ಸುರತ್ಕಲ್: ಶಾಸಕನಾಗಿ ಸಿಎಂ ಸಿದ್ದರಾಮಯ್ಯ ಅವರಿಂದ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ 23 ವಾರ್ಡ್ ಗಳಿಗೆ ಪ್ರತೀ ವರ್ಷ ತಲಾ 5 ಕೋ.ರೂ., ಕೊನೆಯ ವರ್ಷದಲ್ಲಿ 10 ಕೋ.ರೂ. ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. 25 ವರ್ಷಗಳಿಂದ ನಗರ ಪ್ರದೇಶದಲ್ಲಿ ಸ್ವಂತ ಸೂರಿಗಾಗಿ ಕನಸು ಹೊಂದಿದ್ದ 9 ಸಾವಿರಕ್ಕೂ ಅ ಧಿಕ ಬಡ ಕುಟುಂಬಗಳಿಗೆ 94ಸಿಸಿ ಅಡಿ ಹಕ್ಕು ಪತ್ರ ನೀಡುವಲ್ಲಿ ಯಶ ಕಂಡಿದ್ದೇನೆ. ಇದು ಕಾಂಗ್ರೆಸ್ ಆಡಳಿತದಲ್ಲಿ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಮೊದಿನ್ ಬಾವಾ ಹೇಳಿದರು.
ಸುರತ್ಕಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುರತ್ಕಲ್ ಕಾನ ಬಾಳ ರಸ್ತೆ ಅಗಲಗೊಳಿಸಲು 58 ಕೋ.ರೂ. ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಅನುಮತಿ ಲಭಿಸಿತ್ತು. ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಕೂಡ ಕರೆಯಲಾಗಿತ್ತು. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರದಿದ್ದರೂ ನಾನು ಶ್ರಮಪಟ್ಟು ಅನುದಾನ ತಂದಿದ್ದರೂ ಈಗ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಅವರು ಆರೋಪಿಸಿದರು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸುರತ್ಕಲ್‌ನಲ್ಲಿ ಹಳೆ ಮಾರುಕಟ್ಟೆ ಪ್ರದೇಶವು ಜೋಪಡಿಯಂತೆ ಕಾಣುತ್ತಿತ್ತು. ಈಗ ರಾಜ್ಯಕ್ಕೇ ಅತ್ಯುತ್ತಮವಾದ ಮಾರುಕಟ್ಟೆ ನಿರ್ಮಾಣವಾಗುತ್ತಿದೆ. 10 ಕೋ.ರೂ.ಗಿಂತ ಹೆಚ್ಚು ಅನುದಾನ ಸಿಗದಿದ್ದರೂ ನನ್ನ ಪ್ರಥಮ ಹಂತದಲ್ಲಿ 72 ಕೋ.ರೂ. ತರಲಾಗಿದೆ.
ಇದನ್ನು ಸ್ಥಳಾಂತರಿಸಬಾರದು, ಅಭಿವೃದ್ಧಿ ಮಾಡಬಾರದು ಎಂದು ಬಿಜೆಪಿ ಪ್ರತಿಭಟನೆ ಮಾಡಿತ್ತು. ರಸ್ತೆ ಅಗಲ ಸಂದರ್ಭದಲ್ಲೂ ವಿರೋಧಿಸಿತ್ತು. ಆದರೆ ಇಂದು ಇದೇ ರಸ್ತೆ ರಾಜಮಾರ್ಗವಾಗಿ ಕಂಗೊಳಿಸುತ್ತಿದೆ. ಪ್ರತೀ ವಾರ್ಡ್‌ನಲ್ಲೂ ಮಾರುಕಟ್ಟೆ ತಲೆ ಎತ್ತಿದೆ. ನಗರದ ಪ್ರತೀ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಅಂಬೇಡ್ಕರ್ ಭವನ, ಸಮುದಾಯ ಭವನ, ಎಲ್ಲ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ತರಿಸಿಕೊಡುವಲ್ಲಿ ಸಫಲನಾಗಿದ್ದೇನೆ. ಗ್ರಾಮಾಂತರ ಪ್ರದೇಶವೂ ಅಭಿವೃದ್ಧಿ ಹೊಂದಿ ಒಳ ರಸ್ತೆಗಳೂ ಕಾಂಕ್ರೀಟ್, ಡಾಮರ್ ಕಂಡಿವೆ ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಯಾಗಿದ್ದಾಗ ಅನುದಾನ ನೀಡಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಈ ಹಣವನ್ನು ತಿಜೋರಿಯಲ್ಲಿರಿಸಿದ್ದು ಯಾಕೆ ಎಂದು ಪ್ರಶ್ನಿಸಿದ ಬಾವಾ, ನಾನು ಶ್ರಮಪಟ್ಟು ಯೋಜನೆ ರೂಪಿಸಿ ಹಣ ಸದ್ಬಳಕೆ ಮಾಡಿದ್ದೇನೆ ಎಂದರು. 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ನಗರ ಹೇಗೆ ಅಭಿವೃದ್ಧಿ ಹೊಂದಿತ್ತು ಎಂಬುದನ್ನು ಜನತೆ ಮರೆತಿಲ್ಲ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಿ ಅ ಧಿಕಾರ ವಹಿಸಿ ಕೊಳ್ಳಲಿದೆ. ಜನತೆ ಕಾಂಗ್ರೆಸ್ಸನ್ನು ಆಶೀರ್ವದಿಸಲಿ ದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.