Advertisement

New Criminal Law: 3 ಹೊಸ ಕ್ರಿಮಿನಲ್‌ ಕಾಯ್ದೆಯಡಿ ನಗರದಲ್ಲಿ ಮೊದಲ ದಿನ 39 ಕೇಸ್‌

10:44 AM Jul 03, 2024 | Team Udayavani |

ಬೆಂಗಳೂರು: ದೇಶಾದ್ಯಂತ ಜಾರಿಯಾಗಿರುವ ನೂತನ 3 ಕ್ರಿಮಿನಲ್ ಕಾಯ್ದೆಗಳ ಅಡಿಯಲ್ಲಿ ಮೊದಲನೇ ದಿನ (ಜು.1) ಬೆಂಗಳೂರು ನಗರದಲ್ಲಿ ಒಟ್ಟು 39 ಪ್ರಕರಣಗಳು ದಾಖಲಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದ್ದಾರೆ.

Advertisement

‌ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಕಾನೂನಿನನ್ವಯ ಬೆಂಗಳೂರು ನಗರದಲ್ಲಿ ಮೊದಲನೇ ದಿನ ಸುಗಮವಾಗಿ ಪ್ರಕರಣಗಳನ್ನು ದಾಖಲಿಸಿ ಕೊಳ್ಳಲಾಗಿದ್ದು, ಯಾವುದೇ ರೀತಿಯ ಕಾನೂನಿನ ಅಡಚಣೆಯಾಗಲಿ, ತಾಂತ್ರಿಕ ಸಮಸ್ಯೆಯಾಗಲಿ ಆಗಿಲ್ಲ ಎಂದು ತಿಳಿಸಿದರು. ಸೋಮವಾರ ಬೆಂಗಳೂರಿನಲ್ಲಿ ಒಟ್ಟು 39 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಭಾರತೀಯ ನ್ಯಾಯ ಸಂಹಿತೆಯಡಿ(ಬಿಎನ್‌ಎಸ್‌) 32 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ(ಬಿಎನ್‌ಎಸ್‌ಎಸ್‌) 7 ಪ್ರಕರಣಗಳು ದಾಖಲಾಗಿವೆ ಎಂದರು.

ಜುಲೈ 1ರಿಂದ ದೇಶಾದ್ಯಂತ ಅನುಷ್ಠಾನಕ್ಕೆ ಬಂದಿರುವ ನೂತನ ಕಾಯ್ದೆಗಳ ಕುರಿತ ಪೊಲೀಸ್‌ ಠಾಣೆಗಳು ಸೇರಿ ರಾಜ್ಯದ ಎಲ್ಲಾ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next