಶ್ರೀಧರ ರತ್ನಪ್ಪಗೋಳ, ಅರ್ತನಳ್ಳಿ ಹಾಗೂ ಗುಗ್ಗುರಿ ಭಾಗವಹಿಸಿದ್ದರು.

ಇದನ್ನೂ ಓದಿ : ಭಾರಿ ಮಳೆಗೆ ಬಾಂಬೆಚಾಳದಲ್ಲಿ ಧರೆಗುರುಳಿದ ಮರ : ಮಸೀದಿಗೆ ಹಾನಿ

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next