Advertisement

4.70 ಲಕ್ಷ ನಕಲಿ ಆಧಾರ್‌ ರದ್ದು : ಸಂಸ್ಥೆಯ ನ್ಯೂನತೆಗಳ ಬಗ್ಗೆ ಆಕ್ರೋಶ ಹೊರಹಾಕಿದ ಸಿಎಜಿ

11:36 PM Apr 08, 2022 | Team Udayavani |

ಹೊಸದಿಲ್ಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ ಅನಂತರ ಮೊದಲ ಬಾರಿಗೆ ಲೆಕ್ಕ ಪರಿಶೋಧನೆ ನಡೆಸಿರುವ ಮಹಾ ಲೇಖಪಾಲರು (ಸಿಎಜಿ) ಸಂಸ್ಥೆಯಲ್ಲಿನ ನ್ಯೂನತೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.

Advertisement

2016ರಲ್ಲಿ ಆಧಾರ್‌ ಸಂಸ್ಥೆಗೆ ಸಾಂವಿಧಾನಿಕ ಮಾನ್ಯತೆ ನೀಡಲಾಗಿದೆ. ಅಲ್ಲದೆ, ಇಲ್ಲಿವರೆಗೆ 131 ಕೋಟಿ ಮಂದಿಗೆ ಆಧಾರ್‌ ಸಂಖ್ಯೆ ನೀಡಲಾಗಿದೆ. ವಿಶೇಷವೆಂದರೆ, 2019ರ ನವೆಂಬರ್‌ ವರೆಗೆ 4.70 ಲಕ್ಷ ನಕಲಿ ಆಧಾರ್‌  ರದ್ದು ಮಾಡಲಾಗಿದೆ ಎಂದಿರುವ ಸಿಎಜಿ, ಸಂಸ್ಥೆಯ ಕಾರ್ಯ ನಿರ್ವಹಣೆ ಬಗ್ಗೆ ಕಿಡಿಕಾರಿದೆ.  ಆಧಾರ್‌ ನೀಡುವಾಗ ಜನರಿಂದ ಅಧಿಕೃತ ದಾಖಲೆಗಳನ್ನು ತೆಗೆದುಕೊಳ್ಳದೇ ಇರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ. ಕೇವಲ ಸ್ವಯಂ ದೃಢೀಕರಣ ಪತ್ರದೊಂದಿಗೆ ಹೇಗೆ ಆಧಾರ್‌ ಕಾರ್ಡ್‌ ನೀಡಿದ್ದೀರಿ ಎಂದು ಪ್ರಶ್ನಿಸಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಆಧಾರ್‌ ಕಾರ್ಡ್‌ ನೀಡಿರುವ ಕುರಿತಂತೆಯೂ ಆಕ್ಷೇಪ ವ್ಯಕ್ತಪಡಿಸಿದೆ. ಈ ಮಕ್ಕಳಿಗೆ ಆಧಾರ್‌ ನೀಡದೇ ಇದ್ದಿದ್ದರೆ 310 ಕೋಟಿ ರೂ. ಹಣ ಉಳಿಕೆ ಮಾಡಬಹುದಾಗಿತ್ತು ಎಂದಿದೆ.

ಜತೆಗೆ ಆಧಾರ್‌ನಲ್ಲಿರುವ ನಂಬರ್‌ಗೂ, ಕಾರ್ಡ್‌ ಹೊಂದಿರುವವರಿಗೂ ಹೊಂದಿಕೆ ಆಗದಿರುವ ಬಗ್ಗೆಯೂ ಪ್ರಶ್ನಿಸಿರುವ ಅದು, ದೇಶದ ನಿವಾಸಿಗಳ ಗೌಪ್ಯತಾ ಮಾಹಿತಿಯನ್ನು ಇರಿಸಿಕೊಂಡಿದ್ದೀರಿ, ಒಂದಷ್ಟು ಎಚ್ಚರಿಕೆಯಿಂದ ಇರಬೇಕಾದದ್ದು ಅಗತ್ಯವಿದೆ ಎಂದು ತೀಕ್ಷ್ಣವಾಗಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next