Advertisement

ಕಾರ್ಗಿಲ್ ನಲ್ಲಿ ಕಂಪಿಸಿದ ಭೂಮಿ: 4.2 ತೀವ್ರತೆಯ ಭೂಕಂಪ

04:12 PM Oct 08, 2020 | keerthan |

ಹೊಸದಿಲ್ಲಿ: ಲಡಾಖ್ ನ ಕಾರ್ಗಿಲ್ ನಲ್ಲಿ ಇಂದು ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.2ರಷ್ಟು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇಂದು ಬೆಳಗ್ಗೆ 9.22 ಕ್ಕೆ ಭೂಕಂಪನ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು 10 ಕಿ.ಮೀ ಆಳದಲ್ಲಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ವರದಿಗಳು ತಿಳಿಸಿದೆ.ಕಳೆದ 72 ಗಂಟೆಗಳಲ್ಲಿ ಲಡಾಖ್ ನಲ್ಲಿ ಸಂಭವಿಸಿದ ಎರಡನೇ ಭೂಕಂಪನವಾಗಿದೆ.

ಇದನ್ನೂ ಓದಿ:ಹತ್ರಾಸ್‌ ಹತ್ಯಾಚಾರ ವಿರುದ್ಧ ಆಕ್ರೋಶ : ಯುವತಿ ಕುಟುಂಬಕ್ಕೆ ಪರಿಹಾರ ಒದಗಿಸಲು ಆಗ್ರಹ

15 ವರ್ಷಗಳ ಹಿಂದೆ ಅಂದರೆ 2005ರ ಅಕ್ಟೋಬರ್ 8ರಂದು ಜಮ್ಮು ಕಾಶ್ಮೀರದಲ್ಲಿ ಭೀಕರ ಭೂಕಂಪನ ಸಂಭವಿಸಿತ್ತು. ಗಡಿ ನಿಯಂತ್ರಣ ರೇಖೆಯ ಬಳಿ ನಡೆದ ಕಂಪನದಲ್ಲಿ 80 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next