Advertisement
ಗಡಿ ಪ್ರದೇಶದ ಸರಹದ್ದಿನಲ್ಲಿ ಚೆಕ್‌ಪೋಸ್ಟ್: ಕ್ಷೇತ್ರ ವ್ಯಾಪ್ತಿಯ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೆಲವು ತಾಲೂಕುಗಳು ಸೇರ್ಪಡೆಗೊಳ್ಳುವುದರಿಂದ ಅದರಲ್ಲೂ ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರದ ಗಡಿಯಲ್ಲಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಅಕ್ರಮಗಳು ಹೆಚ್ಚಾಗಿ ನಡೆದಿರುವ ಉದಾಹರಣೆಗಳು ಇರುವುದರಿಂದ ಗಡಿ ಪ್ರದೇಶದ ಸರಹದ್ದಿನಲ್ಲಿ ಒಟ್ಟು 34 ಚೆಕ್ ಪೋಸ್ಟ್ ಸ್ಥಾಪಿಸಿ ಪ್ರತಿ ವಾಹನಗಳ ತಪಾಸಣೆಗೆ ಮುಂದಾಗಿದೆ. ಕ್ಷೇತ್ರದಲ್ಲಿ ಒಟ್ಟು 63 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದ್ದು, ಒಟ್ಟು 187 ಮಂದಿ ಸೆಕ್ಟರ್ ಅಧಿಕಾರಿಗಳನ್ನು ಚುನಾವಣಾ ನೀತಿ ಸಂಹಿತೆ ಪಾಲನೆಗೆ ಜಿಲ್ಲಾಡಳಿತ ನಿಯೋಜಿಸಿ ಅಕ್ರಮಗಳ ತಡೆಗೆ ಹದ್ದಿನ ಕಣ್ಣಿಟ್ಟಿದೆ.
ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9 ಫ್ಲೈಯಿಂಗ್ ಸ್ಕ್ವಾಡ್ ಹಾಗೂ 21 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. 3 ವಿಎಸ್‌ಟಿ ಹಾಗೂ 1 ವಿವಿಟಿ ತಂಡಗಳನ್ನು ರ ರಚಿಸಲಾಗಿದೆ.
Related Articles
Advertisement
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದಲ್ಲಿ 9 ಫ್ಲೈಯಿಂಗ್ ಸ್ಕ್ವಾಡ್, 5 ಚೆಕ್‌ಪೋಸ್ಟ್ ಹಾಗೂ 25 ಸೆಕ್ಟರ್ ಅಧಿಕಾರಿಗಳನ್ನು ಹಾಗೂ 2 ವಿಎಸ್‌ಟಿ ಹಾಗೂ ವಿವಿಟಿ ತಂಡಗಳನ್ನು ರಚಿಸಲಾಗಿದೆ.
ದೇವನಹಳ್ಳಿ: ಕ್ಷೇತ್ರದಲ್ಲಿ 6 ಫ್ಲೈಯಿಂಗ್ ಸ್ಕ್ವಾಡ್, 29 ಸೆಕ್ಟರ್ ಅಧಿಕಾರಿಗಳನ್ನು 2 ವಿಎಸ್‌ಟಿ ಹಾಗೂ 1 ವಿವಿಟಿ ತಂಡಗಳನ್ನು ರಚಿಸಲಾಗಿದೆ.
ದೊಡ್ಡಬಳ್ಳಾಪುರ: ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6 ಫ್ಲೈಯಿಂಗ್ ಸ್ಕ್ವಾಡ್, 3 ಚೆಕ್‌ಪೋಸ್ಟ್, 24 ಸೆಕ್ಟರ್ ಅಧಿಕಾರಿಗಳನ್ನು ಹಾಗೂ 2 ವಿಎಸ್‌ಟಿ ಹಾಗೂ 1 ವಿವಿಟಿ ತಂಡಗಳನ್ನು ರಚಿಸಲಾಗಿದೆ.
ನೆಲಮಂಗಲ: ಕ್ಷೇತ್ರದಲ್ಲಿ ಒಟ್ಟು 6 ಫ್ಲೈಯಿಂಗ್ ಸ್ಕ್ವಾಡ್, 4 ಚೆಕ್ ಪೋಸ್ಟ್ ಹಾಗೂ 23 ಸೆಕ್ಟರ್ ಅಧಿಕಾರಿಗಳನ್ನು ಹಾಗೂ 2 ವಿಎಸ್‌ಟಿ ಹಾಗು 1 ವಿವಿಟಿ ತಂಡಗಳನ್ನು ರಚಿಸಲಾಗಿದೆ.
ಚುನಾವಣಾ ಅಧಿಕಾರಿಗಳ ನೇಮಕ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಗಳಾಗಿ ಕೇಂದ್ರ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಅಪರ ಜಿಲ್ಲಾಧಿಕಾರಿ ಆರತಿ, ಬೆಂಗಳೂರು ನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಸ್.ರಾಮಯ್ಯರನ್ನು ನೇಮಕ ಮಾಡಲಾಗಿದೆ.
ಗೌರಿಬಿದನೂರು ವಿಧಾನಸಭಾ ಕ್ಷೇತ್ರಕ್ಕೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್.ಆರ್.ಕುಮಾರಸ್ವಾಮಿ (9448999242), ಬಾಗೇಪಲ್ಲಿ ಕ್ಷೇತ್ರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶಾದ ಯೋಜನಾ ನಿರ್ದೇಶಕ ಜಿ.ಆರ್.ನಟರಾಜ್ (78295329754), ಚಿಕ್ಕಬಳ್ಳಾಪುರ ಕ್ಷೇತ್ರದ ಚುನಾವಣಾ ಅಧಿಕಾರಿಯಾಗಿ ಚಿಕ್ಕಬಳ್ಳಾಪುರ ಉಪ ವಿಭಾಗದ ಚುನಾವಣಾ ಅಧಿಕಾರಿ ಬಿ.ಶಿವಸ್ವಾಮಿ (9448523683) ನೇಮಕ ಮಡಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಯಾಗಿ ಬೆಂಗಳೂರು ಜಿಲ್ಲೆಯ ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ (9448089753), ಹೊಸಕೋಟೆ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಯಾಗಿ ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 48 ಹಾಗೂ 207ರ ವಿಶೇಷ ಭೂ ಸ್ವಾಧೀನ ಅಧಿಕಾರಿ ತಬಾಸುಮಾ ಜಹೀರಾ (9740822663).
ದೇವನಹಳ್ಳಿ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿಶೇಷ ಭೂ ಸ್ವಾಧೀನ ಅಧಿಕಾರಿ ಬಾಲಪ್ಪ ಹಂಡಿಗುಂಡ (962102106), ದೊಡ್ಡಬಳ್ಳಾಪುರ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಯಾಗಿ ದೊಡ್ಡಬಳ್ಳಾಫುರದ ಉಪ ವಿಭಾಗಾಧಿಕಾರಿ ಮಂಜುನಾಥ ಸಿ., (9731090000).
ನೆಲಮಂಗಲ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿಯಾಗಿ ರಾಜೀವ್ ಗಾಂಧಿ ವಸತಿ ನಿಗಮದ ಜನರಲ್ ಮ್ಯಾನೇಜರ್ ಶಾಂತ ಎಲ್.ಹುಲಮಣಿ (9900844668) ರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.
ಅಕ್ರಮಗಳ ಬಗ್ಗೆ ದೂರಿಗೆ 1950 ಕರೆ ಮಾಡಿ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮಗಳ ಬಗ್ಗೆ ದೂರು ಕೊಡಲು ಆಯಾ ತಾಲೂಕಿನ ಎಸ್‌ಟಿಡಿ ಕೋಡ್‌ನೊಂದಿಗೆ ಟೋಲ್ ಫ್ರೀ ದೂರವಾಣಿ ಸಂಖ್ಯೆ 1950 ಕರೆ ಮಾಡಬಹುದು. ಈ ಕಂಟ್ರೋಲ್ ರೂಂ ದಿನದ 24 ಗಂಟೆಗಳ ಕಾಲ ಕೂಡ ಕಾರ್ಯನಿರ್ವಹಿಸಲಿದೆ. ಜಿಲ್ಲಾ ಮಟ್ಟದಲ್ಲಿ ಕೂಡ ಎಂಸಿಎಂಸಿ ಕಮಿಟಿ ರಚಿಸಲಾಗಿರುವ ಜಿಲ್ಲಾಡಳಿತ ಚುನಾವಣಾ ಅಧಿಕಾರಿಗಳ ಕಚೇರಿಗೆ ಹೆಚ್ಚುವರಿಯಾಗಿ ಲೆಕ್ಕಾಧಿಕಾರಿಗಳನ್ನು ನೇಮಿಸಲು ಮುಂದಾಗಿದೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮ ತಡೆಗೆ ಒಟ್ಟು 34 ಚೆಕ್‌ಪೋಸ್ಟ್ ನಿರ್ಮಿಸಿ ಪ್ರತಿ ಚೆಕ್‌ಪೋಸ್ಟ್ ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯ ನಡೆಯುತ್ತಿದೆ. ಸರಕು ಸಾಗಾಣಿಕೆ ವಾಹನಗಳ ಜೊತೆಗೆ ಸರ್ಕಾರಿ ವಾಹನಗಳ ತಪಾಸಣೆಗೆಗೂ ಆದೇಶಿಸಲಾಗಿದೆ. -ಅನಿರುದ್ಧ್ ಶ್ರವಣ್, ಜಿಲ್ಲಾಧಿಕಾರಿ. ಚಿಕ್ಕಬಳ್ಳಾಪುರ * ಕಾಗತಿ ನಾಗರಾಜಪ್ಪ