ಮುಂಬೈ: ವೈದ್ಯೆಯ ಮೇಲೆ ದೈಹಿಕ ದೌರ್ಜನ್ಯ ಎಸಗಿದ್ದ ನಂತರ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕನನ್ನು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅರೆಬರೆ ಬೆಂದ ಗ್ಯಾರಂಟಿಗಳನ್ನು ನೀಡಿ ಜನರಿಗೆ ವಂಚಿಸುತ್ತಿದೆ: ಬಿ.ವೈ.ವಿಜಯೇಂದ್ರ
ಪೊಲೀಸರ ಮಾಹಿತಿ ಪ್ರಕಾರ, ಟಾರ್ಡಿಯೋ ಪ್ರದೇಶದ ಕ್ಲಬ್ ನಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದ ಸಂದರ್ಭದಲ್ಲಿ ಆರೋಪಿ ಮಹಿಳೆಗೆ ಪರಿಚಿತನಾಗಿದ್ದ. ವೈದ್ಯೆಗೆ ವಿವಾಹವಾಗಿದ್ದು, ಆಕೆ ಗಂಡನಿಂದ ದೂರವಾಗಿದ್ದರು ಎಂದು ವರದಿ ತಿಳಿಸಿದೆ.
ಗಂಡ, ಹೆಂಡತಿ ನಡುವಿನ ಜಗಳದ ಬಗ್ಗೆ ಮಾತನಾಡಲು ಬರುವಂತೆ ಆರೋಪಿ ವೈದ್ಯೆಯನ್ನು ಆಹ್ವಾನಿಸಿದ್ದ. ವೈದ್ಯೆ ಆರೋಪಿಯನ್ನು ಭೇಟಿಯಾಗಲು ಬಂದಾಗ ತಂಪುಪಾನೀಯದಲ್ಲಿ ಮತ್ತುಬರಿಸುವ ಔಷಧ ಮಿಶ್ರಣ ಮಾಡಿಕೊಟ್ಟ ಪರಿಣಾಮ ಆಕೆ ಪ್ರಜ್ಞೆ ಕಳೆದುಕೊಂಡಿದ್ದು, ಈ ಸಂದರ್ಭದಲ್ಲಿ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ನಂತರ ಆರೋಪಿ ವೈದ್ಯೆ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆದರೆ ಆಕೆ ಹಣ ನೀಡಲು ನಿರಾಕರಿಸಿದಾಗ, ದೈಹಿಕ ದೌರ್ಜನ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಇದೀಗ ಬಂಧಿತ ಆರೋಪಿ ವಿರುದ್ಧ ಸೆಕ್ಷನ್ 376, 384ರ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.