Advertisement

NDA ಗೆ 335 ಸ್ಥಾನಗಳು: ಇಂಡಿಯಾ ಟುಡೇ ಸಮೀಕ್ಷೆ

11:41 PM Feb 08, 2024 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಮತ್ತೂಂದು ಸಮೀûಾ ವರದಿ ಹೊರಬಿದ್ದಿದೆ. ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಮತ್ತೂಮ್ಮೆ ಬಹಮತದೊಂದಿಗೆ ಅಧಿಕಾರದ ಗದ್ದುಗೆಗೆ ಮುತ್ತಿಕ್ಕಲಿದೆ. ರಾಜ್ಯದಲ್ಲಿ ಬಿಜೆಪಿ+ಜೆಡಿಎಸ್‌ 24, ಕಾಂಗ್ರೆಸ್‌ 4 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

Advertisement

ಇಂಡಿಯಾ ಟುಡೇ ದೇಶಾದ್ಯಂತ “ಮೂಡ್‌ ಆಫ್ ದಿ ನೇಷನ್‌’ ಸಮೀಕ್ಷೆ ನಡೆಸಿದ್ದು, ಎನ್‌ಡಿಎ 335, ಇಂಡಿಯಾ ಬ್ಲಾಕ್‌ 166, ಇತರರು 42 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಕಳೆದ ಬಾರಿಗಿಂತ 18 ಸ್ಥಾನಗಳನ್ನು ಕಡಿಮೆ ಗಳಿಸಿದರೂ ಪೂರ್ಣ ಬಹುಮತದೊಂದಿಗೆ ಮೂರನೇ ಬಾರಿಗೆ ಸರಕಾರ ರಚನೆ ಮಾಡಲಿದೆ. ಮೋದಿ ವಿರುದ್ಧ ಹೋರಾಟಕ್ಕೆ ರಚನೆಯಾಗಿದ್ದ ಕಾಂಗ್ರೆಸ್‌ ಹಾಗೂ ಮಿತ್ರಪಕ್ಷಗಳ ಕೂಟ ಇಂಡಿಯಾ ಬ್ಲಾಕ್‌ 75 ಸ್ಥಾನಗಳನ್ನು ಹೆಚ್ಚಿಸಿಕೊಂಡರೂ ಹಿನ್ನಡೆ ಅನುಭವಿ ಸಲಿದೆ ಎಂದು ಭವಿಷ್ಯ ನುಡಿದಿದೆ.

ಯಾವ ರಾಜ್ಯಗಳಲ್ಲಿ ಎಷ್ಟು?: ಮೋದಿ ತವರು ಗುಜರಾತ್‌ನಲ್ಲಿ ಬಿಜೆಪಿ ಈ ಬಾರಿ ಯೂ ಕ್ಲೀನ್‌ ಸ್ವೀಪ್‌ ಮಾಡಲಿದ್ದು 26 ಕ್ಷೇತ್ರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ. ಹಿಮಾಚಲ ಪ್ರದೇಶ ದಲ್ಲೂ ನಾಲ್ಕಕ್ಕೆ ನಾಲ್ಕೂ ಸ್ಥಾನ, ದಿಲ್ಲಿ ಯಲ್ಲಿ 7ಕ್ಕೆ 7 ಕ್ಷೇತ್ರ, ರಾಜಸ್ಥಾನದ 25 ಸ್ಥಾನಗಳಲ್ಲೂ ಬಿಜೆಪಿ ಗೆಲುವಿನ ನಗೆ ಬೀರಲಿದೆ. ಉ. ಪ್ರದೇಶದ 80 ಸ್ಥಾನಗಳ ಪೈಕಿ ಬಿಜೆಪಿ 72 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next