ತಮಿಳುನಾಡು: ಮೀನುಗಾರಿಕೆಗೆ ತೆರಳಿ ಬ್ರಿಟನ್ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ತಮಿಳುನಾಡಿನ 35 ಮೀನುಗಾರರನ್ನು ಸೋಮವಾರ ಭಾರತೀಯ ಕೋಸ್ಟ್ ಗಾರ್ಡ್‌ಗೆ ಹಸ್ತಾಂತರಿಸಲಾಯಿತು.
ಕಳೆದ ಸೆಪ್ಟೆಂಬರ್ 29 ರಂದು ತಮಿಳುನಾಡಿನ ಮೀನುಗಾರರು ಹಿಂದೂ ಮಹಾಸಾಗರದ ಕರಾವಳಿಯಿಂದ ಸುಮಾರು 230 ನಾಟಿಕಲ್ ಮೈಲುಗಳಷ್ಟು ಆಳ ಸಮುದ್ರದ ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಬ್ರಿಟನ್ ಹಡಗು ಗ್ರಾಮ್ಪಿಯನ್ ಎಂಡ್ಯೂರೆನ್ಸ್‌ನಿಂದ ತಮಿಳುನಾಡಿನ ಮೀನುಗಾರರನ್ನು ಬಂಧಿಸಿತ್ತು.
ಎರಡು ಬೋಟ್ ಗಳಲ್ಲಿ ಮೀನುಗಾರಿಕೆಗೆ ತೆರಳಿದ್ದ ತಮಿಳುನಾಡಿನ ಮೀನುಗಾರರಿಗೆ ಬ್ರಿಟನ್ ನೌಕಾಪಡೆ ಪ್ರತಿ ಹಡಗಿಗೆ ತಲಾ 25,000 ಬ್ರಿಟಿಷ್ ಪೌಂಡ್‌ಗಳಷ್ಟು ದಂಡ ವಿಧಿಸಿದೆ. ಈ ವೇಳೆ ದಂಡ ಪಾವತಿಸದ ಕಾರಣ ಒಂದು ಹಡಗನ್ನು ವಶಪಡಿಸಿಕೊಳ್ಳಲಾಗಿದ್ದು, ಇದೀಗ ಸುಮಾರು ಒಂದು ತಿಂಗಳ ಬಳಿಕ ದಂಡ ಕಟ್ಟಿದ ಕರಾವಳಿ ರಕ್ಷಣಾ ಪಡೆ ಬ್ರಿಟನ್ ವಶದಲ್ಲಿದ್ದ 35 ಮೀನುಗಾರರನ್ನು ಬಿಡುಗಡೆಗೊಳಿಸಿದೆ.
ಬಿಡುಗಡೆಯಾದ 36 ಮೀನುಗಾರರನ್ನು ಕೇರಳದ ಮಿಝಿಂಜಂ ಲೈಟ್ಹೌಸ್ ಬಳಿ ಕರೆತಂದಿದ್ದು, ಮೀನುಗಾರರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ತಮಿಳುನಾಡಿನ ತೆಂಗೈಪಟ್ಟಣಂಗೆ ಸುರಕ್ಷಿತವಾಗಿ ಹಸ್ತಾಂತರ ಮಾಡಲಾಗುತ್ತದೆ ಎಂದು ರಕ್ಷಣಾ ಪಡೆ ತಿಳಿಸಿದೆ.
ಇದನ್ನೂ ಓದಿ: ICMR: ಯುವಕರ ಹಠಾತ್ ಸಾವಿಗೆ ಕೋವಿಡ್ ಲಸಿಕೆ ಕಾರಣವಲ್ಲ… ಐಸಿಎಂಆರ್ ವರದಿ