Advertisement

ಸಮಾಜಮುಖಿ ಸತ್ಕರ್ಮಗಳಿಂದ ಸಮಾಜಕ್ಕೆ ಒಳಿತು: ಪ್ರದೀಪ್‌ ಶೆಟ್ಟಿ

12:23 PM May 31, 2022 | Team Udayavani |

ಮುಂಬಯಿ: ಬೊರಿವಲಿ ಪಶ್ಚಿಮದ ವಜೀರ್‌ ನಾಕಾ , ಜೈರಾಜ್‌ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದ 32ನೇ ವಾರ್ಷಿಕ ಮಹೋತ್ಸವ ಮೇ.30 ರಂದು ಬೆಳಗ್ಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಶುಭಾರಂಭಗೊಡಿತು.

Advertisement

ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸ್ಥಾಪಕ ವಂಶಸ್ಥ ಮೊಕ್ತೇಸರ ಜಯರಾಜ ಶ್ರೀಧರ ಶೆಟ್ಟಿ ಕಲ್ಲಮುಂಡ್ಕೂರು ಹರಿಯಾಳಗುತ್ತು, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ಸಿ.ಶೆಟ್ಟಿ, ಟ್ರಸ್ಟಿ ಜಯಪಾಲಿ ಆಶೋಕ್‌ ಶೆಟ್ಟಿ ಹಾಗೂಪರಿವಾರ ಸದಸ್ಯರು ಶ್ರೀ ಮಹಿಷಮರ್ದಿನಿ, ಶ್ರೀ ಕ್ಷೇತ್ರದ ಪರಿವಾರ ದೇವರಾದ ಶ್ರೀಗಣಪತಿ, ಶ್ರೀ ಆಂಜನೇಯ , ನವಗ್ರಹ, ಶ್ರೀನಾಗ ದೇವರು, ಕೊಡಮಣಿತ್ತಾಯ ಹಾಗೂ ರಕ್ತೇಶ್ವರಿ ದೈವಕ್ಕೆ ಪೂಜೆ ಮತ್ತು ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂಧರ್ಭದಲ್ಲಿ ಬೆಳಗ್ಗೆ ದೇವತಾ ಪ್ರಾರ್ಥನೆ, ತೋರಣ ಪ್ರತಿಷ್ಠೆ, ಗಣ ಹೋಮ, ಸಾರ್ವಜನಿಕನವಗ್ರಹ ಹೋಮ, ಸಾರ್ವಜನಿಕ ಆಶ್ಲೇಷ ಬಲಿ,ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 6.30 ರಿಂದಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ ಮತ್ತು ನಿತ್ಯ ಬಲಿ ನೆರವೇರಿತು.

ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ.ಶೆಟ್ಟಿ ಮಾತನಾಡಿ ಕ್ರಮಬದ್ದವಾದ ಪೂಜಾ ಕೈಂಕರ್ಯದಿಂದ ಭಕ್ತ ಹಾಗೂ ಭಗವಂತನ ಮಧ್ಯೆ ಅವಿನಾಭಾವ ಸಂಬಂಧ ಬೆಳೆಯಲಿದೆ. ಧಾರ್ಮಿಕಕ್ಷೇತ್ರಗಳು ಊರಿನ ಪ್ರಗತಿಯ ಪ್ರತಿಬಿಂಬಗಳಾಗಿವೆ. ಸಮಾಜಮುಖೀ ಸತ್ಕರ್ಮಗಳಿಂದ ಸಮಾಜಕ್ಕೆ ಒಳಿತಾಗುತ್ತದೆ. ಕಾರ್ಯಕ್ರಮ ಸುವಸ್ಥಿತವಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು.

ಈ ವೇಳೆ ಬೆಳ್ಮಣ್‌ ವೆಂಕಟ್ರಮಣ ತಂತ್ರಿ , ದೇವರಾಜ ನೆಲ್ಲಿ, ಬ್ರಹ್ಮ ಶ್ರೀ ಕೊಯ್ನಾರು ನಂದಕುಮಾರ ತಂತ್ರಿ, ಎನ್‌.ಕೃಷ್ಣ ಭಟ್, ಆರ್ಚಕ ವೃಂದ, ಆಡಳಿತ ಮಂಡಳಿ, ಶ್ರೀ ಮಹಿಷಮರ್ದಿನಿ ಭಜನ ಮಂಡಳಿ ಸದಸ್ಯರು ಸಹಕರಿಸಿದರು. ಉದ್ಯಮಿಗಳು, ತುಳು ಕನ್ನಡಿಗರು, ಕನ್ನಡೇತರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

ಶ್ರೀಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳು :

ಮೇ.31 ರಂದು ಬೆಳಗ್ಗೆ 6 ರಿಂದ ದೀಪ ಬಲಿ, ಮಹಾಪೂಜೆ 10 ರಿಂದ ಚಂಡಿಕಾ ಹೋಮ , ನಿತ್ಯಪೂಜೆ, ಸಂಜೆ 7 ರಿಂದ ಉತ್ಸವ ಬಲಿ , ವಸಂತ ಕಟ್ಟೆ ಪೂಜೆ, ಮಹಾಪೂಜೆ, ನಿತ್ಯ ಬಲಿ. ಜೂ.1 ರಂದು ಬೆಳಗ್ಗೆ 6 ರಿಂದ ದೀಪ ಬಲಿ, ಮಹಾಪೂಜೆ, 9.30ರಿಂದ ವಾಯು ಸ್ತುತಿ ಪುನಶ್ಚರಣೆ ಹೋಮ,ಮಹಾಪೂಜೆ ಸಂಜೆ 7.30 ರಿಂದ ಉತ್ಸವ ಬಲಿ, ವಸಂತ ಕಟ್ಟೆ ಪೂಜೆ, ಮಹಾಪೂಜೆ , ರಾತ್ರಿ 10 ರಿಂದ ಮಹಾಭೂತ ಬಲಿ, ಶಯನ ಕವಾಟ ಬಂಧನ ಇನ್ನಿತರ ಪೂಜಾ ಕಾರ್ಯಕ್ರಮಗಳು ಜರಗಲಿವೆ. ಜೂ. 3 ರಂದು ಬೆಳಗ್ಗೆ 7.30 ರಿಂದ ಕವಾಟೋದ್ಘಾಟನೆ, ಪಂಚಮೃತ , ಪ್ರಸನ್ನ ಪೂಜೆ, ತುಲಾಭಾರ ಸೇವೆ 9.30ರಿಂದ ಶ್ರೀ ಮಹಿಷಮರ್ದಿನಿ ಭಜನ ಮಂಡಳಿ ಸದಸ್ಯರಿಂದ ಭಜನೆ, 11.30 ರಿಂದ ಮಹಾಪೂಜೆ, ಚೂರ್ಣೋತ್ಸವ, ತೋರಣೋತ್ಸವ, ಹರಿವಾಣ ಕಾಣಿಕೆ, ಸಂಜೆ 5.30ರಿಂದ ಯಾತ್ರಹೋಮ , 7 ರಿಂದ ಬಲಿ ಉತ್ಸವ , ಉತ್ಸವ ಬಲಿಯೊಂದಿಗೆ ಮೆರವಣಿಗೆ, ಕೊಡಿಮಣಿತ್ತಾಯ ದೈವ ದರ್ಶನ , ದೇವರ ಭೇಟಿ, ಜೂ.6ರಂದು ಬೆಳಿಗ್ಗೆ ಸಂಪ್ರೋಕ್ಷಣೆ, ಮಹಾಪೂಜೆ ಮತ್ತು ಮಂತ್ರಾಕ್ಷೆ ನಡೆಯಲಿದೆ.

 

-ಚಿತ್ರ ವರದಿ  ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next