Advertisement

ಬೆಂಗಳೂರು : ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ; ಪೊಲೀಸ್ ಪರಿಶೀಲನೆ

01:49 PM Apr 08, 2022 | Team Udayavani |

ಬೆಂಗಳೂರು : ನಗರದ ನಾಲ್ಕು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸ್ ತಂಡಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಶುಕ್ರವಾರ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,”ಬೆಂಗಳೂರಿನ ಹೊರವಲಯದಲ್ಲಿರುವ ನಾಲ್ಕು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ, ನಮ್ಮ ಸ್ಥಳೀಯ ಪೊಲೀಸರು ಆ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಡ್ರಿಲ್ ನಡೆಯುತ್ತಿದ್ದು, ಅದರಂತೆ ಬಾಂಬ್ ಸ್ಕ್ವಾಡ್‌ಗಳು ಪರಿಶೀಲನೆಗೆ ತೆರಳಿವೆ.” ಎಂದು ಪಂತ್ ಹೇಳಿದ್ದಾರೆ.

ಸ್ಥಳದಲ್ಲಿ ಏನಾದರೂ ಕಂಡುಬಂದಿದೆಯೇ ಎಂದು ಕೇಳಿದಾಗ, “ಇಮೇಲ್ ಆಧರಿಸಿ, ನಮ್ಮ ತಂಡಗಳು ಸ್ಥಳದಲ್ಲಿ ಪರಿಶೀಲಿಸುತ್ತಿವೆ. ಹೆಚ್ಚಿನ ಮಾಹಿತಿ ಬಂದಾಗ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಕಮಿಷನರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next