Advertisement
ಮಂಗಳವಾರ ರಾತ್ರಿ ಬ್ರಿಸ್ಟಲ್ನಲ್ಲಿ ನಡೆದ 3ನೇ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 9 ವಿಕೆಟಿಗೆ 358 ರನ್ ಪೇರಿಸಿಯೂ ಇದನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ದಿಟ್ಟ ಜವಾಬಿತ್ತ ಇಂಗ್ಲೆಂಡ್ 44.5 ಓವರ್‌ಗಳಲ್ಲಿ ಕೇವಲ ನಾಲ್ಕೇ ವಿಕೆಟಿಗೆ 359 ರನ್ ಬಾರಿಸಿ ಜಯಭೇರಿ ಮೊಳಗಿಸಿತು. ಇಂಗ್ಲೆಂಡ್ 370 ಪ್ಲಸ್ ಮೊತ್ತದ ದ್ವಿತೀಯ ಪಂದ್ಯವನ್ನು 12 ರನ್ನುಗಳಿಂದ ಗೆದ್ದು ಬಂದಿತ್ತು. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.
ಆರಂಭಕಾರ ಇಮಾಮ್ ಉಲ್ ಹಕ್ ಜೀವನಶ್ರೇಷ್ಠ 151 ರನ್ (131 ಎಸೆತ, 16 ಬೌಂಡರಿ, 1 ಸಿಕ್ಸರ್) ಬಾರಿಸಿ ಪಾಕಿಸ್ಥಾನದ ಬೃಹತ್ ಮೊತ್ತಕ್ಕೆ ಕಾರಣರಾದರು. ಮಧ್ಯಮ ಕ್ರಮಾಂಕದಲ್ಲಿ ಆಸಿಫ್ ಅಲಿ 52 ರನ್ನುಗಳ ಕೊಡುಗೆ ಸಲ್ಲಿಸಿದರು. ಚೇಸಿಂಗ್ ವೇಳೆ ಇಂಗ್ಲೆಂಡ್ ಓಪನರ್‌ಗಳಾದ ಜಾನಿ ಬೇರ್‌ಸ್ಟೊ-ಜಾಸನ್ ರಾಯ್ ಸಿಡಿದು ನಿಂತರು. ಮೊದಲ ವಿಕೆಟಿಗೆ ಕೇವಲ 17.3 ಓವರ್‌ಗಳಿಂದ 159 ರನ್ ಹರಿದು ಬಂತು. ಬೇರ್‌ಸ್ಟೊ 93 ಎಸೆತಗಳಿಂದ 128 ರನ್ ಹೊಡೆದು (15 ಬೌಂಡರಿ, 5 ಸಿಕ್ಸರ್) 7ನೇ ಶತಕ ಸಂಭ್ರಮವನ್ನಾಚರಿಸಿದರೆ, ರಾಯ್ 55 ಎಸೆತ ನಿಭಾಯಿಸಿ 76 ರನ್ ಬಾರಿಸಿದರು (8 ಬೌಂಡರಿ, 4 ಸಿಕ್ಸರ್).
Related Articles
Advertisement
ಸರಣಿಯ 4ನೇ ಪಂದ್ಯ ಮೇ 17ರಂದು ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿದೆ.