ಧಾರವಾಡ: ಭಾರತದ ಶಿಕ್ಷಣ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನ ಚೀನಾ ಹಾಗೂ ಎರಡನೇ ಸ್ಥಾನದಲ್ಲಿ ಅಮೆರಿಕ ಇದೆ ಎಂದು ಕೃಷಿ ವಿವಿ ಕುಲಪತಿ ಡಾ|ಎಂ.ಬಿ. ಚಟ್ಟಿ ಹೇಳಿದರು.
ನಗರದ ಅಂಜುಮನ್ ಕಲಾ, ವಿಜ್ಞಾನ, ವಾಣಿಜ್ಯ ಪದವಿ ವಿದ್ಯಾಲಯ ಹಾಗೂ ಪಿ.ಜಿ. ಸೆಂಟರ್ ಹಮ್ಮಿಕೊಂಡಿದ್ದ “ಉನ್ನತ ಶಿಕ್ಷಣದಲ್ಲಿ ಕೌಶಲ ಅಭಿವೃದ್ಧಿ: ವಿದ್ಯಮಾನಗಳು ಮತ್ತು ಸವಾಲುಗಳು’ ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಬಹಳ ವಿಭಿನ್ನವಾದ ಶಿಕ್ಷಣ ಪದ್ಧತಿ ನಮ್ಮಲ್ಲಿದೆ. 2017ರ ಅಂಕಿ-ಅಂಶದ ಪ್ರಕಾರ ಪದವಿ ಪಡೆದ ಶೇ. 30 ವಿದ್ಯಾರ್ಥಿಗಳು ಮಾತ್ರ ನೌಕರಿ ಪಡೆಯಲು ಅರ್ಹರು. ಇದಕ್ಕೆ ಕಾರಣ ಕೌಶಲದ ಕೊರತೆ. ನಾವು ಶಿಕ್ಷಣ ಕ್ಷೇತ್ರವನ್ನು ಭಾಗಗಳನ್ನಾಗಿ ಮಾಡಿ ಕಲಿಸುತ್ತೇವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಸಂಪ್ರದಾಯ ಇಲ್ಲ. ಕಲಾ ಕ್ಷೇತ್ರದ ಪದವಿ ಪಡೆದ ವಿದ್ಯಾರ್ಥಿ ವಿಜ್ಞಾನ, ಎಂಜಿನಿಯರಿಂಗ್ ಹೀಗೆ ಬೇರೆ ವಿಷಯಗಳಲ್ಲಿ ಸ್ನಾತಕೋತ್ತರ, ಪಿಎಚ್‌ಡಿ ಪದವಿಯನ್ನು ಮಾಡಿ ತನ್ನ ಅಭಿರುಚಿಗೆ ತಕ್ಕಂತೆ ಕಲಿತು ಯಶಸ್ವಿ ಆಗಬಹುದು ಎಂದರು.
ಧಾರವಾಡದ ಐಐಟಿ ಮುಖ್ಯಸ್ಥ ಪ್ರೊ| ನಾಗೇಶ ಆರ್. ಐಯ್ಯರ ಮಾತನಾಡಿದರು. ಪ್ರಾಂಶುಪಾಲ ಡಾ|ಎಂ.ಎನ್. ಮೀರಾನಾಯಕ ಅಧ್ಯಕ್ಷತೆ ವಹಿಸಿದ್ದರು. ಡಾ| ಎನ್.ವಿ. ಗುದ್ದಣ್ಣವರ, ಡಾ| ಎನ್. ಎಮ್. ಮಕಾನದಾರ, ಡಾ| ಐ.ಎ. ಮುಲ್ಲಾ, ಡಾ| ಎಫ್.ಎಚ್. ನಧಾಪ್, ಪ್ರೊ| ಇಜಾಜ್ ಅಹಮದ್, ಡಾ|ಶಿವಪ್ಪಾ, ಡಾ| ಎಸ್.ವಿ. ಹೆಗಡಾಳ, ಪ್ರೊ|ಎಮ್. ಎಲ್.ಕಿಲ್ಲೇದಾರ, ಡಾ|ಎಮ್.ಏ. ಮುಮ್ಮಿಗಟ್ಟಿ, ಬಿ.ಕೆ.ಹಲಗಿ, ರಾಜೇಂದ್ರ ಕಗ್ಗೂಡಿ, ಶಾದಾಬ ಖಾನಮ್ ಶೇಖ, ಡಾ|ಎಫ್.ಎಮ್. ನಧಾಪ್, ಪ್ರೊ| ಆರ್. ಎಚ್. ದೊಡಮನಿ ಇದ್ದರು. ಬೇಬಿ ಆಯಿಶಾ ಜಾಗಿರದಾರ ನಿರೂಪಿಸಿದರು. ಸಜ್ಜಾದ ಅಹಮ್ಮದ್ ಪರಿಚಯಿಸಿದರು. ರೂಹಿದಾ ನದಾಫ ಸ್ವಾಗತಿಸಿ, ವಂದಿಸಿದರು.