Advertisement

34.39 ಕೋ.ರೂ. ಬೆಳೆ ಸಾಲ ಮನ್ನಾ ಹಣ ವಾಪಸ್‌

10:42 PM Sep 27, 2019 | mahesh |

ಸುಳ್ಯ: ಕಳೆದ ಸರಕಾರದ ಅವಧಿಯಲ್ಲಿ ಘೋಷಿಸಿದ ಸಹಕಾರ ಸಂಘಗಳಲ್ಲಿನ ಬೆಳೆಸಾಲ ಮನ್ನಾಕ್ಕೆ ಸಂಬಂಧಿಸಿ ತಾಲೂಕಿನ 23 ಸಹಕಾರ ಸಂಘಗಳ 4,965 ಫಲಾನುಭವಿಗಳಿಗೆ ಮನ್ನಾ ಹಣ ವಿವಿಧ ಕಾರಣಗಳಿಂದ ಪಾವತಿ ಆಗದೆ ವಾಪಾಸು ಹೋಗಿದೆ!

Advertisement

ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಲಿಂಕ್‌ ಆಗದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಸಾಲ ಮನ್ನಾ ಹಣ ಮಂಜೂರಾಗಿದ್ದರೂ, ಅದು ಫಲಾನುಭವಿಗಳ ಖಾತೆಗೆ ಬಾರದೆ ಮತ್ತೆ ಅಪೆಕ್ಸ್‌ ಬ್ಯಾಂಕ್‌ಗೆ ರಿರ್ಟನ್‌ ಹೋಗಿದೆ.

ತಾ|ನ 23 ಸಹಕಾರ ಸಂಘಗಳ 4,965 ಫಲಾನುಭವಿಗಳ 34.39 ಕೋ.ರೂ. ಮನ್ನಾ ಹಣ ಖಾತೆಗೆ ಜಮೆಯಾಗಿಲ್ಲ. ಈ ಹಣ ಡಿಸಿಸಿ ಬ್ಯಾಂಕ್‌ ಖಾತೆಗೆ ಬಂದಿದ್ದರೂ, ತಾಂತ್ರಿಕ ಕಾರಣದಿಂದ ಜಮೆಯಾಗದೆ ಅಪೆಕ್ಸ್‌ ಬ್ಯಾಂಕ್‌ಗೆ ವಾಪಾಸಾಗಿದೆ. ಪ್ರಾ.ಕೃ.ಪ.ಸ. ಸಂಘಗಳಿಂದ ಹಣ ಮಂಜೂರಾದ ಬಗ್ಗೆ ತಿಳಿದು ಅಕೌಂಟ್‌ ಪರಿಶೀಲಿಸಿದಾಗ ಮನ್ನಾ ಹಣ ಜಮೆಯಾಗಿಲ್ಲ. ಹೀಗಾಗಿ ಫಲಾನುಭವಿಗಳು ಮತ್ತೆ ಸೊಸೈಟಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿತ್ತು.

2,000 ಮಂದಿಗೆ ಮಾತ್ರ ಮನ್ನಾ ಹಣ
ತಾಲೂಕಿನಲ್ಲಿ 14,144 ಮಂದಿ ಫಲಾನುಭವಿಗಳ 118.12 ಕೋ.ರೂ. ಮನ್ನಾ ಹಣ ಪಾವತಿಗೆ ಬೇಡಿಕೆ ಇಡಲಾಗಿತ್ತು. ಇದರಲ್ಲಿ ಈ ತನಕ ಸಹಕಾರ ಸಂಘದಲ್ಲಿ ಸಾಲ ಹೊಂದಿರುವ 2,000 ಫಲಾನುಭವಿಗಳ 14.11 ಕೋ.ರೂ. ಮನ್ನಾ ಹಣ ಮಾತ್ರ ಖಾತೆಗೆ ಜಮೆಯಾಗಿದೆ. ಇಲ್ಲಿ ಪಾವತಿಗಿಂತ ಬಾಕಿ ಇರುವ ಸಂಖ್ಯೆಯೇ ಹೆಚ್ಚಾಗಿದೆ.

ಸಮಸ್ಯೆ ಸರಿಪಡಿಸುತ್ತೇವೆ
ಫಲಾನುಭವಿಗಳಲ್ಲಿನ ಆಧಾರ್‌ ಲಿಂಕ್‌ ಆಗದಿರುವುದು ಮೊದಲಾದ ಸಮಸ್ಯೆಗಳಿವೆ. ಇವು ಸರಿಯಾದ ತತ್‌ಕ್ಷಣ ಮತ್ತೆ ಹಣ ಖಾತೆಗೆ ಜಮೆ ಆಗಲಿದೆ. ಸಮಸ್ಯೆ ಸರಿಪಡಿಸುತ್ತಿದ್ದೇವೆ.
– ಶಿವಲಿಂಗಯ್ಯ, ಸಹಕಾರ ಇಲಾಖೆ ಅಧಿಕಾರಿ

Advertisement

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next