ಡೆಹರಾಡೂನ್: ಗುಜರಾತ್ ನ ಮೊರ್ಬಿಯಲ್ಲಿ ತೂಗು ಸೇತುವೆ ದುರಂತ ಸಂಭವಿಸಿದ ಬೆನ್ನಲ್ಲೇ ಉತ್ತರಾಖಂಡದ ಸೇತುವೆಗಳ ಸುರಕ್ಷತಾ ಪರಿಶೋಧನೆಯಲ್ಲಿ 36 ಸೇತುವೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಕಂಡುಬಂದಿದೆ.
ಗುಜರಾತ್‌ನ ಮೋರ್ಬಿಯಲ್ಲಿ ಸೇತುವೆ ಕುಸಿದ ಹಿನ್ನೆಲೆಯಲ್ಲಿ ಪರಿಶೀಲನೆಗೆ ಆದೇಶಿಸಲಾಗಿದ್ದು, ಪೌರಿ ಜಿಲ್ಲೆಯಲ್ಲಿ ಅತಿ ಹೆಚ್ಚು 16 ಅಸುರಕ್ಷಿತ ಸೇತುವೆಗಳನ್ನು ಹೊಂದಿದೆ ಎಂದು ಇಲ್ಲಿನ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಡಬ್ಲ್ಯೂಡಿಯ ಸುರಕ್ಷತಾ ಲೆಕ್ಕಪರಿಶೋಧನಾ ವರದಿಯನ್ನು ಸಲ್ಲಿಸಿದ ತಕ್ಷಣವೇ, ಸೇತುವೆಗಳನ್ನು ದುರಸ್ತಿ ಮಾಡಲು ಅಥವಾ ಬದಲಾಯಿಸಲು ಇಲಾಖೆಯನ್ನು ಕೇಳುವ ಸರಕಾರಿ ಆದೇಶವನ್ನು ಹೊರಡಿಸಲಾಗಿದೆ.
ಪ್ರಯಾಣಿಕರು ಹೆಚ್ಚಾಗಿ ಬಳಸುವ ಸೇತುವೆಗಳ ಪುನರ್ನಿರ್ಮಾಣ ಅಥವಾ ಬದಲಾವಣೆಗೆ ಆದ್ಯತೆ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಮೊರ್ಬಿ ಘಟನೆಯ ನಂತರ, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮೂರು ವಾರಗಳಲ್ಲಿ ರಾಜ್ಯದ ಎಲ್ಲಾ ಸೇತುವೆಗಳ ಸುರಕ್ಷತಾ ಲೆಕ್ಕಪರಿಶೋಧನೆಯನ್ನು ನಡೆಸುವಂತೆ ಪಿಡಬ್ಲ್ಯೂಡಿಗೆ ಸೂಚಿಸಿದ್ದರು ಗುಜರಾತ್‌ನ ಮೊರ್ಬಿಯಲ್ಲಿನ ಮಚ್ಚು ನದಿಯ ಮೇಲಿನ ಬ್ರಿಟಿಷ್ ಕಾಲದ ಸೇತುವೆ ಅಕ್ಟೋಬರ್ 30 ರಂದು ಕುಸಿದಿತ್ತು.