Advertisement

3.56 ಲಕ್ಷ ರೂ. ಉಳಿತಾಯ ಬಜೆಟ್‌

11:18 AM Mar 09, 2019 | |

ಬಸವನಬಾಗೇವಾಡಿ: ಕೋಲ್ಹಾರ ಪಟ್ಟಣದ ಪಪಂ ಸಭಾಂಗಣದಲ್ಲಿ ಶುಕ್ರವಾರ ಜರುಗಿದ 2019-20ನೇ ಸಾಲಿನ ಬಜೆಟ್‌ ಮಂಡನಾ ಸಭೆಯಲ್ಲಿ ಪಪಂ ಆಡಳಿತಾಧಿಕಾರಿ ಪ್ರೇಮಸಿಂಗ್‌ ಪವಾರ 3.56 ಲಕ್ಷ ರೂ. ಉಳಿತಾಯ ಬಜೆಟ್‌ ಮಂಡಿಸಿದರು. ವಿವಿಧ ಮೂಲಗಳಿಂದ 5.19 ಕೋಟಿ ರೂ. ಬರಲಿದೆ. ಅದರಲ್ಲಿ ಒಟ್ಟು 5.16 ಕೋಟಿ ರೂ. ಖರ್ಚು ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

Advertisement

ಪಟ್ಟಣದ ವಿವಿಧ ಸಮುದಾಯ ಭವನ ಹಾಗೂ ಕಚೇರಿ ಕಟ್ಟಡಗಳ ನಿರ್ಮಾಣಕ್ಕಾಗಿ 10 ಲಕ್ಷ, ರಸ್ತೆಗಳ ಕಲ್ಲು ಹಾಸಿಗೆ ಮತ್ತು ಪಾದಚಾರಿ ಮಾರ್ಗಕ್ಕಾಗಿ 2.70 ಲಕ್ಷ, ಬೀದಿ ದೀಪಗಳಿಗಾಗಿ 8 ಲಕ್ಷ, ಮಳೆ ನೀರಿನ ಚರಂಡಿಗಳು ಹಾಗೂ ತೆರೆದ ಚರಂಡಿಗಳು ಸಣ್ಣ ಸೇತುವೆ ಮಾರ್ಗಗಳ ನಿರ್ಮಾಣಕ್ಕಾಗಿ 20 ಲಕ್ಷ, ಕುಡಿವ ನೀರು ಸರಬರಾಜಿಗಾಗಿ 20 ಲಕ್ಷ, ಉದ್ಯಾನ ನಿರ್ಮಾಣಕ್ಕಾಗಿ 3.34 ಲಕ್ಷ, ಸಿಡಿ ನಿರ್ಮಾಣಕ್ಕಾಗಿ 4.40 ಲಕ್ಷ ಕಚೇರಿ ಉಪಕರಣಗಳ
ಖರೀದಿಗಾಗಿ 2 ಲಕ್ಷ ಹಣ ಪಟ್ಟಣದ ಮುಖ್ಯರಸ್ತೆಗಳು ಹಾಗೂ ಚರಂಡಿಗಳ ಅಭಿವೃದ್ಧಿ ಪಡಿಸುವುದು ಹಾಗೂ ಬೀದಿ ದೀಪಗಳ ಅಳವಡಿಸುವುದಕ್ಕಾಗಿ 20 ಲಕ್ಷ ಕಾಯ್ದಿರಿಸಲಾಗಿದೆ.
 
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಕಲ್ಯಾಣ ನಿಧಿಗಾಗಿ 20 ಲಕ್ಷ, ವಾರ್ಡ್‌ 1 ರಿಂದ 17ರಲ್ಲಿ ಬರುವ ರಸ್ತೆಗಳನ್ನು ಅಭಿವೃದ್ಧಿ ಮಾಡುವುದಕ್ಕಾಗಿ 2.70 ಲಕ್ಷ, ಬೀದಿ ದೀಪಗಳಿಗಾಗಿ 8 ಲಕ್ಷ ಹಾಗೂ ಪಟ್ಟಣದಲ್ಲಿರುವ ಸಾರ್ವಜನಿಕರಿಗೆ ವೈಯಕ್ತಿಕ ಶೌಚಾಲಯ ಇಲ್ಲದವರಿಗೆ
ಶೌಚಾಲಯ ನಿರ್ಮಿಸಲು ಸಹಾಯ ಧನ ನೀಡುವದಕ್ಕಾಗಿ 10 ಲಕ್ಷ, ಸ್ವತ್ಛ ಭಾರತ ಮಿಷನ್‌ಗಾಗಿ 10 ಲಕ್ಷ, ಸ್ಮಶಾನ ಅಭಿವೃದ್ಧಿಗೆ 3.56 ಲಕ್ಷ, ಸ್ಥಾವರ ಮತ್ತು ಯಂತ್ರೋಪಕರಣಗಳ ಖರೀದಿಗಾಗಿ 20 ಲಕ್ಷ, ವಾಹನಗಳ ಖರೀದಿಗಾಗಿ 10 ಲಕ್ಷ, ಸಮುದಾಯ ಶೌಚಾಲಯಗಳ ನಿರ್ಮಾಣಕ್ಕಾಗಿ 25 ಲಕ್ಷ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಹಣ ಕಾಯ್ದಿರಿಸಲಾಗಿದೆ ಎಂದು ಪವಾರ ವಿವರಿಸಿದರು.

ಸಭೆಯಲ್ಲಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು. ಕೆಲ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು. ಸಭೆಯಲ್ಲಿ ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಪಪಂ ಸದಸ್ಯರಾದ ಕಲ್ಲಪ್ಪ ಸೊನ್ನದ, ಬನ್ನೆಪ್ಪ ಬಾಳಗೊಂಡ, ಬೋರವ್ವ ತುಂಬರಮಟ್ಟಿ, ಈರಣ್ಣ ಗಿಡ್ಡಪಗೊಳ, ಅಲ್ಲಾಬಾಕ್‌ ಬಿಜಾಪುರ, ಎಸ್‌.ಬಿ. ಕಂಕರಪೀರ್‌, ವೈ.ಎಸ್‌. ವಾಲೀಕಾರ, ವಿಕ್ರಂ ಭಾರತಕರ, ಎಸ್‌.ಪಿ. ಪೂಜಾರಿ ಸೇರಿದಂತೆ ಅನೇಕರು ಇದ್ದರು.
ಶಿವಾನಂದ ಮರಳಿ, ಸಿದ್ದು ಮುರಾಳ, ಮಲ್ಲು ಬ್ಯಾಲ್ಯಾಳ, ಶ್ರೀಶೈಲ ಬ್ಯಾಳಾಳ, ಗೌಡಪ್ಪ ಕಾರಜೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next