ಹೆಣ್ಣು ಮಕ್ಕಳು, ಮಹಿಳೆಯರನ್ನು ಕಾಡುವ ಅಪೌಷ್ಟಿಕತೆ ಮತ್ತು ಮಹಿಳಾ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 2019-20ರ ಬಜೆಟ್‌ಗೆ ಹೋಲಿಸಿದರೆ ಈ ಸಾಲಿನ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ ಶೇ.14ರಷ್ಟು ಹೆಚ್ಚು ಅನುದಾನ ನೀಡಲಾಗಿದೆ.
ಅಪೌಷ್ಟಿಕಾಂಶ ತೊಲಗಿಸಲು 35,600 ಕೋಟಿ ರೂ.: ಅಪ್ರಾಪ್ತ ವಯಸ್ಸಿನ ಬಾಲಕಿಯರು, ಗರ್ಭಿಣಿಯರು ಮತ್ತು ಹಾಲುಣಿಸುವ ಮಹಿಳೆಯರು ಎದುರಿಸುವ ಪ್ರಮುಖ ಸಮಸ್ಯೆ ಯೇ ಪೌಷ್ಟಿಕಾಂಶ ಕೊರತೆ. ಮಹಿಳೆ ಮತ್ತು ಮಕ್ಕಳ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವ ಸರ್ಕಾರ ಅಪೌಷ್ಟಿಕತೆ ಕೊನೆ ಗಾಣಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಗಳನ್ನು ರೂಪಿಸಿದೆ.
ಈ ಸಾಲಿನ ಬಜೆಟ್‌ನಲ್ಲಿ 35,600 ಕೋಟಿ ರೂ.ಗಳನ್ನು ಅಪೌಷ್ಟಿಕಾಂಶ ಕೊರತೆ ನೀಗಿಸಲು ತೆಗೆದಿರಿ ಸಿದೆ. 2017-18ರ ಸಾಲಿನ ಬಜೆಟ್‌ನಲ್ಲಿ ರೂಪಿಸಲಾಗಿದ್ದ “ಪೋ ಷಣೆ ಅಭಿಯಾನ’ದಲ್ಲಿ ಆರೋಗ್ಯ ದ ಕುರಿತು ಬೆಳಕು ಚೆಲ್ಲಿದ ಅವರು, “6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್ ಫೋನ್‌ಗಳಲ್ಲಿ ಸುಮಾರು 10 ಕೋಟಿ ಕುಟುಂಬ ಗಳ ಪೌಷ್ಟಿಕಾಂಶ ಮಟ್ಟವನ್ನು ಅಪ್‌ಲೋಡ್ ಮಾ ಡು ತ್ತಿದ್ದಾರೆ. ಮಹಿಳಾ ಪೋಷಣೆ ನಿಟ್ಟಿನಲ್ಲಿ ಗುರು ತರ ಅಭಿವೃದ್ಧಿ ಸಾಧಿಸಲಾಗಿದೆ’ ಎಂದಿದ್ದಾರೆ.
ಮಹಿಳಾ ಕೇಂದ್ರಿತ ಕಾರ್ಯಕ್ರಮಗಳಿಗೆ 28,600 ಕೋಟಿ ರೂ.: ಅಪ್ರಾಪ್ತ ವಯಸ್ಸಿನಲ್ಲಿ ತಾಯಿಯಾಗುವುದು ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ ಗಳಲ್ಲಿ ಒಂದು. ತಾಯ್ತನಕ್ಕೆ ಕನಿಷ್ಠ ವಯಸ್ಸು ನಿಗದಿಪಡಿಸುವುದು ಸೇರಿ, ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆ ಯಲು ಮತ್ತು ಉದ್ಯೋಗ ಪಡೆಯಲು ಇರುವ ಅವಕಾಶಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲಾಗುತ್ತದೆ. 6 ತಿಂಗಳ ಒಳಗೆ ಅದು ವರದಿ ನೀಡಲಿದೆ. ಈ ಯೋಜನೆ ಸೇರಿ ಹಲವು ಮಹಿಳಾ ಕೇಂದ್ರಿತ ಕಾರ್ಯಕ್ರಮ ಗಳಿಗಾಗಿ 28,600 ಕೋಟಿ ಇರಿಸಲಾಗಿದೆ.
4,036 ಕೋಟಿ ರೂ. ಪೌಷ್ಟಿಕಾಂಶ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ
385 ಕೋಟಿ ರೂ. “ಒನ್ ಸ್ಟಾಪ್ ಸೆಂಟರ್’ ಯೋಜನೆ
2,500 ಕೋಟಿ ರೂ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ
1,500 ಕೋಟಿ ರೂ. ಮಕ್ಕಳ ಅಭ್ಯುದಯ ಸೇವೆ
220 ಕೋಟಿ ರೂ. ಬೇಟಿ ಬಚಾವೊ ಬೆೇಟಿ ಪಡಾವೊ ಯೋಜನೆ
100 ಕೋಟಿ ರೂ. ಮಹಿಳಾ ಶಕ್ತಿ ಕೇಂದ್ರಗಳಿಗೆ
1,163 ಕೋಟಿ ರೂ. ಮಹಿಳಾ ರಕ್ಷಣೆ ಮತ್ತು ಸಬಲೀಕರಣ