Advertisement

ಮೊಹರಂ ಮೆರವಣಿಗೆ ವೇಳೆ ದುರಂತ: ವಿದ್ಯುತ್ ಸ್ಪರ್ಶಗೊಂಡು ನಾಲ್ವರು ಮೃತ್ಯು, 13 ಮಂದಿಗೆ ಗಾಯ

11:05 AM Jul 29, 2023 | Team Udayavani |

ಜಾರ್ಖಂಡ್: ಮೊಹರಂ ಹಬ್ಬದ ಮೆರವಣಿಗೆ ವೇಳೆ ನಡೆದ ಆಘಾತಕಾರಿ ಘಟನೆಯಲ್ಲಿ ನಾಲ್ವರು ಮೃತಪಟ್ಟು ಹದಿಮೂರು ಮಂದಿ ಗಾಯಗೊಂಡಿರುವ ಘಟನೆ ಜಾರ್ಖಂಡ್ ನ ಬೊಕಾರೊದಲ್ಲಿ ಶನಿವಾರ ಸಂಭವಿಸಿದೆ.

Advertisement

ಮೊಹರಂ ಹಬ್ಬದ ನಿಮಿತ್ತ ಗುಜರಾತ್‌ನ ಜಾಮ್‌ನಗರದಲ್ಲಿ ತಾಜಿಯಾ ಮೆರವಣಿಗೆ ನಡೆಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡಿದೆ ಈ ವೇಳೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಅಲ್ಲದೆ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಹದಿಮೂರು ಮಂದಿ ಗಾಯಗೊಂಡಿದ್ದು ಅವರನ್ನು ತಕ್ಷಣವೇ ಬೊಕಾರೊ ಥರ್ಮಲ್ ಡಿವಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದು ಈ ವೇಳೆ ತಾಜಿಯ ಎತ್ತಿಕೊಂಡು ಮೆರವಣಿಗೆ ನಡೆಸುತ್ತಿದ್ದ ವೇಳೆ 11,000 ವೋಲ್ಟ್ ಹೈ ಟೆನ್ಷನ್ ತಂತಿ ಸ್ಪರ್ಶಗೊಂಡು ಮೆರವಣಿಗೆಗೆ ಬಳಸಿದ್ದ ಬ್ಯಾಟರಿಗಳು ಸ್ಪೋಟಗೊಂಡಿದೆ ಇದರಿಂದ ಹೆಚ್ಚಿನ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: 76ನೇ ವಯಸ್ಸಲ್ಲೂ Fit and Fine: ರಾಕೆಟ್ ಹಿಡಿದು ಬ್ಯಾಡ್ಮಿಂಟನ್ ಆಡಿದ ಲಾಲು ಪ್ರಸಾದ್ ಯಾದವ್

 

Advertisement
Advertisement

Udayavani is now on Telegram. Click here to join our channel and stay updated with the latest news.

Next