Advertisement

ಪಾಕಿಸ್ಥಾನ ಸರದಿಯಲ್ಲಿ 4 ಶತಕಗಳ ದಾಖಲೆ

12:45 AM Dec 23, 2019 | Team Udayavani |

ಕರಾಚಿ: ಸರದಿಯ ಅಗ್ರ ಕ್ರಮಾಂಕದ ಮೊದಲ ನಾಲ್ವರ ಶತಕ ಸಾಹಸದಿಂದ ಕರಾಚಿ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಪಾಕಿಸ್ಥಾನ ಬೃಹತ್‌ ಗೆಲುವಿನತ್ತ ಮುನ್ನಡೆದಿದೆ. 476 ರನ್ನುಗಳ ಕಠಿನ ಗುರಿ ಪಡೆದ ಲಂಕಾ, 4ನೇ ದಿನದಾಟದ ಅಂತ್ಯಕ್ಕೆ 7 ವಿಕೆಟಿಗೆ 212 ರನ್‌ ಗಳಿಸಿ ಸೋಲಿನತ್ತ ಮುಖ ಮಾಡಿದೆ.

Advertisement

ಆರಂಭಕಾರ ಒಶಾದ ಫೆರ್ನಾಂಡೊ 102 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದಿರಿಸಿಕೊಂಡರೂ ಈ ಪಂದ್ಯವನ್ನು ಉಳಿಸಿಕೊಳ್ಳಲು ಲಂಕೆಯ ಮುಂದೆ ಯಾವುದೇ ಮಾರ್ಗವಿಲ್ಲ. 97ಕ್ಕೆ 5 ವಿಕೆಟ್‌ ಉರುಳಿಸಿಕೊಂಡಾಗ ಲಂಕಾ ರವಿವಾರವೇ ಸೋಲುವ ಸಾಧ್ಯತೆ ಇತ್ತು. ಆದರೆ ಒಶಾದ ಫೆರ್ನಾಂಡೊ ಮತ್ತು ಕೀಪರ್‌ ನಿರೋಶನ್‌ ಡಿಕ್ವೆಲ್ಲ ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು. 6ನೇ ವಿಕೆಟಿಗೆ 104 ರನ್‌ ಒಟ್ಟುಗೂಡಿತು. ದಿನದಾಟದ ಕೊನೆಯ ಹಂತದಲ್ಲಿ ಡಿಕ್ವೆಲ್ಲ ಮತ್ತು ದಿಲುÅವಾನ್‌ ಪೆರೆರ ವಿಕೆಟ್‌ಗಳನ್ನು ಒಟ್ಟಿಗೇ ಹಾರಿಸುವ ಮೂಲಕ ಪಾಕ್‌ ಮೇಲುಗೈ ಸಾಧಿಸಿತು.

ಒಶಾದ ಫೆರ್ನಾಂಡೊ 175 ಎಸೆತಗಳಿಂದ 102 ರನ್‌ (13 ಬೌಂಡರಿ) ಬಾರಿಸಿ ಕ್ರೀಸಿನಲ್ಲಿದ್ದಾರೆ. ಆಕ್ರಮಣಕಾರಿಯಾಗಿ ಆಡಿದ ಡಿಕ್ವೆಲ್ಲ 76 ಎಸೆತ ಎದುರಿಸಿ 65 ರನ್‌ ಮಾಡಿದರು (11 ಬೌಡರಿ). ನಸೀಮ್‌ ಶಾ 3, ಉಳಿದ ಬೌಲರ್‌ಗಳೆಲ್ಲ ಒಂದೊಂದು ವಿಕೆಟ್‌ ಉರುಳಿಸಿದರು.ಪಾಕಿಸ್ಥಾನ 3 ವಿಕೆಟಿಗೆ 555 ರನ್‌ ಪೇರಿಸಿ ದ್ವಿತೀಯ ಸರದಿಯನ್ನು ಡಿಕ್ಲೇರ್‌ ಮಾಡಿತು.

ನಾಲ್ವರ ಶತಕ ದಾಖಲೆ
ಪಾಕಿಸ್ಥಾನದ ದ್ವಿತೀಯ ಸರದಿಯಲ್ಲಿ ಅಗ್ರ ಕ್ರಮಾಂಕದ ನಾಲ್ವರಿಂದ ಶತಕ ದಾಖಲಾಯಿತು. ಶಾನ್‌ ಮಸೂದ್‌ 135 ರನ್‌ (198 ಎಸೆತ, 7 ಬೌಂಡರಿ, 3 ಸಿಕ್ಸರ್‌), ಅಬಿದ್‌ ಅಲಿ 174 ರನ್‌ (281 ಎಸೆತ, 21 ಬೌಂಡರಿ, 1 ಸಿಕ್ಸರ್‌), ನಾಯಕ ಅಜರ್‌ ಅಲಿ 118 ರನ್‌ (157 ಎಸೆತ, 13 ಬೌಂಡರಿ) ಮತ್ತು ಬಾಬರ್‌ ಆಜಂ ಅಜೇಯ 100 ರನ್‌ ಬಾರಿಸಿದರು (131 ಎಸೆತ, 7 ಬೌಂಡರಿ, 1 ಸಿಕ್ಸರ್‌).

ಟೆಸ್ಟ್‌ ಇತಿಹಾಸದಲ್ಲಿ ಅಗ್ರ ಸರದಿಯ ಮೊದಲ ನಾಲ್ವರಿಂದ ಶತಕ ದಾಖಲಾದ ಕೇವಲ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ 2007ರ ಢಾಕಾ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಾಸಿಮ್‌ ಜಾಫ‌ರ್‌ (138), ದಿನೇಶ್‌ ಕಾರ್ತಿಕ್‌ (129), ರಾಹುಲ್‌ ದ್ರಾವಿಡ್‌ (129) ಮತ್ತು ಸಚಿನ್‌ ತೆಂಡುಲ್ಕರ್‌ (ಅಜೇಯ 122) ಈ ಸಾಧನೆ ದಾಖಲಿಸಿದ್ದರು.

Advertisement

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-191 ಮತ್ತು 3 ವಿಕೆಟಿಗೆ 555 ಡಿಕ್ಲೇರ್‌ (ಮಸೂದ್‌ 135, ಅಬಿದ್‌ ಅಲಿ 174, ಅಜರ್‌ ಅಲಿ 118, ಬಾಬರ್‌ ಆಜಂ ಔಟಾಗದೆ 100, ಲಹಿರು ಕುಮಾರ 139ಕ್ಕೆ 2). ಶ್ರೀಲಂಕಾ-271 ಮತ್ತು 7 ವಿಕೆಟಿಗೆ 212 (ಫೆರ್ನಾಂಡೊ ಬ್ಯಾಟಿಂಗ್‌ 102, ಡಿಕ್ವೆಲ್ಲ 65, ಮ್ಯಾಥ್ಯೂಸ್‌ 19, ನಸೀಮ್‌ ಶಾ 31ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next