ಬೆಂಗಳೂರು: ರಾಜ್ಯ ಸರ್ಕಾರದ ಆದೇಶವನ್ನು ಬೆಂಗಳೂರು ಜಲಮಂಡಳಿಯೇ ಮುರಿದಿದ್ದು ಜಲಮಂಡಳಿಯಿಂದ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದ 345 ಹೊರಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಲಾಗಿದೆ.
ಕಾರ್ಮಿಕ ಇಲಾಖೆ ಮಾ.24 ರಂದು ಸಾರ್ವಜನಿಕ ಅಥವಾ ಖಾಸಗಿ ಸಂಸ್ಥೆಗಳು ನೌಕರ ರನ್ನು ಕೆಲಸದಿಂದ ವಜಾ ಮಾಡಬಾರದು ಎಂದು ಆದೇಶ ಹೊರಡಿಸಿದೆ. ಆದರೂ, ವಿರುದ್ಧವಾಗಿ ಜಲ ಮಂಡಳಿಯು ನಡೆದುಕೊಂಡಿದೆ. ಇನ್ನು ಲಾಕ್‌ಡೌನ್ ಸಮಯದಲ್ಲೇ ಈ ತೀರ್ಮಾನ ಕೈ ಗೊಂಡಿರುವುದಕ್ಕೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈವರೆಗೆ ಮಂಡಳಿಯಲ್ಲಿ 2,440 ನೌಕರರು ಕಾರ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರ ಸಂಖ್ಯೆ ಹೆಚ್ಚಿದೆ. ಕಂಪನಿ ಯೊಂದಕ್ಕೆ ಹೊರಗುತ್ತಿಗೆಯ ಹೊಣೆ ವಹಿಸ ಲಾಗಿದೆ. ಈ ಅವಧಿ ಮುಗಿದಿದ್ದರೂ ಲಾಕ್‌ಡೌನ್‌ನಿಂದಾಗಿ ಒಪ್ಪಂದ ನವೀಕರಣ ಪ್ರಕ್ರಿಯೆ ವಿಳಂಬವಾಗಿದೆ. ಅವಧಿ ವಿಸ್ತರಣೆ ಕುರಿತು ತೀರ್ಮಾನ ಕೈಗೊಳ್ಳುವವರೆಗೆ ತಾತ್ಕಾಲಿಕವಾಗಿ ನೌಕರರ ನೇಮಕಕ್ಕೆ ಅವಕಾಶ ನೀಡಲಾಗಿದೆ. ಇದೇ ವೇಳೆ 345 ಹುದ್ದೆಗಳನ್ನು ಕಡಿತಗೊಳಿಸಿ ಬಾಕಿ ಗುತ್ತಿಗೆ ನೌಕರರನ್ನು ಮುಂದುವರಿಸಲು ಆದೇಶ ಹೊರಡಿಸಲಾಗಿದೆ. ಒಟ್ಟು 14 ವಿಭಾಗಗಳಲ್ಲಿ 345 ಹುದ್ದೆ ಗಳನ್ನು ಕಡಿತ ಗೊಳಿಸಲಾಗಿದೆ. ಪ್ರತಿ ವಿಭಾಗದಲ್ಲಿ ಕೆಲಸ ದಿಂದ ತೆಗದು ಹಾಕುವ ಅಧಿಕಾರವನ್ನು ಕಾರ್ಯನಿರ್ವಾ ಹಕ ಎಂಜಿನಿಯರ್‌ಗಳಿಗೆ ನೀಡಲಾಗಿದೆ. ಈ ಕುರಿತು ನೌಕರರು ಪ್ರಶ್ನಿ ಸಿದರೆ ಸರ್ಕಾರ ಈ ಹಿಂದೆ ಆದೇಶಿಸಿದ್ದು, ಪಾಲಿಸ ಲಾಗುತ್ತಿದೆ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಧಾರದಿಂದ ಹಿಂದೆ ಸರಿಯಬೇಕು : ಕೋವಿಡ್19 ಸೋಂಕು ಹರಡುತ್ತಿರುವ ಈ ಸಮಯ ದಲ್ಲೇ ನೌಕರರನ್ನು ಕೈ ಬಿಟ್ಟಿರುವುದು ಕಾರ್ಮಿಕ ಇಲಾಖೆಯ ಆದೇಶದ ಉಲ್ಲಂಘನೆ. 24 ಗಂಟೆ ಕಾರ್ಯ ನಿರ್ವಹಿಸುವ ಜಲಮಂಡಳಿಗೆ ಹೆಚ್ಚು ನೌಕರರ ಅವಶ್ಯಕತೆ ಇದೆ. ಹುದ್ದೆಗಳನ್ನು ಕಡಿತ ಮಾಡುವ ನಿರ್ಧಾರದಿಂದ ಜಲಮಂಡಳಿ ಹಿಂದೆ ಸರಿಯಬೇಕು ಎಂದು ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ ಆಗ್ರಹಿಸಿದ್ದಾರೆ.