Advertisement
ತೋಕೂರು ರೈಲು ನಿಲ್ದಾಣದಿಂದ ಗುಲ್ಬರ್ಗ ದಲ್ಲಿರುವ ಆಲ್ಟ್ರಾಟೆಕ್ ಸಿಮೆಂಟ್ ಕಂಪೆನಿಗೆ ಪ್ರಥಮ ಸಾಗಾಟಕ್ಕೆ ಸಂಸ್ಥೆಯ ಚೀಫ್ ವಿಜಿಲೆನ್ಸ್ ಅಧಿಕಾರಿ ರಾಜೀವ್ ಕುಶ್ವಾ ಚಾಲನೆ ನೀಡಿದರು. ಪ್ರಾಜೆಕ್ಟ್ ವಿಭಾಗದ ಜಿಜಿಎಂ ರಾಮಕೃಷ್ಣ, ತಾಂತ್ರಿಕ ವಿಭಾಗದ ಜಿಜಿಎಂ ಎಸ್‌ಪಿ ಕಾಮತ್, ಮಾರುಕಟ್ಟೆ ವಿಭಾಗದ ಜಿಜಿಎಂ ಎಚ್.ಸಿ. ಸತ್ಯನಾರಾಯಣ, ಸಿಜಿಎಂ ಕೃಷ್ಣ ಹೆಗ್ಡೆ, ದರ್ಶನ್ ಠಾಕೂರ್ ಉಪಸ್ಥಿತರಿದ್ದರು.
ಪೆಟ್ ಕೋಕ್ ಲೋಡಿಂಗ್‌ಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಅತೀ ವೇಗದಲ್ಲಿ ಮಾಲಿನ್ಯ ವಿಲ್ಲದೆ ವ್ಯಾಗನ್ ಗಳಿಗೆ ತುಂಬಿಸಬಹುದಾಗಿದೆ. ನಿಗದಿತ ಸಮಯ ದಲ್ಲಿ ಪೆಟ್ ಕೋಕ್ ನಿಗದಿತ ಕಂಪೆನಿ ಗಳಿಗೆ ತಲುಪಲು ಇದರಿಂದ ಸಾಧ್ಯವಾಗಲಿದೆ. ಒಂದು ಟ್ರಕ್ ಮೂಲಕ 16 ಟನ್ ಪೆಟ್ ಕೋಕ್ ಸಾಗಾಟ ಮಾಡಬಹುದಾದರೆ ರೈಲಿನ 59 ವ್ಯಾಗನ್ ಮೂಲಕ 36 ಸಾವಿರ ಟನ್ ಪೆಟ್ ಕೋಕ್ ಏಕಕಾಲಕ್ಕೆ ಸಾಗಾಟ ಮಾಡಬಹುದಾಗಿದೆ. ಇದು ಒಟ್ಟು 225 ಟ್ರಕ್‌ಗಳ ಓಡಾಟಕ್ಕೆ ಸಮಾನವಾಗಿದೆ. ರೈಲ್ವೇ ಸಂಪರ್ಕದಿಂದ ಸಾಗಾಟ ವೆಚ್ಚ, ಸಮಯ ಉಳಿಯಲಿದೆ. ಜತೆಗೆ ಹೆದ್ದಾರಿಗಳಲ್ಲಿ ಟ್ರಕ್ ಓಡಾಟ ಗಣನೀಯ ಕಡಿಮೆಯಾಗಲಿದೆ. ದೇಶಾದ್ಯಂತ ರೈಲ್ವೇ ಮೂಲಕ ಸಾಗಾಟಕ್ಕೆ ಒತ್ತು ನೀಡಿದರೂ ಸ್ಥಳೀಯವಾಗಿ ಕೆಲವು ಭಾಗಗಳಿಗೆ ಟ್ರಕ್ ಮೂಲಕ ಸಾಗಾಟ ಮುಂದುವರಿಯಲಿದೆ.