Advertisement

National ಕ್ರೀಡಾ ಚಾಂಪಿಯನ್‍ಶಿಪ್ ; ಪಣಜಿ ಶಾಲೆಗಳಲ್ಲಿ ದೀಪಾವಳಿ ರಜೆ ಬದಲಾವಣೆ

03:05 PM Oct 06, 2023 | Team Udayavani |

ಪಣಜಿ: 37ನೇ ರಾಷ್ಟ್ರೀಯ ಕ್ರೀಡಾ ಚಾಂಪಿಯನ್‍ಶಿಪ್ ಈ ತಿಂಗಳು ಗೋವಾದಲ್ಲಿ ನಡೆಯುತ್ತಿದೆ. ಗೋವಾ ಸರ್ಕಾರ ಈ ಸ್ಫರ್ಧೆ ಯಶಸ್ವಿಗೆ ಸಿದ್ಧತೆ ನಡೆಸಿದೆ. ಅದೇ ಸಿದ್ಧತೆಯ ಭಾಗವಾಗಿ ಈಗ ಗೋವಾದ ಶಾಲೆಗಳ ದೀಪಾವಳಿ ರಜೆಯನ್ನು ಬದಲಾಯಿಸಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ನಿರ್ದೇಶಕ ಶೈಲೇಶ್ ಜಿಂಗ್ಡೆ ಆದೇಶ ಹೊರಡಿಸಿದ್ದಾರೆ.

Advertisement

ಗೋವಾದ ಶಾಲೆಗಳಿಗೆ ಈ ಹಿಂದೆ ನವೆಂಬರ್ 7 ರಿಂದ ನವೆಂಬರ್ 23 ರವರೆಗೆ ದೀಪಾವಳಿ ರಜೆ ಘೋಷಿಸಲಾಗಿತ್ತು.  ನವೆಂಬರ್ 19 ರಿಂದ ಗೋವಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟ ಆರಂಭವಾಗುತ್ತಿದೆ. ಕ್ರೀಡಾಕೂಟವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಹೀಗಾಗಿ ಶಾಲೆಗಳ ದೀಪಾವಳಿ ರಜೆಯನ್ನು ಬದಲಾಯಿಸಲಾಗಿದೆ. ಈಗ ಈ ರಜಾದಿನವು ಅ.25 ರಿಂದ ಶನಿವಾರ ನ. 18 ರವರೆಗೆ ಇರಲಿದೆ.

ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಸೋಮವಾರ ನ.20 ರಿಂದ ದೀಪಾವಳಿ ರಜೆಯ ನಂತರ ಶಾಲೆಗಳು ಪುನರಾರಂಭಗೊಳ್ಳಲಿವೆ. ಎಲ್ಲಾ ಇಲಾಖಾ ಮುಖ್ಯಸ್ಥರು ದೀಪಾವಳಿ ರಜೆಯಲ್ಲಿ ಈ ಬದಲಾವಣೆಯನ್ನು ಗಮನಿಸಲು ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next