Advertisement

ಉತ್ತರ ಪ್ರದಲ್ಲಿ 36 ಗಂಟೆಗಳ ಸತತ ಅಧಿವೇಶನ

11:50 AM Oct 05, 2019 | sudhir |

ಲಖನೌ: ಮಹಾತ್ಮ ಗಾಂಧಿ 150ನೇ ಜಯಂತಿ ಅಂಗವಾಗಿ 36 ಗಂಟೆಗಳವರೆಗೆ ಸತತವಾಗಿ ಅಧಿವೇಶನವನ್ನು ಉತ್ತರ ಪ್ರದೇಶದಲ್ಲಿ ನಡೆಸಲಾಗಿದೆ. ಸುಮಾರು 100 ಕ್ಕೂ ಹೆಚ್ಚು ಬಿಜೆಪಿ ಶಾಸಕರು ಮತ್ತು ಮಂತ್ರಿಗಳು ಹಾಜರಿದ್ದು, ವಿವಿಧ ವಿಷಯಗಳ ಕುರಿತು ಅಧಿವೇಶನದಲ್ಲಿ ಮಾತನಾಡಿದರು. ಆದರೆ ವಿಪಕ್ಷಗಳು ಈ ವಿಶೇಷ ಅಧಿವೇಶನವನ್ನು ಧಿಕ್ಕರಿಸಿ, ಹಾಜರಾಗಲಿಲ್ಲ. ಒಟ್ಟು 400 ಸದಸ್ಯ ಬಲದ ವಿಧಾನಸಭೆಯಲ್ಲಿ 301 ಬಿಜೆಪಿ ಶಾಸಕರಿದ್ದಾರೆ. ಈ ಪೈಕಿ ಸುಮಾರು 100 ಬಿಜೆಪಿ ಶಾಸಕರು ಹಾಜರಿದ್ದರು. ಸಿಎಂ ಯೋಗಿ ಆದಿತ್ಯನಾಥ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಮನೆಗೆ ನಡೆದಿದ್ದಾರೆ.

Advertisement

ಬುಧವಾರ ಬೆಳಗ್ಗೆ 11ಕ್ಕೆ ಆರಂಭವಾದ ಅಧಿವೇಶನ ಗುರುವಾರ ರಾತ್ರಿಯವರೆಗೂ ನಡೆಯಿತು. ಕಾಂಗ್ರೆಸ್‌ ಈ ಅಧಿವೇಶನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದರೂ, ರಾಯ್‌ಬರೇಲಿ ಶಾಸಕಿ ಅದಿತಿ ಸಿಂಗ್‌ ಅಧಿವೇಶನಕ್ಕೆ ಹಾಜರಾಗಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next