Advertisement

ಭಾರತದ 5.62 ಲಕ್ಷ ಜನರ ಎಫ್ಬಿ ಮಾಹಿತಿ ಸೋರಿಕೆ!

07:00 AM Apr 06, 2018 | Team Udayavani |

ನವದೆಹಲಿ: ಫೇಸ್‌ಬುಕ್‌ ದತ್ತಾಂಶ ದುರ್ಬಳಕೆ ವಿಚಾರದಲ್ಲಿ ಮತ್ತೂಂದು ಮಹತ್ವದ ಸಂಗತಿ ಬಹಿರಂಗಗೊಂಡಿದೆ. ಫೇಸ್‌ಬುಕ್‌ ಹೇಳಿಕೊಂಡಿರುವಂತೆ ರಾಜಕೀಯ ವಿಶ್ಲೇಷಣೆ ಸಂಸ್ಥೆ ಕೇಂಬ್ರಿಜ್‌ ಅನಾಲಿಟಿಕಾ ಜತೆಗೆ 8 ಕೋಟಿ ಫೇಸ್‌ಬುಕ್‌ ಬಳಕೆದಾರರ ದತ್ತಾಂಶ ಹಂಚಿಕೆ ಯಾಗಿತ್ತು. ಈ ಪೈಕಿ ಹೆಚ್ಚಿನವರು ಅಮೆರಿ ಕದವರೇ ಆದರೂ, ಭಾರತದ 5 ಲಕ್ಷ 62 ಸಾವಿರ ಬಳಕೆದಾರರ ದತ್ತಾಂಶವೂ ಹಂಚಿಕೆ ಯಾಗಿದೆ ಎಂದು ಇದೀಗ ಭಾರತ ಸರ್ಕಾರಕ್ಕೆ ಫೇಸ್‌ಬುಕ್‌ ಮಾಹಿತಿ ನೀಡಿದೆ.

Advertisement

335 ಜನರು ದಿಸ್‌ ಈಸ್‌ ಮೈ ಡಿಜಿಟಲ್‌ ಲೈಫ್ ಎಂಬ ಅಪ್ಲಿಕೇಶನ್‌ ಡೌನ್‌ ಲೋಡ್‌ ಮಾಡಿಕೊಂಡಿದ್ದರು. ಇವರ ದತ್ತಾಂಶಗಳು ನೇರವಾಗಿ ಕೇಂ ಬ್ರಿಜ್‌ ಅನಾಲಿಟಿಕಾಗೆ ಹಂಚಿಕೆಯಾಗಿದ್ದರೆ, ಈ 335 ಜನರ ಸ್ನೇಹಿತರೂ ಬಾಧಿಸ ಲ್ಪಟ್ಟಿದ್ದಾರೆ. ಭಾರತದಲ್ಲಿ ಸುಮಾರು 20 ಕೋಟಿ ಫೇಸ್‌ಬುಕ್‌ ಬಳಕೆದಾರರಿದ್ದಾರೆ.

ಗ್ಲೋಬಲ್‌ ಸೈನ್ಸ್‌ ರಿಸರ್ಚ್‌ ಲಿಮಿಟೆಡ್‌ ಎಂಬ ಕಂಪನಿ ಈ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದ್ದು, ಇದಕ್ಕೆ ಡಾ. ಅಲೆಕ್ಸಾಂಡರ್‌ ಕೋಗನ್‌ ನೇತೃತ್ವ ವಹಿಸಿದ್ದಾರೆ. ಫೇಸ್‌ಬುಕ್‌ನ ಅನುಮತಿಯಿಲ್ಲದೇ ಈ ಅಪ್ಲಿಕೇಶನ್‌ ಬಳಕೆದಾರರ ದತ್ತಾಂಶವನ್ನು ಪಡೆದಿದೆ. ನಿರ್ದಿಷ್ಟವಾಗಿ ಯಾವ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂಬ ವಿವರವನ್ನು ಪರಿಶೀಲಿಸಲಾಗುತ್ತಿದೆ ಎಂದು ಫೇಸ್‌ಬುಕ್‌ ಹೇಳಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಯಾವ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಹೊಂದಿದ್ದಾರೆ ಮತ್ತು ಯಾವ ಅಪ್ಲಿಕೇಶನ್‌ಗೆ ಎಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬುದನ್ನೂ ಪ್ರದರ್ಶಿಸಲು ನಿರ್ಧರಿಸಲಾಗಿದೆ.

ಎಫ್ಬಿ ಸುಭದ್ರ: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆ ಎದುರಾಗುತ್ತಿರು ವುದರಿಂದ ಕೃತಕ ಬುದ್ಧಿಮತ್ತೆ ಹಾಗೂ ಇತರ ವಿಧಾನಗಳನ್ನು ಬಳಸಿಕೊಂಡು ಫೇಸ್‌ಬುಕ್‌ ಅನ್ನು ಇನ್ನಷ್ಟು ಸುರಕ್ಷಿತ ವಾಗಿಸಲು ನಾವು ಶ್ರಮಿಸುತ್ತಿದ್ದೇವೆ. ಇದು ನಮ್ಮ ಮೊದಲ ಆದ್ಯತೆ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಹೇಳಿದ್ದಾರೆ. ಮಾಹಿತಿಯನ್ನು ಟ್ರೋಲ್‌ಗ‌ಳ ಮೂಲಕ ಹರಡುವುದನ್ನು ಕೃತಕ ಬುದ್ಧಿಮತ್ತೆಯ ಮೂಲಕ ತಡೆದಿದ್ದೆವು. ಅದನ್ನೇ ಈ ಬಾರಿ ಚುನಾವಣೆ ಸಮ ಯದಲ್ಲಿ ಬಳಸಿಕೊಳ್ಳಲಿದ್ದೇವೆ. ಭದ್ರತಾ ವಿಭಾಗ ಹಾಗೂ ಕಂಟೆಂಟ್‌ ಮರುಪರಿ ಶೀಲನೆಗಾಗಿ 15 ಸಾವಿರ ಸಿಬ್ಬಂದಿ ನೇಮಿ ಸಲಾಗಿದ್ದು, ಇನ್ನೂ 20 ಸಾವಿರ ಜನರನ್ನು ಇದಕ್ಕಾಗಿ ಈ ವರ್ಷ ನೇಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next