Advertisement

Karnataka: ರಾಜ್ಯಕ್ಕೆ 3,647 ಕೋಟಿ ರೂ. ವಿಶೇಷ ಅನುದಾನ

11:55 PM Jun 26, 2023 | Team Udayavani |

ಹೊಸದಿಲ್ಲಿ: ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ವಿಶೇಷ ನೆರವು ಯೋಜನೆಯಡಿ ಕೇಂದ್ರ ಸರಕಾರವು 16 ರಾಜ್ಯಗಳಿಗೆ 56,415 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಈ ಪೈಕಿ ಕರ್ನಾಟಕಕ್ಕೆ 3,647 ಕೋಟಿ ರೂ. ದೊರೆಯಲಿದೆ.

Advertisement

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಪ್ರಸಕ್ತ ಹಣಕಾಸು ವರ್ಷದ ಬಂಡವಾಳ ಹೂಡಿಕೆ ಪ್ರಸ್ತಾವಗಳಿಗೆ ಸೋಮವಾರ ಅನುಮೋದನೆ ನೀಡಿತು. ಆರೋಗ್ಯ, ಶಿಕ್ಷಣ, ನೀರಾವರಿ, ನೀರು ಸರಬರಾಜು, ವಿದ್ಯುತ್‌, ರಸ್ತೆ, ಸೇತುವೆಗಳು ಮತ್ತು ರೈಲ್ವೇ ಸಹಿತ ವಿವಿಧ ಕ್ಷೇತ್ರಗಳ ಬಂಡವಾಳ ಹೂಡಿಕೆ ಯೋಜನೆಗಳಿಗೆ ಈ ಮೊತ್ತ ಬಳಕೆಯಾಗಲಿದೆ. ಅಲ್ಲದೆ ಜಲಜೀವನ ಮಿಷನ್‌ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ ರಾಜ್ಯದ ಪಾಲನ್ನು ಭರಿಸಲೂ ಈ ಮೊತ್ತ ನೆರವಾಗಲಿದೆ. ಒಟ್ಟಿನಲ್ಲಿ ಈ ಎಲ್ಲ ವಲಯಗಳ ಯೋಜನೆಗಳಿಗೆ ವೇಗ ನೀಡುವುದು ಸರಕಾರದ ಉದ್ದೇಶವಾಗಿದೆ.

2023-24ರ ಕೇಂದ್ರ ಬಜೆಟ್‌ನಲ್ಲಿ  ಈ ಯೋಜನೆಯನ್ನು ಘೋಷಿಸಲಾಗಿತ್ತು. ಅದರಂತೆ 50 ವರ್ಷಗಳ ಬಡ್ಡಿರಹಿತ ಸಾಲದ ರೂಪದಲ್ಲಿ ರಾಜ್ಯಗಳಿಗೆ ಈ ವಿಶೇಷ ನೆರವನ್ನು ಕೇಂದ್ರ ಸರಕಾರ ನೀಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next