Advertisement

ಜಿಎಸ್‌ಟಿಗೆ ಸಂಬಂಧಿಸಿದ 4 ವಿಧೇಯಕಗಳಿಗೆ ಒಪ್ಪಿಗೆ

03:50 AM Mar 21, 2017 | Team Udayavani |

ಹೊಸದಿಲ್ಲಿ: ಹಾಲಿ ವರ್ಷದ ಜು.1ರಿಂದಲೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ತರಬೇಕೆಂದು ಪಣ ತೊಟ್ಟಿರುವ ಕೇಂದ್ರ ಸರಕಾರ, ಅದಕ್ಕೆ ಸಂಬಂಧಿಸಿದ ನಾಲ್ಕು ಪೂರಕ ಮಸೂದೆಗಳಿಗೆ ಅನುಮೋದನೆ ನೀಡಿದೆ. ಅವುಗಳನ್ನು ಹಾಲಿ ಬಜೆಟ್‌ ಅಧಿವೇಶನದಲ್ಲಿಯೇ ಮಂಡಿಸಿ ಅನುಮೋದನೆ ಪಡೆಯಬೇಕೆಂಬ ಇರಾದೆಯನ್ನು ಕೇಂದ್ರ ಹೊಂದಿದೆ. ಇದರಿಂದಾಗಿ ದೇಶದ ಅರ್ಥವ್ಯವಸ್ಥೆ, ಸುಧಾರಣೆ ಶೇ.2ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ವಿಶ್ಲೇಷಿಸಲಾಗಿದೆ. 

Advertisement

ಸಂಸತ್‌ನಿಂದ ಅನುಮೋದನೆ ಪಡೆದ ಬಳಿಕ ಆಯಾ ರಾಜ್ಯ ವಿಧಾನಸಭೆಗಳಲ್ಲಿಯೂ ಅದಕ್ಕೆ ಅನುಮೋದನೆ ಸಿಗಬೇಕಾಗಿದೆ.  ಈಗಾಗಲೇ ತೆರಿಗೆಗೆ ಸಂಬಂಧಿಸಿ ಶೇ.5, 12, 18 ಮತ್ತು 28 ಎಂದು ನಾಲ್ಕು ಪ್ರಕಾರದ “ಸ್ಲಾéಬ್‌’ ಮಾಡಲಾಗಿದ್ದು, ಜಿಎಸ್‌ಟಿ ಮಂಡಳಿ ಅದನ್ನು ಅನುಮೋದಿಸಿಯೂ ಆಗಿದೆ. ಪರಿಣಾಮ ಲಕ್ಸುರಿ ಕಾರುಗಳು, ತಂಪುಪಾನೀಯ ಮತ್ತು ತಂಬಾಕು ಉತ್ಪನ್ನಗಳ ಮೇಲೆ ಆಗಲಿದೆ. ಸಹಜವಾಗಿ ದುಬಾರಿ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next