ಬಳ್ಳಾರಿ: ಹೂವಿನ ಹಡಗಲಿಯಲ್ಲಿ ಮೆಕ್ಕೆ ಜೋಳದ ಬೆಳೆಗೆ ವಿಷ ಸಿಂಪಡಿಸುವ ಮೂಲಕ 35 ಕ್ಕೂ ಹೆಚ್ಚು ಗೂಳಿಗಳ ಮಾರಣಹೋಮ ನಡೆಸಿರುವ ಘಟನೆ ಗುರುವಾರ ನಡೆದಿದೆ.
ಹಿರೇಹಡಗಲಿ ಕಟ್ಟಿ ಮಸಾರಿ ಎಂಬಲ್ಲಿ ಮೆಕ್ಕೆ ಜೋಳದ ಜಮೀನಿನಲ್ಲಿ 28 ದೇಸಿ ತಳಿಯ ಗೂಳಿಗಳು ಸಾವನ್ನಪ್ಪಿದ್ದು, ಹಿರೇಮಲ್ಲನಕೇರಿ ಎಂಬಲ್ಲಿ 7 ಗೂಳಿಗಳು ವಿಷ ಸೇವಿಸಿ ದಾರುಣವಾಗಿ ಸಾವನ್ನಪ್ಪಿವೆ.
ದೇವರಿಗೆ ಹರಕೆ ರೂಪದಲ್ಲಿ ಬಿಟ್ಟ ಗಂಡು ಕರುಗಳು ಬೀಡಾಡಿ ಗೂಳಿಗಳಾಗಿ ಬೆಳೆದು ಹೊಲಕ್ಕೆ ಹಾನಿ ಮಾಡುತ್ತಿದ್ದವು. ಅವುಗಳನ್ನು ಹಿಡಿದು ಗೋಶಾಲೆಗಳಿಗೆ ಸಾಗಿಸಲು ತಾಲೂಕು ಆಡಳಿತ ನಡೆಸಿದ ಯತ್ನ ವಿಫಲವಾಗಿತ್ತು. ಈ ಹಿನ್ನಲೆಯಲ್ಲಿ ದಾರಿ ಕಾಣದಾಗದೆ ಬೆಳಗಳಿಗೆ ಫ್ರೀಡಾನ್ ವಿಷ ಸಿಂಪಡಿಸಿ ಮೂಕ ಪ್ರಾಣಿಗಳನ್ನು ಕೊಲ್ಲಲಾಗಿದೆ ಎಂದು ವರದಿಯಾಗಿದೆ.
ಗೂಳಿಗಳ ಸಾಮೂಹಿಕ ಹತ್ಯೆಯ ವಿಚಾರ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ರೈತರು, ಗೋಪ್ರೇಮಿಗಳು ಸ್ಥಳಕ್ಕಾಗಮಿಸಿ ಮರುಗುತ್ತಿದ್ದಾರೆ.
ಗೂಳಿಗಳು ವಿಷ ಸೇವನೆಯಿಂದ ಪ್ರಾಣೋತðಮಣ ಕಾಲದಲ್ಲಿ ತೀವ್ರ ನರಳಾಟ ನಡೆಸಿರುವುದು ಕಂಡು ಬಂದಿದೆ.
ವಿಷವಿಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ರೈತರು , ಸ್ಥಳೀಯರು ಆಗ್ರಹಿಸಿದ್ದಾರೆ.