ಸಂಗ್ರಹದಲ್ಲಿ ಶೇ.35 ಹೆಚ್ಚಳವಾಗಿದೆ. ಮುದ್ರಾಂಕ ಮತ್ತು ನೋಂದಣಿ ಹಾಗೂ ಮೋಟಾರು ವಾಹನ ತೆರಿಗೆಯಲ್ಲಿ ಏರಿಕೆ ಕಾಣದೆ ಚಿಂತೆಗೊಳ ಗಾಗಿದ್ದ ಹಣಕಾಸು ಇಲಾಖೆಗೆ ವಾಣಿಜ್ಯ ತೆರಿಗೆ ಆಗಸ್ಟ್ ತಿಂಗಳಲ್ಲಿ ಒಟ್ಟಾರೆ 3,884.37 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿರುವುದ ರಿಂದ ಆಶಾದಾಯಕ ಬೆಳವಣಿಗೆಯಾಗಿದೆ.
Advertisement
ಜುಲೈ ಮಾಹೆಗೆ ಆಗಸ್ಟ್‌ನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.35 ಹೆಚ್ಚಳಗೊಂಡಿದ್ದು ಇದು ಉದ್ಯಮ ಹಾಗೂ ಕೈಗಾರಿಕೆ ವಲಯ ಯಥಾಸ್ಥಿತಿಗೆ ಬರುತ್ತಿರುವ ಲಕ್ಷಣ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ 1544,73 ಕೋಟಿ ರೂ. ಸಂಗ್ರಹವಾಗಿದ್ದ ಜಿಎಸ್‌ಟಿ ಜುಲೈ ತಿಂಗಳ ವೇಳೆಗೆ 3,884.37 ಕೋಟಿ ರೂ. ತಲುಪಿದ್ದು, ಮೂರನೇ ಅಲೆಎದುರಾಗದಿದ್ದರೆವಾಣಿಜ್ಯ ತೆರಿಗೆವಲಯದಿಂದ ಬಜೆಟ್‌ನ ನಿರೀಕ್ಷಿತ ಪ್ರಮಾಣದ ಸಂಪನ್ಮೂಲ ಕ್ರೋಢೀಕರಣವಾಗಲಿದೆ ಎಂದು ಹೇಳಲಾಗಿದೆ.
Related Articles
Advertisement
ಈ ಮಧ್ಯೆ, ಆಗಸ್ಟ್ ತಿಂಗಳಲ್ಲಿ ಅಬಕಾರಿ ವಲಯದಿಂದ 2067.15 ಕೋಟಿ ರೂ. ಸಂಗ್ರಹವಾಗಿದ್ದು ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ 235.76 ಲಕ್ಷ ರೂ. ತೆರಿಗೆ ಸಂಗ್ರಹ ಹೆಚ್ಚಳಗೊಂಡಿದೆ. ಇದರಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐದು ತಿಂಗಳಲ್ಲಿ ಅಬಕಾರಿ ನಿಂದ 10,197.62 ಕೋಟಿ ರೂ. ಆದಾಯ ಬಂದಂತಾಗಿದೆ. 2021-22 ನೇ ಸಾಲಿನ ಬಜೆಟ್‌ನಲ್ಲಿ 24,580 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು.
ಲಾಕ್‌ಡೌನ್ ನಂತರ ವ್ಯಾಪಾರ-ವಹಿವಾಟು ಯಥಾಸ್ಥಿತಿಯಂತಾಗಲು ಎಷ್ಟು ದಿನ ಬೇಕಾಗ ಬಹುದೋ ಎಂಬ ಆತಂಕ ಇತ್ತಾದರೂ ಆಗಸ್ಟ್ನಲ್ಲಿಸಂಗ್ರಹವಾಗಿರುವ ಸರಕು ಮತ್ತು ಸೇವಾ ತೆರಿಗೆ ಹೊಸ ಭರವಸೆ ಮೂಡಿಸಿದೆ. ಮಾರುಕಟ್ಟೆ ಚೇತರಿಕೆ ಕಾಣುತ್ತಿದೆ ಎಂಬುದರ ಸಂಕೇತವಿದು.
– ಬಿ.ಟಿ.ಮನೋಹರ್, ಜಿಎಸ್‌ಟಿಸಲಹಾ ಮಂಡಳಿ ಸದಸ್ಯರು – ಎಸ್. ಲಕ್ಷ್ಮಿ ನಾರಾಯಣ