Advertisement
ರವೀಂದ್ರ ಜಡೇಜ ಸ್ನಾಯು ಸೆಳೆತದಿಂದಾಗಿ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಸಾಮಾನ್ಯವಾಗಿ ಸ್ನಾಯು ಸೆಳೆತದಿಂದ ಸಂಪೂರ್ಣ ಮುಕ್ತರಾಗಲು 4ರಿಂದ 8 ವಾರ ಬೇಕಾಗುತ್ತದೆ. “ಜಡೇಜ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ, ಅವರ ಸಂಪೂರ್ಣ ಚೇತರಿಕೆಗೆ ಇನ್ನಷ್ಟು ಸಮಯ ಬೇಕಿದೆ. ಹೀಗಾಗಿ ತವರಿನ ರಾಜ್‌ಕೋಟ್ ಟೆಸ್ಟ್ ಪಂದ್ಯದಿಂದ ಅವರು ಹೊರಗುಳಿಯುವ ಸಾಧ್ಯತೆಯೇ ಹೆಚ್ಚು’ ಎಂದು ಮಂಡಳಿಯ ಮೂಲವೊಂದು ಹೇಳಿದೆ.
ವಿರಾಟ್ ಕೊಹ್ಲಿ ವಿಷಯದಲ್ಲಿ ಬಿಸಿಸಿಐ ಸ್ಪಷ್ಟ ಮಾಹಿತಿ ನೀಡಿಲ್ಲ. ಆದರೆ ಅವರು ಮೊದಲು ಕುಟುಂಬಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದಿದೆ. ಕ್ರಿಕೆಟ್ ವೆಬ್‌ಸೈಟ್ ಒಂದರ ವರದಿಯಂತೆ, ಕೊಹ್ಲಿ ವಿದೇಶದಲ್ಲಿದ್ದಾರೆ. ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಎಬಿ ಡಿ ವಿಲಿಯರ್ ತಮ್ಮ ಯೂ ಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ತಂಡದ ಪ್ರಧಾನ ವೇಗಿ ಮೊಹಮ್ಮದ್ ಶಮಿ ಕಡೆಯಿಂದಲೂ ಸಕಾರಾತ್ಮಕ ಸುದ್ದಿ ಬಿತ್ತರಗೊಂಡಿಲ್ಲ. ಆದರೆ ತೊಡೆಯ ನೋವಿಗೆ ಸಿಲುಕಿರುವ ಕೆ.ಎಲ್. ರಾಹುಲ್ ಚೇತರಿಸಿಕೊಂಡಿದ್ದಾಗಿ ಬಿಸಿಸಿಐ ತಿಳಿಸಿದೆ. ಹೀಗಾಗಿ ಅವರು ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತ.