Advertisement
2015-16ರಲ್ಲಿ ಜನಿಸಿದವರ ಪೈಕಿ ಕೇವಲ 62.3ರಷ್ಟು ಮಂದಿ ಯಲ್ಲಿ ಮಾತ್ರ ಜನನ ಪ್ರಮಾಣ ಪತ್ರ ಇದೆ ಎಂದು ವರದಿಯೊಂದು ಹೇಳಿದೆ. ಅಂದರೆ 5 ಮಕ್ಕಳಲ್ಲಿ 3 ಮಕ್ಕಳು ಮಾತ್ರ ಇದನ್ನು ಪಡೆಯುತ್ತಿದ್ದಾರೆ.
ಜನನ ದಾಖಲಾತಿಗಳಲ್ಲಿ ಏರಿಕೆ ಕಂಡು ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಇನ್ನೂ ಸಾಧ್ಯವಾಗಿಲ್ಲ. 2000ನೇ ಇಸವಿ ಮತ್ತು 2017ರ ನಡುವೆ ಬಹುದೊಡ್ಡ ಬದಲಾವಣೆ ಆಗಿದೆ. ದಾಖಲಾಗುತ್ತಿಲ್ಲ
ಜನನ ಮತ್ತು ಮರಣಗಳನ್ನು ದಾಖಲಾಗುವ ಸಂಖ್ಯೆಯೂ ಕಡಿಮೆಯಾಗಿದೆ. ಆಸ್ಪತ್ರೆಗಳಲ್ಲಿ ಹೆರಿಗೆಯಾದ ಸಂದರ್ಭ ಹೆತ್ತವರು ಜನನ ಪ್ರಮಾಣ ಪತ್ರವನ್ನು ಪಡೆಯಲು ನಿರಾಸಕ್ತಿ ತೋರಿ ಸುತ್ತಿದ್ದಾರೆ. ಇನ್ನು ಮನೆಯಲ್ಲೇ ಹೆರಿಗೆಗಳಾದ ಸಂದರ್ಭವೂ ಜನನ ಪ್ರಮಾಣ ಪತ್ರಗಳತ್ತ ಜನರ ಚಿತ್ತ ಹರಿಯುತ್ತಿಲ್ಲ. ಮರಣ ಪ್ರಮಾಣ ಪತ್ರ ಮಾಡಿಸುವುದು ಕಡ್ಡಾಯವಾಗಿದೆ.
Related Articles
ಮಗುವೊಂದು ಜನಿಸಿದರೆ ಅಥವಾ ವ್ಯಕ್ತಿಯೊಬ್ಬ ಮೃತಪಟ್ಟ 21 ದಿನಗಳೊಳಗೆ ಸಂಬಂಧ ಪಟ್ಟ ಪ್ರಮಾಣ ಪತ್ರವನ್ನು ಮಾಡಿ ಸುವುದು ಕಡ್ಡಾಯವಾಗಿದೆ. ಬಳಿಕವೂ ತಾಲೂಕು ಕೇಂದ್ರದಲ್ಲಿ ಮಾಡಿಸಬಹುದಾಗಿದೆ.
Advertisement
ಯುನಿಸೆಫ್ ವರದಿಭಾರತ ಸೇರಿದಂತೆ ಕಾಂಗೋ, ಇಥಿಯೋಪಿಯಾ, ನೈಜೀರಿಯಾ ಮತ್ತು ಪಾಕಿಸ್ಥಾನದಲ್ಲಿ ಜನನ ನೋಂದಣಿಗಳು ಸರಿಯಾಗಿ ದಾಖಲಾಗುತ್ತಿಲ್ಲ. 5 ವರ್ಷಗಳಲ್ಲಿ ಈ ದೇಶಗಳ ಒಟ್ಟು 166 ಮಿಲಿಯನ್ ಮಕ್ಕಳ ಜನನ ನೋಂದಣಿಯಾಗಿಲ್ಲ ಎಂದು 2019ರ ಯುನಿಸೆಫ್ ಹೇಳಿತ್ತು. ಎಲ್ಲಿ ಕಡಿಮೆ (ಶೇ.ಗಳಲ್ಲಿ)
ಉತ್ತರ ಪ್ರದೇಶ (61.5), ಬಿಹಾರ (73.7), ಮಧ್ಯಪ್ರದೇಶ (74.6) ಮತ್ತು ಜಮ್ಮು ಕಾಶ್ಮೀರ (78.6) ಇಲ್ಲಿ ದೇಶದ ಸರಾಸರಿ ಗಿಂತ ಕಡಿಮೆ ದರದಲ್ಲಿ ಜನನ ನೋಂದಣಿಗಳು (2017ರ ವರದಿ ಪ್ರಕಾರ) ನಡೆಯುತ್ತಿದೆ.
ಶೇ. 41.4
5ರಲ್ಲಿ 2 ಮಕ್ಕಳ ಹೆತ್ತವರು ಅನಕ್ಷರಸ್ಥರಾಗಿದ್ದು, ಅವರಲ್ಲಿ ಶೇ. 41.4ರಷ್ಟು ಮಂದಿ ಜನನ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನು ಪದವಿ ವಿದ್ಯಾಭ್ಯಾಸ ಹೊಂದಿದವರಲ್ಲಿ ಶೇ. 77.6ರಷ್ಟು ಮಂದಿ ತಮ್ಮ ಮಕ್ಕಳ ಜನನ ನೋಂದಣಿ ಮಾಡಿಸಿದ್ದಾರೆ. ಅಸ್ಸಾಂನಲ್ಲಿ ಜನನ ಪ್ರಮಾಣ ಪತ್ರ
ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಪೌರತ್ವ ನೋಂದಣಿ ಯಲ್ಲಿ ಜನನ ಪ್ರಮಾಣ ಪತ್ರಗಳನ್ನು ಕೇಳಲಾಗಿತ್ತು. ಇದರ ಜತೆಗೆ ಆಧಾರ್, ವೋಟರ್ ಐಡಿ, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವಿಮಾ ದಾಖಲೆಗಳು, ಶಾಲಾ ದಾಖಲಾತಿಗಳನ್ನು ನೀಡಲಾಗಿತ್ತು. ಇವುಗಳಿಗೆ ಮೂಲವಾಗಿ ಜನನ ಪ್ರಮಾಣ ಪತ್ರವನ್ನು ಬಳಸಲಾಗಿತ್ತು.