Advertisement

ರೇಶನ್‌ ಖರೀದಿಸದ 36,826 ಕುಟುಂಬ ಆದ್ಯತೆ ಯಾದಿಯಿಂದ ಹೊರಕ್ಕೆ

10:20 PM Dec 21, 2019 | mahesh |

ಕಾಸರಗೋಡು: ಮೂರು ತಿಂಗಳು ನಿರಂತರವಾಗಿ ರೇಶನ್‌ ಸಾಮಾಗ್ರಿಗಳನ್ನು ಖರೀದಿಸದ ಆದ್ಯತೆ ವಿಭಾಗಕ್ಕೆ ಸೇರಿದ ಕುಟುಂಬಗಳನ್ನು ಸಾರ್ವ ತ್ರಿಕ ವಿಭಾಗಕ್ಕೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಯನ್ನು ಸಕ್ರಿಯಗೊಳಿಸಲಾಗಿದೆ. ಇದರಂತೆ 36,826 ಕುಟುಂಬ ಗಳನ್ನು ಆದ್ಯತೆ ಯಾದಿಯಿಂದ ಕೈಬಿಡಲಾಗಿದೆ.

Advertisement

ಡಿಸೆಂಬರ್‌ ತಿಂಗಳ 19ರ ವರೆಗ ಆದ್ಯತೆ ಯಾದಿಯ ಲ್ಲಿದ್ದ 36,826 ಕುಟುಂಬಗಳನ್ನು ಹಾಗು ಸಾರ್ವತ್ರಿಕ ವಿಭಾಗ (ಸಬ್ಸಿಡಿ)ಕ್ಕೆ ಸೇರಿದ್ದ (ನೀಲಿ ಕಾರ್ಡ್‌) 2258 ಕುಟುಂಬಗಳನ್ನು ಸಾರ್ವತ್ರಿಕ ವಿಭಾಗಕ್ಕೆ ಸೇರ್ಪಡೆಗೊಳಿಸಲಾಯಿತು. ತಿರುವನಂತಪುರ ಜಿಲ್ಲೆ ಯಲ್ಲಿ ಅತೀ ಹೆಚ್ಚಿನ ಕುಟುಂಬಗಳನ್ನು ಆದ್ಯತೆ ಯಾದಿಯಿಂದ ಸಾರ್ವತ್ರಿಕ ರೇಶನ್‌ ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ತಿರುವನಂತಪುರದಲ್ಲಿ 5881 ಕುಟುಂಬಗಳನ್ನು ಆದ್ಯತೆಯಿಂದ ಕೈಬಿಡ ಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ 4588 ಕುಟುಂಬ ಗಳನ್ನು ಆದ್ಯತೆ ಯಾದಿಯಿಂದ ಹೊರಹಾಕಲಾಗಿದ್ದು, ತಿರುವನಂತಪುರ ಜಿಲ್ಲೆಯ ಬಳಿಕ ಎರಡನೇ ಸ್ಥಾನದ ಲ್ಲಿದೆ. ಅತ್ಯಂತ ಕಡಿಮೆ ವಯನಾಡು ಜಿಲ್ಲೆಯಲ್ಲಿ 737 ಕುಟುಂಬಗಳನ್ನು ಆದ್ಯತೆ ಯಾದಿಯಿಂದ ಕೈಬಿಡಲಾಗಿದೆ.

ಅತ್ಯಧಿಕ ನೀಲ ರೇಶನ್‌ ಕಾರ್ಡ್‌ ವಿಭಾಗಕ್ಕೆ ಸೇರಿದ 656 ಮಂದಿ ಕಣ್ಣೂರು ಜಿಲ್ಲೆಯಿಂದ ಆದ್ಯತೆ ಯಾದಿಯಿಂದ ಹೊರ ದಬ್ಬಲಾಗಿದೆ. ಇಡುಕ್ಕಿಯಲ್ಲಿ ಇಂತಹ 606, ಮಲಪ್ಪುರದಲ್ಲಿ 513 ಕುಟುಂಬಗಳು ಆದ್ಯತೆ ಯಾದಿಯಿಂದ ಹೊರ ಹೋಗಿವೆ. ಈ ಯಾದಿಯಿಂದ ಹೊರ ಹೋದವರಿಗೆ ಬದಲಾಗಿ ಇತರ ರೇಶನ್‌ ಕಾರ್ಡ್‌ಗಳನ್ನು ಆದ್ಯತೆ ಯಾದಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ರೇಶನ್‌ ಅಂಗಡಿಗೆ ತೆರಳಿ ಸಾಮಾಗ್ರಿಗಳನ್ನು ಖರೀದಿಸಲು ಸಾಧ್ಯವಾಗದವರೂ ಇದ್ದು, ಅವರ ಸಾಮಾಗ್ರಿಗಳನ್ನು ಖರೀದಿಸಿ ನೀಡಲು ನೆರವಾಗಲು ಬದಲಿ ವ್ಯಕ್ತಿಯನ್ನು ಗುರುತಿಸಬೇಕೆಂದು ಆಹಾರ ಸಚಿವರಾದ ಪಿ.ತಿಲೋತ್ತಮನ್‌ ತಿಳಿಸಿದ್ದಾರೆ. ಇದಕ್ಕಾಗಿ “ಪ್ರೋಕ್ಸಿ’ ವ್ಯವಸ್ಥೆಯನ್ನು ಮಾಡಲಾಗುವುದು. ಬದಲಿಯಾಗಿ ನೋಂದಾಯಿಸುವ ವ್ಯಕ್ತಿಗೆ ಅದೇ ರೇಶನ್‌ ಅಂಗಡಿಗಳಲ್ಲಿ ರೇಶನ್‌ ಕಾರ್ಡ್‌ ಇರಬೇಕು. ಇದಕ್ಕಾಗಿ ಇಂತಹ ವ್ಯಕ್ತಿ ಹೆಸರು, ಆಧಾರ್‌ ಕಾರ್ಡ್‌, ಮೊಬೈಲ್‌ ಫೋನ್‌ ನಂಬ್ರಗಳ ಸಹಿತ ತಾಲೂಕು ನಾಗರಿಕ ಪೂರೈಕೆ ಕಚೇರಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು.

ರಾಜ್ಯದಲ್ಲಿ 2018 ಮೇ ತಿಂಗಳಲ್ಲಿ ಇ-ಫೋಸ್‌ ಮೆಶಿನ್‌ ಮೂಲಕ ರೇಶನ್‌ ವಿತರಣೆ ಆರಂಭಿಸಿದ ನಂತರ ಒಂದು ತಿಂಗಳ ಸರಾಸರಿ ರೇಶನ್‌ ವಿತರಣೆ ಶೇ.86.94 ಆಗಿದೆ. 2018 ರಲ್ಲಿ ಸಂಭವಿಸಿದ ನೆರೆ ಬಂದ ಸಂದರ್ಭದಲ್ಲಿ ಶೇ.90 ರಷ್ಟು ರೇಶನ್‌ ಸಾಮಾಗ್ರಿಗಳನ್ನು ವಿತರಿಸಲಾಗಿತ್ತು. ಸಾರ್ವತ್ರಿಕ ವಿಭಾಗಕ್ಕೆ ಸೇರಿದ ಸುಮಾರು 70 ಸಾವಿರ ಕುಟುಂಬಗಳು ಪ್ರಸ್ತುತ ರೇಶನ್‌ ಖರೀದಿಸುವುದಿಲ್ಲ.

Advertisement

ಸವಲತ್ತು ಲಭಿಸಿದವರೂ ಕೂಡಾ ರೇಶನ್‌ ಖರೀದಿಸದಿರುವುದರಿಂದ ಮುಂದಿನ ದಿನಗಳಲ್ಲಿ ಕೇಂದ್ರ ನೀಡುವ ರೇಶನ್‌ ಸಾಮಾಗ್ರಿಗಳ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆಯೆಂದು ಕೇರಳ ಸರಕಾರ ಆತಂಕಿತವಾಗಿದೆ. ರೇಶನ್‌ ಅಗತ್ಯವಿಲ್ಲದವರಿಗೆ “ಗೀವ್‌ ಅಪ್‌’ ವ್ಯವಸ್ಥೆಯನ್ನು ಆಹಾರ ಇಲಾಖೆ ಏರ್ಪಡಿಸಿದ್ದರೂ, ಈ ವ್ಯವಸ್ಥೆ ಬಗ್ಗೆ ರೇಶನ್‌ ಕಾರ್ಡ್‌ದಾರರಲ್ಲಿ ಆಸಕ್ತಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next