Advertisement

IMF: ಪಾಕಿಸ್ಥಾನಕ್ಕೆ 3ನೇ ಕಂತಿನ ಆರ್ಥಿಕ ನೆರವು: ಐಎಂಎಫ್ ಜತೆಗೆ ಪಾಕ್‌ ಮಾತುಕತೆ

04:21 PM Mar 21, 2024 | Kavyashree |

ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ಥಾನಕ್ಕೆ ನೆರವು ನೀಡುತ್ತಿರುವ ಅಂತಾ ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸಂಸ್ಥೆಯು ಮೂರನೇ ಕಂತಿನ ನೆರವಿನ ಹಣವನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಆರಂಭಿಕ ಮಟ್ಟದ ಮಾತಕತೆ ನಡೆಸಲಾಗಿದೆ. ಈ ಅಂಶವನ್ನು ಅಲ್ಲಿನ ಸರಕಾರ ಸ್ಪಷ್ಟಪಡಿಸಿದೆ.

Advertisement

ಜಾಗತಿಕ ಸಾಲದಾತ ಸಂಸ್ಥೆಯಾಗಿರುವ ಐಎಂಎಫ್ ಪಾಕಿಸ್ಥಾನದ ಆರ್ಥಿಕ ಪುನಶ್ಚೇತನಕ್ಕಾಗಿ 3 ಶತಕೋಟಿ ಡಾಲರ್‌ ಹಣವನ್ನು ನೆರವಾಗಿ ನೀಡಲು ಒಪ್ಪಿಕೊಂಡಿತ್ತು. ಈ ಮೊತ್ತವನ್ನು ನೀಡ ಬೇಕಾದರೆ ಐಎಂಎಫ್ ಆಡಳಿತ ಮಂಡಳಿ ಅನುಮೋದನೆ ನೀಡಬೇಕಾಗಿದೆ. ಈಗಾಗಲೇ 2 ಕಂತುಗಳಲ್ಲಿ ಮೊತ್ತವನ್ನು ಬಿಡುಗಡೆ ಮಾಡಿದೆ.

ಇದೀಗ ಮೂರನೇ ಕಂತಿನ ಭಾಗವಾಗಿ 1.1 ಶತಕೋಟಿ ಡಾಲರ್‌ ಹಣವನ್ನು ಬಿಡುಗಡೆ ಮಾಡಬೇಕಿದೆ. ಇದಕ್ಕಾಗಿ ಮಾ.14ರಿಂದ 19ರ ವರೆಗೆ ಅಧಿಕಾರಿ ನಾಥನ್‌ ಪೋರ್ಟರ್‌ ಅವರ ನೇತೃತ್ವದಲ್ಲಿ ಐಎಂಎಫ್ ನಿಯೋಗ ಪಾಕಿಸ್ಥಾನದ ಭೇಟಿಯನ್ನೂ ಮಾಡಿದೆ. ಬೆನ್ನಲ್ಲೇ ಈ ಬೆಳವಣಿಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next