Advertisement

ಗಣೇಶ ವಿಗ್ರಹಗಳಿಗೆ 4 ಅಡಿ ಮಿತಿ: ಉದ್ದವ್‌ ಠಾಕ್ರೆ

05:34 PM Jun 28, 2020 | Suhan S |

ಮುಂಬಯಿ, ಜೂ. 27: ಮುಂಬರುವ ಗಣೇಶೋತ್ಸವದಲ್ಲಿ ಗಣೇಶ ಮಂಡಳಿಗಳು 4 ಅಡಿಗಳಿ ಗಿಂತ ಹೆಚ್ಚಿನ ಎತ್ತರದ ವಿಗ್ರಹಗಳನ್ನು ಸ್ಥಾಪಿಸಬಾರದು ಎಂದು ಸಿಎಂ ಉದ್ಧವ್‌ ಅವರು ಹೇಳಿದ್ದಾರೆ.

Advertisement

ರಾಜ್ಯದಲ್ಲಿ ಹಬ್ಬುತ್ತಿರುವ ಸೋಂಕಿನ ದೃಷ್ಟಿಯಿಂದ ಈ ವರ್ಷ ಅದ್ದೂರಿ ಆಚರಣೆ ನಡೆಸ ಬಾರದು ಎಂದು ಠಾಕ್ರೆ ಈ ಹಿಂದೆ ಗಣೇಶ ಮಂಡಳಿಗಳಿಗೆ ಸೂಚಿಸಿದ್ದು, ಪ್ರಸ್ತುತ ಹಬ್ಬವನ್ನು ಸಾರ್ವಜ ನಿಕವಾಗಿ ಆಚರಿಸುವ ಮಂಡಳಿ ಗಳಿಗೆ ಕೋವಿಡ್ ಹಿನ್ನೆಲೆ ಗಣೇಶೋತ್ಸವದಲ್ಲಿ ಜನಸಂದಣಿಗೆ ಅವಕಾಶ ನೀಡಬಾರದು ಎಂದಿದ್ದಾರೆ. ಎತ್ತರದ ಗಣೇಶ ವಿಗ್ರಹಗಳು ಮುಂಬಯಿಯಲ್ಲಿ ಜನಪ್ರಿಯವಾಗಿವೆ. ವಿಗ್ರಹದ ಎತ್ತರಕ್ಕಿಂತ ನಂಬಿಕೆ ಮತ್ತು ಭಕ್ತಿ ಮುಖ್ಯವಾಗಿದೆ ಎಂದು ಠಾಕ್ರೆ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕವು ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿದೆ. ಸದ್ಯ ಜನಸಂದಣಿಯನ್ನು ತಪ್ಪಿಸಲು ಎಲ್ಲ ಪೂಜಾ ಕೇಂದ್ರಗಳನ್ನು ಮುಚ್ಚಲಾಗಿದೆ. ಮುಂಬಯಿ ಮತ್ತು ಪುಣೆಯಲ್ಲಿ ಬೃಹತ್‌ ಗಣೇಶ ವಿಗ್ರಹಗಳನ್ನು ನೋಡಲು ನಾವು ಸೇರುವ ಜನಸಂದಣಿಯನ್ನು ತಪ್ಪಿಸಬೇಕು. ನಾನು ಗಣೇಶ ಮಂಡಳಿಗಳೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಬಗ್ಗೆ ಅವರು ಸರ್ವಾನುಮತದಿಂದ ಒಪ್ಪಿಕೊಂಡಿರುವುದಾಗಿ ಠಾಕ್ರೆ ಹೇಳಿದರು.

ದಹಿಹಂಡಿ ರದ್ದು : ದೊಡ್ಡ ವಿಗ್ರಹಗಳಿಗೆ ಹೆಚ್ಚಿನ ಸ್ವಯಂಸೇವಕರ ಅಗತ್ಯವಿರುವುದರಿಂದ ಮಂಡಲಗಳ ಗಣೇಶ ವಿಗ್ರಹಗಳು 4 ಅಡಿಗಳಿಗಿಂತ ಹೆಚ್ಚು ಎತ್ತರ ಇರಬಾರದು ಎಂದು ಮುಖ್ಯಮಂತ್ರಿ ಸೂಚಿಸಿದರು. ಆಗಸ್ಟ್ ನಲ್ಲಿ ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿಯ ದಹಿಹಂಡಿ ಆಚರಣೆಯನ್ನು ರದ್ದುಪಡಿಸಲಾಗಿದೆ. ದಹಿಹಂಡಿಯನ್ನು ದೊಡ್ಡ ರೀತಿಯಲ್ಲಿ ಆಯೋಜಿಸುವ ಶಿವಸೇನೆ ಶಾಸಕ ಪ್ರತಾಪ್‌ ಸರ್‌ ನಾಯಕ್‌ ಅವರು ಬದಲಿಗೆ ಕೋವಿಡ್ ವೈರಸ್‌ ಪರಿಹಾರ ನಿಧಿಗೆ ಒಂದು ಕೋಟಿ ರೂ. ಗಳನ್ನು ನೀಡಿದ್ದಾರೆ ಎಂದು ಠಾಕ್ರೆ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next