Advertisement

3599 ಮರಗಳಿಗೆ ಕೊಡಲಿ?

10:38 AM Dec 28, 2019 | Team Udayavani |

ಬೆಂಗಳೂರು: ಮೆಟ್ರೋ ರೈಲು ನಿಗಮವು ತನ್ನ ವ್ಯಾಪ್ತಿಯಲ್ಲಿ ಹೊಸ ರೈಲು ಯೋಜನೆ, ರಸ್ತೆ ವಿಸ್ತರಣೆ ಸೇರಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುವ ಉದ್ದೇಶದಿಂದ ನಗರ ದಲ್ಲಿ 3,559 ಮರಗಳನ್ನು ಕಡಿಯಲು ಮುಂದಾಗಿದೆ.

Advertisement

ಯು.ಎಂ.ಕಾವಲ್‌ನಲ್ಲಿನ ಮೆಟ್ರೋ ಕಾಮಗಾರಿ, ಕಗ್ಗಲಿಪುರ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ನೈಸ್‌ ರಸ್ತೆ-ಮಾಗಡಿ ರಸ್ತೆ ಸಂಪರ್ಕ ರಸ್ತೆ ನಿರ್ಮಾಣ, ಕಾಡುಗೋಡಿಯಲ್ಲಿ ಮೆಟ್ರೋ ಕಾಮಗಾರಿ ಹಾಗೂ ಆನೇಕಲ್‌, ಯಲಹಂಕ, ಕೆ.ಆರ್‌.ಪುರ ವ್ಯಾಪ್ತಿಯಲ್ಲಿನ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಒಟ್ಟು 3,599 ಮರಗಳನ್ನು ಕಡಿಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಯೋಜನೆಗಳನ್ನು ಅನುಷ್ಠಾನ ಮಾಡುವ ಉದ್ದೇಶದಿಂದ ಕಡಿಯಲು ಉದ್ದೇಶಿಸಲಾಗಿರುವ ಮರಗಳಲ್ಲಿ ಕೆಲವು ಮರಗಳನ್ನು ಸ್ಥಳಾಂತರ ಮಾಡುವ ಬಗ್ಗೆಯೂ ಚಿಂತನೆ ನಡೆದಿದ್ದು, ಇದಕ್ಕಾಗಿ ಸರ್ಕಾರ ನೇಮಿಸಿರುವ ಮರ ತಜ್ಞರ ಸಮಿತಿಯ ಸದಸ್ಯರು ಯೋಜನೆ ನಡೆಯಲಿರುವ ಸ್ಥಳಕ್ಕೆ ತೆರಳಿ, ಅಲ್ಲಿರುವ ಮರಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಈ ವೇಳೆ ಮರಗಳ ಸದೃಢತೆಯನ್ನು ಪರೀಕ್ಷಿಸಲಾಗುತ್ತದೆ.

ಪರಿಶೀಲನೆ ಮಾಡಿದ ನಂತರ ಮರಗಳನ್ನು ಸ್ಥಳಾಂತರ ಮಾಡಲು ಸಾಧ್ಯವೇ ಎನ್ನುವ ಬಗ್ಗೆ ನಿರ್ಧರಿಸಲಾಗುತ್ತದೆ. ಮರಗಳ ಸ್ಥಳಾಂತರ ಮಾಡಲು ಸಾಧ್ಯವಾದರೆ (ಮರಗಳು ಸ್ಥಳಾಂತರ ಮಾಡಿದ ಮೇಲೂ ಸ್ವಸ್ಥವಾಗಿ ಬೆಳೆಯುವ ಅಥವಾ ಬದುಕುಳಿಯುವ ಸಾಧ್ಯತೆ ಇದ್ದರೆ) ಬೇರೆಡೆಗೆ ಸ್ಥಳಾಂತರಿಸುವಂತೆ ಬಿಬಿಎಂಪಿ ಅಥವಾ ಯೋಜನೆ ಜಾರಿಗೊಳಿಸುವ ಸಂಸ್ಥೆಗಳಿಗೆ ತಿಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2008-09ರಿಂದ 2016-17ರವರೆಗೆ ಮೆಟ್ರೋ, ಅಭಿವೃದ್ಧಿ ಕಾಮಗಾರಿ, ಸಾರ್ವಜನಿಕರಿಂದ ಮನವಿ ಸಲ್ಲಿಸಿರವುದು ಸೇರಿ ಇನ್ನಿತರ ಕಾರಣಗಳಿಗೆ 18 ಸಾವಿರ ಮರಗಳನ್ನು ಕಡಿಯಲಾಗಿದೆ. ಈಗ ರಸ್ತೆ ವಿಸ್ತರಣೆ, ಮೆಟ್ರೋ ಕಾಮಗಾರಿ, ಹೊಸ ರಸ್ತೆ ನಿರ್ಮಾಣ ಕಾಮಗಾರಿಗಳಿಗಾಗಿ 5 ಕಡೆ 3,559 ಮರಗಳನ್ನು ಕತ್ತರಿಸಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಹೇಳುವಂತೆ ಮೆಟ್ರೋ ಕಾಮಗಾರಿಗಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮೆಟ್ರೋ ಮಾರ್ಗ ಹಾದು ಹೋಗುವ ಜಾಗದಲ್ಲಿರುವ ಮರಗಳನ್ನು ಕಡಿಯುವುದಕ್ಕೆ ಅಥವಾ ಸ್ಥಳಾಂತರಿಸಲು ಅನುವು ಮಾಡಿಕೊಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಎಲ್ಲ ಮರಗಳನ್ನು ಸ್ಥಳಾಂತರ ಮಾಡುವ ಸಾಧ್ಯತೆಯೂ ಕಡಿಮೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next