Advertisement
ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ತಸ್ತಾವಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, 2018-19ನೇ ಮಾರ್ಚ್ ಅಂತ್ಯದ ವೇಳೆಗೆ ಸುಮಾರು 3 ಲಕ್ಷ ರೂ.ಗೂ ಅಧಿಕ ನೀರಿನ ಬಿಲ್ ಗ್ರಾ.ಪಂ.ಗೆ ಬರಲು ಬಾಕಿ ಇತ್ತು. ಹೊಸ ವರದಿ ವರ್ಷದಲ್ಲಿಯೂ ಹಳೆಯ ಬಾಕಿಯಲ್ಲದೆ ಇನ್ನಷ್ಟು ಲಕ್ಷ ರೂ.ಗಳು ಅದಕ್ಕೆ ಕೂಡಿಕೊಂಡಿವೆ ಎಂದರು.
ಈ ಬಗ್ಗೆ ಚರ್ಚೆ ನಡೆಸಿದ ಸದಸ್ಯರು, ಕುಡಿಯುವ ನೀರಿನ ಬಿಲ್ ಪಾವತಿಸದಿದ್ದರೆ ಗ್ರಾ.ಪಂ. ಆದಾಯಕ್ಕೆ ಪೆಟ್ಟು ಬೀಳುತ್ತದೆ. ಕುಡಿಯುವ ನೀರಿನ ಬಿಲ್ ಪಾವತಿಸದವರ ಬಗ್ಗೆ ಯಾವುದೇ ಮುಲಾಜು ಬೇಡ. ಅಂತಹವರ ನಳ್ಳಿ ಸಂಪರ್ಕವನ್ನೇ ಕಡಿತಗೊಳಿಸಬೇಕು ಎಂದರು. ಪಿಡಿಒ ಜಯಪ್ರಕಾಶ್ ಮಾತನಾಡಿ, ಲಕ್ಷಾಂತರ ರೂಪಾಯಿ ಕುಡಿಯುವ ನೀರಿನ ಬಿಲ್ ಬಾಕಿಯಿದ್ದರೂ ಗ್ರಾ.ಪಂ.ನ ಬಿಲ್ ವಸೂಲಿಗಾರರು ನೀಡುವ ಗ್ರಾ.ಪಂ.ಗೆ ಬರಬೇಕಾದ ನೀರಿನ ಬಿಲ್‌ನ ಲೆಕ್ಕ ಸಾವಿರದಲ್ಲಿದೆ. ಪಂಚಾಯತ್‌ನಲ್ಲಿರುವ ನೀರಿನ ಬಿಲ್ ವಸೂಲಾತಿಯ ಕಡತಕ್ಕೂ ಅವರು ನೀಡುವ ಪಟ್ಟಿಗೂ ತಾಳೆಯಾಗುತ್ತಲೇ ಇಲ್ಲ. ಇದೇ ಸರಿಯಿಲ್ಲದಾಗ ಕುಡಿಯುವ ನೀರಿನ ಗ್ರಾಹಕರ ಮೇಲೆ ಹೇಗೆ ಕ್ರಮ ತೆಗೆದುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
Related Articles
ಈ ಬಗ್ಗೆ ಕುಡಿಯುವ ನೀರಿನ ಬಿಲ್ ವಸೂಲಿಗಾರರನ್ನು ಸಭೆಯಲ್ಲಿ ಸದಸ್ಯರು ವಿಚಾರಿಸಿದರು. ಒಂದು ವಾರದೊಳಗೆ ಕುಡಿಯುವ ನೀರಿನ ಬಿಲ್ ಬಾಕಿ ಇರಿಸಿದವರ ಸಮರ್ಪಕ ಪಟ್ಟಿಯನ್ನು ನಮಗೆ ನೀಡಬೇಕು ಎಂದು ಗಡುವು ನೀಡಿ, ಸೆ. 16ರಂದು ಸದಸ್ಯರ ವಿಶೇಷ ಸಭೆ ಕರೆದು ಬಿಲ್ ವಸೂಲಿಗಾರರು ನೀಡಿದ ಪಟ್ಟಿ ಹಾಗೂ ಗ್ರಾ.ಪಂ.ನ ದಾಖಲೆ ಪರಿಶೀಲಿಸೋಣ. ಬಳಿಕ ಕುಡಿಯುವ ನೀರಿನ ಬಿಲ್ ಬಾಕಿಯಿಟ್ಟವರ ಮೇಲೆ ಯಾವ ಕ್ರಮ ಕೈಗೊಳ್ಳುವುದು? ಅದರ ವಸೂಲಾತಿ ಹೇಗೆ ಮಾಡುವುದು? ಎನ್ನುವುದನ್ನು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳೋಣ ಎಂದು ಒಮ್ಮತದ ಅಭಿಪ್ರಾಯಕ್ಕೆ ಸದಸ್ಯರು ಬಂದರು.
Advertisement
ಪೈಪ್ ದುರಸ್ತಿ: ಸದಸ್ಯರಿಗೆ ಹೊಣೆ
ಗ್ರಾ.ಪಂ. ವ್ಯಾಪ್ತಿಯಲ್ಲಿ ಕುಡಿ ಯುವ ನೀರಿನ ಸಂಪರ್ಕ ಪೈಪುಗಳು ಹಾನಿಗೀಡಾದಲ್ಲಿ ಸಣ್ಣ ಪುಟ್ಟ ದುರಸ್ತಿಯಿದ್ದರೂ ನೀರಗಂಟಿಗಳು ಮಾಡುತ್ತಿಲ್ಲ. ಒಂದೋ ಪೈಪ್‌ಗ್ಳ ದುರಸ್ತಿ ಕೆಲಸ ನೀರಗಂಟಿಗಳೇ ಮಾಡ ಬೇಕು. ಇಲ್ಲವೇ ಗ್ರಾ.ಪಂ. ವ್ಯಾಪ್ತಿಗೆ ಕುಡಿಯುವ ನೀರಿನ ಪೈಪ್ ದುರಸ್ತಿಗೆಂದೇ ವ್ಯಕ್ತಿಯನ್ನು ನೇಮಿಸಬೇಕು ಎಂದು ಸದಸ್ಯರು ಆಗ್ರಹಿಸಿ ದರು. ಈ ಬಗ್ಗೆ ಚರ್ಚೆಯಾಗಿ ಗ್ರಾ.ಪಂ.ನ ವ್ಯಾಪ್ತಿಯಲ್ಲಿ ಎಲ್ಲೇ ಪೈಪ್‌ಗ್ಳು ಹಾನಿಗೊಂಡರೂ ಅದನ್ನು ದುರಸ್ತಿ ಮಾಡಿಸುವ ಹೊಣೆಗಾರಿಕೆಯನ್ನು ಗ್ರಾ.ಪಂ. ಸದಸ್ಯ ಮೈಕಲ್ ವೇಗಸ್ ಅವರಿಗೆ ನೀಡಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ಅಸ್ಕರ್ ಅಲಿ, ಸದಸ್ಯರಾದ ಶೇಖಬ್ಬ ಎನ್., ಪ್ರಶಾಂತ, ಬಾಬು, ಮೈಕಲ್ ವೇಗಸ್, ಸತ್ಯವತಿ, ಅನಿ ಮಿನೇಜಸ್, ಕೃಷ್ಣವೇಣಿ, ಯಮುನಾ ಉಪಸ್ಥಿತರಿದ್ದರು.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ ವಂದಿಸಿದರು. ಸಿಬಂದಿ ಚಿತ್ರಾ ಸಹಕರಿಸಿದರು. ತ್ಯಾಜ್ಯ ನಿರ್ವಹಣೆ: ಅಧ್ಯಯನ ಪ್ರವಾಸ
ನೆಕ್ಕಿಲಾಡಿ ಗ್ರಾ.ಪಂ.ಗೆ ಘನತ್ಯಾಜ್ಯ ಘಟಕಕ್ಕಾಗಿ 20 ಲಕ್ಷ ರೂ. ಅನುಮೋದನೆ ಸಿಕ್ಕಿದೆ. ಸುವ್ಯವಸ್ಥಿತವಾಗಿ ಇಲ್ಲಿ ಘಟಕವನ್ನು ಸ್ಥಾಪಿಸುವುದಕ್ಕಾಗಿ ಸಮರ್ಪಕವಾಗಿ ಘನತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಇತರ ಗ್ರಾ.ಪಂ.ಗಳಿಗೆ ಭೇಟಿ ನೀಡಬೇಕಿದೆ. ಈ ಬಗ್ಗೆ ಆಸಕ್ತಿಯುಳ್ಳವರನ್ನು ಸೇರಿಸಿಕೊಂಡು ಗ್ರಾ.ಪಂ. ಸದಸ್ಯರು ಅಧ್ಯಯನ ಪ್ರವಾಸ ತೆರಳುವುದಾಗಿ ನಿರ್ಣಯಿಸಲಾಯಿತು.