ಬೆಂಗಳೂರು: “ಕೇಂದ್ರ ಸರ್ಕಾರಕ್ಕೆ ನೆರೆ ಪರಿಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸುವ ಕಾರ್ಯ ಶೇ.90 ರಷ್ಟಾಗಿದ್ದು, ಇಂದಿಗೂ ನೆರೆ ಹಾನಿ ಕುರಿತು ವಿವಿಧ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಯುತ್ತಿದೆ. ಸದ್ಯದ ಮಾಹಿತಿಯಂತೆ 33 ಸಾವಿರ ಕೋಟಿ ರೂ. ನೆರೆ ಹಾನಿ ಉಂಟಾಗಿದೆ’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನೆರೆ ಪರಿಹಾರ ಪ್ರಸ್ತಾವನೆಗೆ ವರದಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಇನ್ನೊಂದೆಡೆ ವಿವಿಧ ಜಿಲ್ಲೆಗಳಲ್ಲಿ ಆಗಿರುವ ನೆರೆ ಹಾನಿ ಕುರಿತು ಪರಿಶೀಲನೆ ಮುಂದುವರಿದಿದೆ. ನೆರೆ ಹಾನಿ ಮೊತ್ತವು ಹೆಚ್ಚಾಗುತ್ತಲೇ ಇದ್ದು, ಇನ್ನೂ ಕೆಲ ದಿನ ನೆರೆ ಹಾನಿ ಪರಿಶೀಲನೆ ಮುಂದುವರಿಯಲಿದೆ’ ಎಂದರು.
ಹಿಂದೆಲ್ಲ ರಾಜ್ಯದಲ್ಲಿ ಉಂಟಾಗಿರುವ ನೆರೆ ಅಥವಾ ಬರ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಬೇಕಿತ್ತು. ಆ ನಂತರ ಕೇಂದ್ರ ಸರ್ಕಾರ ದೆಹಲಿಯಿಂದ ಇಲ್ಲಿನ ಸ್ಥಿತಿಗತಿಗಳ ಅಧ್ಯಯನಕ್ಕೆ ತಂಡ ಕಳಿಸಿಕೊಡುತ್ತಿತ್ತು. ಆದರೆ, ಈ ಬಾರಿ ರಾಜ್ಯದಲ್ಲಿ ಭೀಕರ ನೆರೆ ಉಂಟಾದ ಕಾರಣ ರಾಜ್ಯ ಸರ್ಕಾರ ಮನವಿ ಪತ್ರ ಕಳಿಸುವುದಕ್ಕೂ ಪೂರ್ವದಲ್ಲಿಯೇ ಕೇಂದ್ರ ಸರ್ಕಾರ ತಂಡವನ್ನು ಕಳುಹಿಸಿಕೊಟ್ಟಿದೆ. ಈ ತಂಡ ಕಳೆದ ಎರಡು ದಿನಗಳು ಉತ್ತರ ಕರ್ನಾಟಕ, ಕರಾವಳಿ ಭಾಗಗಳಲ್ಲಿ ಪರಿಶೀಲನೆ ನಡೆಸಿ ಮಂಗಳವಾರ ಕೊಡಗಿಗೆ ತೆರಳಿದೆ. ಮರಳಿ ಬೆಂಗಳೂರಿಗೆ ಬಂದ ಬಳಿಕ ಸಮಾಲೋಚನೆ ನಡೆಸಲಾ ಗು ವುದು ಎಂದು ಹೇಳಿದರು.
ಪೂರ್ಣ ಮನೆ ಕಳೆದು ಕೊಂಡವರಿಗೆ 5 ಲಕ್ಷ ರೂ., ಭಾಗಶಃ ಹಾನಿಗೆ 1 ಲಕ್ಷದವರೆಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, ತಂಡವು ಪರಿಶೀಲಿಸಿ ಪಟ್ಟಿ ತಯಾರಿಸುತ್ತಿದೆ. ಮನೆ ಪೂರ್ಣ ಹಾಳಾದ ಕುಟುಂಬಗಳಿಗೆ ತಾತ್ಕಾಲಿಕ ಬಾಡಿಗೆ ಮನೆಯಲ್ಲಿ ವಾಸಕ್ಕೆ ಮಾಸಿಕ 5 ಸಾವಿರ ಬಾಡಿಗೆ ಕೊಡಲಾಗುತ್ತಿದೆ. ಅಗತ್ಯ ಶೆಡ್‌ಗಳು, ಕಲ್ಯಾಣ ಮಂಟಪಗಳ ವ್ಯವಸ್ಥೆ ಮಾಡಿಕೊಡಲಾ ಗುತ್ತಿದೆ. ಅವಶ್ಯಕತೆ ಇರುವವರೆಗೂ ಗಂಜಿ ಕೇಂದ್ರ ಗಳು ಕಾರ್ಯಾಚರಣೆ ನಡೆಸಲಿವೆ. ಅಲ್ಲಿರುವ ಸಂತ್ರಸ್ತರು ಮನೆಗಳಿಗೆ ತೆರಳುತ್ತಿದ್ದರೆ ಅವರ ಅನು ಕೂಲಕ್ಕೆ 10 ಕೆ.ಜಿ ಅಕ್ಕಿ, ಬೇಳೆ, ಎಣ್ಣೆ ಸೇರಿ ಇತರೆ ಸಾಮಗ್ರಿಗಳ ಕಿಟ್ ಕೊಡಲಾಗುತ್ತಿದೆ ಎಂದರು.
ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಸಾವಿರ ಕೋಟಿ ರೂ. ನೀಡಿದ್ದು, ಅದನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಬಹುದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬರ ಪರಿಹಾರ ಕಾರ್ಯಗಳಿಗೆ ನೀಡಿದ ಹಣವನ್ನು ನೆರೆ ಪರಿಹಾರಕ್ಕೆ ಬಳಸಲು ಬರುವುದಿಲ್ಲ. ನೆರೆ ಪರಿಹಾರಕ್ಕೆಂದೇ ಸಂಪನ್ಮೂಲ ಕ್ರೋಢೀಕರಿಸ ಲಾಗುತ್ತಿದೆ, ಉದ್ಯಮಿಗಳು, ನೌಕರರು ಅಗತ್ಯ ನೆರವು ನೀಡುತ್ತಿದ್ದಾರೆ ಎಂದರು.
ಪೀಣ್ಯ ಕೈಗಾರಿಕಾ ಪ್ರದೇಶದ ಸಾಕಷ್ಟು ಕೈಗಾರಿಕೆ ಗಳು ನಷ್ಟದಿಂದ ಮುಚ್ಚುತ್ತಿರುವ ಕುರಿತು ಪ್ರತಿ ಕ್ರಿಯಿ ಸಿದ ಅವರು, ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಉದ್ಯಮಿಗಳು ಒಟ್ಟಾಗಿ ಸೇರಿಕೊಂಡು ಅಸೋಸಿಯೇಷನ್ ಮಾಡಿಕೊಳ್ಳಬೇಕು. ಈಗಾ ಗಲೇ ಬಿಡದಿ ಕೈಗಾರಿಕಾ ಪ್ರದೇಶ ಈ ಮಾದರಿಯಲ್ಲಿ ಅಸೋಸಿಯೇಷನ್ ಮಾಡಿಕೊಂಡು ಅಗತ್ಯ ಹಣ ಸಂಗ್ರಹ ಮಾಡಿ ಅಭಿವೃದ್ಧಿ ಕಡೆ ಸಾಗುತ್ತಿದ್ದು, ಅದೇ ಮಾದರಿ ಅನುಸರಿಸಬೇಕೆಂದು ಅವರು ಹೇಳಿದರು.