ದಾವಣಗೆರೆ: ಜಿಲ್ಲೆಯಲ್ಲಿಶುಕ್ರವಾರ ಕೋವಿಡ್ 19 ಸೋಂಕಿಗೆ ಆರು ಜನರು ಬಲಿಯಾಗಿದ್ದಾರೆ.
ಈ ಆರು ಜನರ ಸಾವಿನಿಂದ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಮಹಾಮಾರಿಗೆ ಬಲಿಯಾದವರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.
ಕೋವಿಡ್ 19 ಸೋಂಕಿನ ಜೊತೆಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 60 ವರ್ಷದ ವೃದ್ಧೆ (ರೋಗಿ ನಂಬರ್ 274061), 45 ವರ್ಷದ ಮಹಿಳೆ(ರೋಗಿ ನಂಬರ್ 298971), 55 ವರ್ಷದ ವೃದ್ಧ (ರೋಗಿ ನಂಬರ್ 304682), 58 ವರ್ಷದ ವೃದ್ಧೆ (ರೋಗಿ ನಂಬರ್ 305531), 48 ವರ್ಷದ ವ್ಯಕ್ತಿ (ರೋಗಿ ನಂಬರ್ 306320), 62 ವರ್ಷದ ವೃದ್ಧೆ (ರೋಗಿ ನಂಬರ್ 288793) ಇಂದು ಮೃತಪಟ್ಟವರು.
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಈ ಸೋಂಕಿಗೆ ಹೊಸದಾಗಿ 379 ಜನರು ಒಳಗಾಗಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 8538ಕ್ಕೆ ಏರಿಕೆಯಾಗಿದ್ದು ಇವರಲ್ಲಿ ಇಂದಿನವರೆಗೆ 6236 ಜನರು ಗುಣಮುಖಗೊಂಡು ಆಸ್ಪತ್ರೆಗಳಿಂದ ಬಿಡುಗಡೆಹೊಂದಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ 2124 ಸಕ್ರಿಯ ಪ್ರಕರಣಗಳಿದ್ದು ಇವರೆಲ್ಲರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.