Advertisement
ಅವರು ಶನಿವಾರ ಜಿಲ್ಲೆಯಲ್ಲಿ ಟೋಲ್ ಜಾರಿ ಸಂಬಂಧ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನಲೆಯಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಮತ್ತು ವಿವಿಧ ಮುಖಂಡರು, ಬಸ್ ಮಾಲಕರು, ಟ್ಯಾಕ್ಸಿ ಮಾಲಕರ ಸಭೆಯನ್ನು ನಡೆಸಿದರು.ಟೋಲ್ ಜಾರಿ ಬಗ್ಗೆ ಕೇಂದ್ರ ಸರಕಾರದಿಂದ ಅನುಮತಿ ದೊರೆತಿದ್ದು, ಕಾಮಗಾರಿ ಸಂಪೂರ್ಣಗೊಂಡ ವರದಿಯ ಬಗ್ಗೆ ಸಭೆಯಲ್ಲಿ ಅಪಸ್ವರ ಕೇಳಿಬಂತು. ಕಾನೂನು ಮತ್ತು ಒಪ್ಪಂದ ಬಗ್ಗೆ ಸವಿವರ ಚರ್ಚೆ ಸಭೆಯಲ್ಲಿ ನಡೆಯಿತು ಎಂದು ಪ್ರಕಟನೆ ತಿಳಿಸಿದೆ.
Related Articles
Advertisement
ಟೋಲ್ ಸಂಗ್ರಹ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಬೇಕಿದೆ. ಸಾಸ್ತಾನ, ಬ್ರಹ್ಮಾವರದಲ್ಲಿನ ಜನರು ದೈನಂದಿನ ಕಾರ್ಯಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿ.ಪಂ. ಸದಸ್ಯೆ ಶಿಲ್ಪಾ$ಸುವರ್ಣಾ ಅವರು ಉಚ್ಚಿಲದಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನಸೆಳೆದರು.
ಕಾಪು ದಿವಾಕರ ಶೆಟ್ಟಿ ಅವರು ಮಾತನಾಡಿ, ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿಯ ಪ್ರಕಾರ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದರು. ಸರ್ವೀಸ್ ರೋಡ್ ಇಲ್ಲ. ನಮ್ಮ ಕೆಲಸ ಮಾಡಿ ನೀವು ಟೋಲ್ ಹಾಕಿ ಎಂದರು.
ಸಹಾಯಕ ಆಯುಕ್ತೆ ಶಿಲ್ಪಾ$ನಾಗ್ ಅವರು ಮಾಹಿತಿ ನೀಡಿ, ಹೆದ್ದಾರಿ ಕಾಮಗಾರಿಗೆ ಜಾಗ ಕೊಟ್ಟಿದ್ದು ಜಾಗದ ಸಮಸ್ಯೆ ಇಲ್ಲ ಎಂದರು. ಸಾಸ್ತಾನದ ಸಾರ್ವಜನಿಕರು ತಾವು ಯಾವುದೇ ಕಾರಣಕ್ಕೂ ಟೋಲ್ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು. ವಸತಿ ಪ್ರದೇಶಕ್ಕಿಂತ ಮೇಲೆ ಡ್ರೆ„ನೆಜ್ ಇದ್ದು, ಸ್ಥಳೀಯ ಜನರಿಗೆ ತೊಂದರೆ ಇದೆ. ಸರ್ವೀಸ್ ರೋಡ್, ಬಸ್ ಬೇ, ಲಾರಿ ಬೇ ಆಗದೆ ಟೋಲ್ ಸಂಗ್ರಹ ಮಾಡಬಾರದು ಎಂದು ನಾಗರೀಕರು ಒತ್ತಾಯಿಸಿದರು.
ಕೇಂದ್ರ ಸರಕಾರದ ನೀತಿಯನ್ನು ಬದಲಾಯಿಸಲು ಜಿಲ್ಲಾಡಳಿತಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸ್ಪಷ್ಟಪಡಿಸಿದರು.
ಕಳೆದ ಸೆಪ್ಟೆಂಬರ್‌ನಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲು ಎನ್ ಎಚ್ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕಾಮಗಾರಿಗಳಿಂದಾಗಿ ಸಂಭವಿಸಿದ ಅಪಘಾತಗಳ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಇಲಾಖೆಯಿಂದ ಸಚಿವರು ವರದಿ ಕೇಳಿದರು. ಅಪಘಾತಗಳನ್ನು ನಿವಾರಿಸಲು, ರಸ್ತೆ ಸುರಕ್ಷತೆಗೆ ಎನ್‌ಎಚ್ ಕೈಗೊಂಡ ಕ್ರಮಗಳೇನು ಎಂದು ಕೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಮಾತನಾಡಿದರು. ಜಿಲ್ಲಾಡಳಿತಕ್ಕೆ ಜನರ ಹಿತರಕ್ಷಣೆ ಹೊಣೆ ಇದ್ದು, ಜನಪ್ರತಿನಿಧಿಗಳು, ಜನರು ಟೋಲ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ಎಂದು ಸಚಿವರು ನಿರ್ದೇಶಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು. ಡಿವೈಎಸ್‌ಪಿ ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ಇದ್ದರು.