Advertisement
ವಿವಿಧ ಇಲಾಖೆಗಳ ಅಧಿಕಾರಿಗಳಿಗೆ, ಸಂಘ- ಸಂಸ್ಥೆಗಳಿಗೆ, ತಂಬಾಕು ಮಾರಾಟಗಾರರಿಗೆ ಒಟ್ಟು 30 ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಕುರಿತ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಒಟ್ಟು 1,338 ಫಲಾನುಭವಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ 2017ರಿಂದ ಇಲ್ಲಿಯವರೆಗೂ ಕೋಟ್ಪಾ 2003ರ ಕಾಯ್ದೆಯನ್ನು ಉಲ್ಲಂಘಿ ಸುವವರ ವಿರುದ್ದ ಒಟ್ಟು 185 ದಾಳಿ ಮಾಡಲಾಗಿದ್ದು, ವಿವಿಧ ಸೆಕ್ಷನ್‌ಗಳಡಿ ಒಟ್ಟು 3,777 ಪ್ರಕರಣಗಳನ್ನು ದಾಖಲಿಸಿ 5.2 ಲ.ರೂ. ದಂಡ ಸಂಗ್ರಹಿಸಲಾಗಿದೆ. ಕೋಟಾ³-2003 ರ ಕಾಯ್ದೆಯ ಅಡಿಯಲ್ಲಿ ಗೃಹ ಇಲಾಖೆಯು ಇಲ್ಲಿಯವರೆಗೂ ಒಟ್ಟು 8,294 ಪ್ರಕರಣಗಳನ್ನು ದಾಖಲಿಸಿ 10.84 ಲ.ರೂ. ದಂಡವಾಗಿ ಸಂಗ್ರಹಿಸಲಾಗಿದೆ. ವಿವಿಧ ಜಾಗೃತಿ
ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಗಳ ಹಾಗೂ ಕೋಟಾ³ ಕಾಯ್ದೆ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹೋರ್ಡಿಂಗ್ಸ್, ಕರಪತ್ರಗಳು, ಭಿತ್ತಿಪತ್ರ ಗಳು, ಗೋಡೆ ಬರಹಗಳು, ಬೀದಿ ನಾಟಕಗಳು, ಎಲ್‌ಇಡಿ ಪ್ರದರ್ಶನಗಳು, ಆಕಾಶವಾಣಿ ಕಾರ್ಯ ಕ್ರಮಗಳು, ಗುಲಾಬಿ ಆಂದೋಲನಗಳು ಹಾಗೂ ಸ್ಥಳೀಯ ದೂರದರ್ಶನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
Related Articles
ಆಪ್ತ ಸಮಾಲೋಚನೆ,
3,356 ಚಿಕಿತ್ಸೆ, 190 ತಂಬಾಕು ಮುಕ್ತರು ಜಿಲ್ಲಾ ಆಸ್ಪತ್ರೆ ಕೊಠಡಿ ಸಂಖ್ಯೆ 34 ರಲ್ಲಿ ತಂಬಾಕು ವ್ಯಸನದಿಂದ ಹೊರಬರುವ ವ್ಯಕ್ತಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತಂಬಾಕು ವ್ಯಸನಮುಕ್ತ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ 2017 ರಿಂದ ಇಲ್ಲಿಯವರೆಗೂ ಒಟ್ಟು 5,779 ಮಂದಿಗೆ ಅಪ್ತಸಮಾಲೋಚನೆ ಮಾಡಿ ಅದರಲ್ಲಿ 3,356 ತಂಬಾಕು ಬಳಕೆ ಮಾಡುವ ರೋಗಿಗಳಿಗೆ ಎನ್.ಆರ್.ಟಿ. ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 190 ಜನರು ತಂಬಾಕು ವ್ಯಸನವನ್ನು ತ್ಯಜಿಸಿದ್ದಾರೆ.
– ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ
Advertisement