Advertisement

ಪುಣೆ ಬಂಟರ ಸಂಘದ 38ನೇ ವಾರ್ಷಿಕ ಮಹಾಸಭೆ

05:09 PM Nov 27, 2018 | |

ಪುಣೆ: ಪುಣೆ ಬಂಟರ ಸಂಘದ 38ನೇ ವಾರ್ಷಿಕ ಮಹಾಸಭೆ ನ. 25ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಮೊಳಹಳ್ಳಿ ಮಂಜಯ್ಯ ಹೆಗ್ಡೆ ಕಿರು ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್‌ಬೆಟ್ಟು ಸಂತೋಷ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿ   ದೀಪ ಪ್ರಜ್ವಲಿಸಿ ಸಭೆಗೆ ಚಾಲನೆಯಿತ್ತರು. ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷ ಎರ್ಮಾಳ್‌ ನಾರಾಯಣ ಕೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ  ಸಂಘದ ಉಪಾಧ್ಯಕ್ಷರಾದ ಮಾಧವ ಆರ್‌. ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಉತ್ತರ ಪ್ರಾದೇಶಿಕ  ಕಾರ್ಯಾಧ್ಯಕ್ಷ  ದಿನೇಶ್‌ ಶೆಟ್ಟಿ ಕಳತ್ತೂರು, ಯುವ ವಿಭಾಗದ ಕಾರ್ಯಾಧ್ಯಕ್ಷ ರೋನಕ್‌  ಜಯ ಶೆಟ್ಟಿ ಉಪಸ್ಥಿತರಿದ್ದರು.   ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳನ್ನು ಸಭೆಯ ಮುಂದಿಟ್ಟರು. ಅದನ್ನು ಸಭೆಯ ಅನುಮೋದನೆಯೊಂದಿಗೆ ಮಂಜೂರುಗೊಳಿಸಲಾಯಿತು. 

ಮುಂದಿನ  ಅವ ಧಿಗೆ ಲೆಕ್ಕಪರಿಶೋಧಕರನ್ನಾಗಿ ಸಿಎ ದಯಾನಂದ ಶೆಟ್ಟಿ ಅವರನ್ನು ಮುಂದುವರಿಸಲಾಯಿತು. ಈ ಸಂದರ್ಭ 2018-20ರ ಅವಧಿಗೆ ಕಾರ್ಯಕಾರಿ ಸಮಿತಿಗೆ 21 ಸದಸ್ಯರ ಹೆಸರುಗಳನ್ನು ಅಜಿತ್‌ ಹೆಗ್ಡೆ ಅವರು ಪ್ರಕಟಿಸಿದರು. ಸಂಘದ ಆಂತರಿಕ ಕಾನೂನಾತ್ಮಕವಾದ ಕೆಲವೊಂದು ಅಗತ್ಯವಾದ ಬದಲಾವಣೆಗಳನ್ನು ಮಾಡುವಲ್ಲಿ ಸಭೆಯ ಒಪ್ಪಿಗೆಯನ್ನು ಪಡೆದುಕೊಳ್ಳಲಾಯಿತು.

ಸಭಾಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಸಂಘದ ಅಧ್ಯಕ್ಷತೆಯನ್ನು  ವಹಿಸಿಕೊಂಡು ಪದವಿಗೆ ಯಾವುದೇ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ, ನಿಸ್ವಾರ್ಥವಾಗಿ ನನ್ನ ಪೂರ್ಣ ಸಮಯವನ್ನು ನೀಡಿ ಸೇವೆ ಸಲ್ಲಿಸಿದ ಧನ್ಯತಾಭಾವ ನನ್ನದಾಗಿದೆ. ನಾಯಕನೆಂಬ ಅಹಂಭಾವವನ್ನು ನಾನೆಂದೂ ಪ್ರದರ್ಶಿಸಿಲ್ಲ. ನಾಲ್ಕು ವರ್ಷದ ನಮ್ಮ ಅವಧಿಯಲ್ಲಿ  ಭವನ ಲೋಕಾರ್ಪಣೆಗೊಂಡಿದೆ ಎಂಬ ಹೆಮ್ಮೆ   ನಮ್ಮ ದಾಗಿದೆ.  ಭವನವನ್ನು ಭವಿಷ್ಯದಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಿಸುವ ಬಗ್ಗೆ ಚಿಂತನ ಮಂಥನ ನಡೆಸಿ ಚಿಂತಕರ ಚಾವಡಿಯಲ್ಲಿ ಚರ್ಚಿಸಿ ಹಿರಿಯರ ಸೂಕ್ತ  ಮಾರ್ಗದರ್ಶನದೊಂದಿಗೆ ಮುನ್ನಡೆಸುವ ಅಗತ್ಯವಿದೆ. ಸಂಘದ ಮಹತ್ವಾಕಾಂಕ್ಷೆಯ ಕಲ್ಪವೃಕ್ಷ ಯೋಜನೆಯಿಂದ ಸಮಾಜದ ಅಶಕ್ತರಿಗೆ ನೆರವು ಕಲ್ಪಿಸುವ ಯೋಜನೆಗೆ ಈಗಾಗಲೇ ಚಾಲನೆ ದೊರೆತಿದ್ದು ಇದರ ಅನುಷ್ಠಾನದ ಬಗ್ಗೆ ಕಾರ್ಯ ಕೈಗೊಳ್ಳಬೇಕಾಗಿದೆ.  ಯಾರೇ ಒಬ್ಬರು ನಾಯಕತ್ವದಲ್ಲಿ ಯಶಸ್ವಿಯಾಗಲು ಕೇವಲ ಒಬ್ಬನಿಂದ ಸಾಧ್ಯವಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಪುಣೆ ಬಂಟರ ಭವನದ ನಿರ್ಮಾಣ ನನ್ನ ನೇತೃತ್ವದಲ್ಲಿ ಯಶಸ್ವಿಯಾಗಲು ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಉತ್ತರ ಮತ್ತು ದಕ್ಷಿಣ ಪ್ರಾದೇಶಿಕ ಸಮಿತಿಗಳು, ಮಾಜಿ ಅಧ್ಯಕ್ಷರುಗಳು ಎಲ್ಲಕ್ಕಿಂತ ಮುಖ್ಯವಾಗಿ ಸಹೃದಯ ದಾನಿಗಳು ಇವರೆಲ್ಲರಿಗೂ ನನ್ನ ನಾಲ್ಕು ವರ್ಷದ ಅಧ್ಯûಾವ ಧಿಯ ಕೊನೆಯ ಸಂದರ್ಭ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಮುಂದೆ ಇಂದು ಆಯ್ಕೆಗೊಂಡ 21 ಸದಸ್ಯರ ಸರ್ವಾನುಮತದ ನಿರ್ಣಯದಂತೆ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಪ್ರತಿಯೊಬ್ಬರಿಗೂ ಇಲ್ಲಿ ಮುಕ್ತವಾದ ಅವಕಾಶವಿದೆ. ನಮ್ಮ ಸಂಘದಲ್ಲಿ ನಾಯಕತ್ವಕ್ಕೆ ಕೊರತೆಯಿಲ್ಲ. ಪ್ರತಿಯೊಬ್ಬರೂ ಶಕ್ತರಾಗಿದ್ದು   ಉತ್ತಮ ಮನೋಬಲವನ್ನು ಹೊಂದಿ¨ªಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳಿಗೆ, ಸಹಕಾರಗಳಿಗೆ ನಾನು ಚಿರಋಣಿಯಾಗಿದ್ದೇನೆ. ಭವಿಷ್ಯದಲ್ಲಿಯೂ ನಮ್ಮ ಸಂಘ ಆದರ್ಶ ಸಂಘವಾಗಿ ಗುರುತಿಸಿಕೊಳ್ಳಲಿ. ನಾವೆಲ್ಲರೂ ಯಾವುದೇ ಭಿನ್ನಾಭಿಪ್ರಾಯಗಳನ್ನು ಬೆಳೆಸಿಕೊಳ್ಳದೆ ಒಮ್ಮತದಿಂದ ಸಮಾಜದ ಕಾರ್ಯ ಮಾಡೋಣ ಎಂದರು.

Advertisement

ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮಾತನಾಡಿ, ನಾಲ್ಕು ವರ್ಷಗಳಿಂದ ನನ್ನ ಕಾರ್ಯಾವ ಧಿಯಲ್ಲಿ ಸರ್ವ ರೀತಿಯಿಂದ ಸಹಕಾರ ನೀಡಿದ ಮಹಿಳಾ ವಿಭಾಗಕ್ಕೆ, ಕಾರ್ಯಕಾರಿ ಸಮಿತಿಗೆ, ಯುವ ವಿಭಾಗ, ಪ್ರಾದೇಶಿಕ ಸಮಿತಿಗಳಿಗೆ ಪ್ರೀತ್ಯಾದರಗಳೊಂದಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ. ಸಂಘದ, ಸಮಾಜದ ಸೇವೆ ಯನ್ನು ಪ್ರಾಮಾಣಿಕವಾಗಿ ವಾಗಿ ನಿರ್ವಹಿಸಿದ ತೃಪ್ತಿ ನನಗಿದೆ. ಕಾರ್ಯಾಧ್ಯಕ್ಷೆ ಸ್ಥಾನದಿಂದ ನಿರ್ಗಮಿಸಿದ ಅನಂತರವೂ ಸಂಘ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇನೆ ಎಂದರು.

ಮಾಜಿ ಅಧ್ಯಕ್ಷ ಸದಾನಂದ ಕೆ. ಶೆಟ್ಟಿಯವರು  ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಯದರ್ಶಿ ಅಜಿತ್‌ ಹೆಗ್ಡೆ ಕಾರ್ಯಕ್ರಮ ನಿರ್ವ ಹಿಸಿ ವಂದಿಸಿದರು. ಸಭೆಯಲ್ಲಿ  ಸಂಘದ ಪದಾಧಿ ಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ಪ್ರಾದೇಶಿಕ ಸಮಿತಿ ಸದಸ್ಯರು, ಸದಸ್ಯರು ಉಪ ಸ್ಥಿತರಿದ್ದರು.   

“ಭವನ ನಮಗೆಲ್ಲ ಹೆಮ್ಮೆ’
ಸಂತೋಷ್‌ ಶೆಟ್ಟಿಯವರು ಸಂಘಕ್ಕಾಗಿ ಮಾಡಿದ ತ್ಯಾಗ, ಕರ್ತವ್ಯಬದ್ಧತೆ, ಶ್ರಮ, ಸಹನಶೀಲತೆ, ದಕ್ಷ ನೇತೃತ್ವಕ್ಕಾಗಿ, ಸುಂದರ ಭವನದ ನಿರ್ಮಾಣಕ್ಕಾಗಿ ಎಷ್ಟು ಅಭಿನಂದಿಸಿದರೂ ಕಡಿಮೆಯೆ. ಇದರ ದೊಡ್ಡ ಶ್ರೇಯ ಅವರಿಗೆ ಸಲ್ಲಬೇಕಾಗಿದೆ. ಈ ಭವನ ನಮ್ಮೆಲ್ಲರ ಹೆಮ್ಮೆಯ ಭವನವಾಗಿದ್ದು ಇದರ ನಿರ್ಮಾಣಕ್ಕೆ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳು. ಇದೀಗ ಮುಂದಿನ ಕಾರ್ಯಕಾರಿ ಸಮಿತಿಗಾಗಿ ಆಯ್ಕೆಗೊಂಡ 21 ಸದಸ್ಯರಿಗೂ ನನ್ನ  ಶುಭ ಹಾರೈಕೆಗಳು ಎಂದು ಪುಣೆ ಬಂಟರ ಸಂಘದ  ಗೌರವಾಧ್ಯಕ್ಷ ಜಗನ್ನಾಥ ಬಿ. ಶೆಟ್ಟಿ  ಅವರು ಹೇಳಿದರು.

ಚಿತ್ರ-ವರದಿ : ಕಿರಣ್‌ ಬಿ. ರೈ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next