ಧಾರವಾಡ: ಕಳೆದ ಡಿಸೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ 24549 ಜನನಗಳಾಗಿದ್ದು, ಇದರಲ್ಲಿ 57 ಜನ ತಾಯಂದಿರು ಹಾಗೂ 337 ನವಜಾತ ಶಿಶುಗಳು ಮರಣ ಹೊಂದಿವೆ ಎಂದು ಡಿಸಿ ನಿತೇಶ ಪಾಟೀಲ ಹೇಳಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಕಾರ್ಯಕ್ರಮಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನವಜಾತ ಶಿಶುಗಳ ಮತ್ತು ತಾಯಂದಿರಮರಣ ಪ್ರಮಾಣ ಕಡಿಮೆಗೊಳಿಸಲು ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ವೈದ್ಯಕೀಯ ನಿರ್ಲಕ್ಷéದಿಂದ ಜೀವಹಾನಿ ಆಗಬಾರದು. ತೀವ್ರ ಚಿಕಿತ್ಸೆ ಅಗತ್ಯವಿರುವ ಪ್ರಕರಣಗಳನ್ನು ಮುಂಚಿತವಾಗಿಯೇ ಗುರುತಿಸಿ ಸುಸಜ್ಜಿತ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕೆಂದರು. ಜನನ ಸಂದರ್ಭದಲ್ಲಿ ನೀಡುವ ಲಸಿಕೆ, ಬಿಸಿಜಿ, ಓಪಿವಿ, ಪೆಂಟಾ-3, ಎಂಆರ್-1, ಓಪಿವಿ ಹಾಗೂ ಡಿಪಿಟಿ ಬೂಸ್ಟರ್‌ಗಳು ಸೇರಿದಂತೆ ಎಲ್ಲ ಲಸಿಕೆಗಳನ್ನು ಶೇ.97 ನೀಡಲಾಗಿದೆ. ವೈದ್ಯಕೀಯ ನಿರ್ಲಕ್ಷದಿಂದ ತಾಯಿ ಮತ್ತು ನವಜಾತ ಶಿಶುಗಳ ಪ್ರಕರಣಗಳು ಸಂಭವಿಸಬಾರದು.
ಇದನ್ನೂ ಓದಿ:ಕೋವಿಡ್ ಕಾರಣ ಹೇಳಬೇಡಿ, ಕಾರ್ಯಪ್ರವೃತ್ತರಾಗಿ
ಕೈಮೀರುವ ಹಂತದಲ್ಲಿ ಬೇರೆ ಕಡೆ ಸ್ಥಳಾಂತರಕ್ಕೆ ಶಿಫಾರಸ್ಸು ಮಾಡುವ ಪ್ರಕರಣಗಳು ಅ ಧಿಕವಾಗಿ ವರದಿಯಾಗುತ್ತಿವೆ. ಮಗುವಿನ ತೂಕ, ತಾಯಿಯ ಆರೋಗ್ಯ ಮತ್ತಿತರ ದೌರ್ಬಲ್ಯಗಳನ್ನು ಪೂರ್ವ ಹಂತದ ಭೇಟಿಗಳಲ್ಲಿಯೇ ಅಧ್ಯಯನ ಮಾಡಿ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಅಗತ್ಯ ಕಂಡು ಬಂದರೆ ಹೆರಿಗೆ ಮುನ್ನವೇ ಸುಸಜ್ಜಿತ ಆಸ್ಪತ್ರೆಗಳಿಗೆ ಶಿಫಾರಸು ಮಾಡಬೇಕು. ಹೆರಿಗೆಯ ನಂತರ ಕೊನೆ ಘಳಿಗೆಯಲ್ಲಿ ಯಾವುದೇ ಅಪಾಯಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.
ಕಿಮ್ಸ್ ನಿರ್ದೇಶಕ ಡಾ|ರಾಮಲಿಂಗಪ್ಪ ಅಂಟರತಾಣಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತಾಯಂದಿರು ಹಾಗೂ ನವಜಾತ ಶಿಶುಗಳ ಮರಣ ಸಂಭವಿಸಿದ ಕುಟುಂಬಗಳ ಸದಸ್ಯರ, ಚಿಕಿತ್ಸೆ ನೀಡಿದ ವೈದ್ಯರ ಜತೆ ನೇರ ಸಮಾಲೋಚನೆ ನಡೆಸಲಾಯಿತು. ಜಿಲ್ಲಾ ಆರ್‌ಸಿಎಚ್ ಅ ಧಿಕಾರಿ ಡಾ|ಎಸ್. ಎಂ. ಹೊನಕೇರಿ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ|ಯಶವಂತ ಮದೀನಕರ, ಡಿವೈಎಸ್‌ಪಿ ರಾಮನಗೌಡ ಹಟ್ಟಿ ಇದ್ದರು.