Advertisement

ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 32ನೇ ವಾರ್ಷಿಕೋತ್ಸವ

04:40 PM Jul 06, 2019 | Vishnu Das |

ಸೊಲ್ಲಾಪುರ: ತೀರ್ಥಕ್ಷೇತ್ರ ಅಕ್ಕಲ್‌ಕೋಟೆ ನಗರದ ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ 32ನೇ ವಾರ್ಷಿಕೋತ್ಸವ ಹಾಗೂ ಶ್ರೀ ಗುರುಪೂರ್ಣಿಮಾ ಉತ್ಸವ ಅಂಗವಾಗಿ ಜು. 6ರಿಂದ ಜು. 15 ರವರೆಗೆ ಧರ್ಮ ಸಂಕೀರ್ತನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಂಡಳದ ಸಂಸ್ಥಾಪಕ ಅಧ್ಯಕ್ಷ ಜನ್ಮೆàಜಯರಾಜೆ ಭೋಸ್ಲೆ ತಿಳಿಸಿದರು.

Advertisement

ಸೊಲ್ಲಾಪುರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸ್ವಾಮಿ ಸಮರ್ಥ ಅನ್ನಛತ್ರ ಮಂಡಳದ ಆವರಣದಲ್ಲಿ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 9.30ರವರೆಗೆ ಧರ್ಮ ಸಂಕೀರ್ತನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ. ಜು. 6ರಂದು ಸಂಜೆ 7ರಿಂದ ಪ್ರಸಿದ್ಧ ನ್ಯಾಯಮೂರ್ತಿಗಳಾದ ಆಶೀಷ್‌ ದೇಶಮುಖ್‌, ಶೈಲೇಶ್‌ ಜಾಧವ್‌, ಸುಧೀರ್‌ ಶಹಾ, ಜಯದೀಪ ಮಾನೆ, ಪಿ. ಎಂ. ಪಾಟೀಲ್‌ ಅವರು ಜ್ಯೋತಿ ಬೆಳಗಿಸುವ ಮೂಲಕ ಧರ್ಮ ಸಂಕೀರ್ತನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜು. 6ರಂದು ಸಂಜೆ 4ರಿಂದ 6 ರವರೆಗೆ ಸೊಲ್ಲಾಪುರದ ಗುರುಮಾಯಿ ಮಹಿಳಾ ಭಜನೆ ಮಂಡಳದಿಂದ ಭಜನೆ ಸೇವಾ ಕಾರ್ಯಕ್ರಮ, ಸಂಜೆ 7ರಿಂದ ರಾತ್ರಿ 9.30ರ ವರೆಗೆ ಪ್ರಸಿದ್ದ ಗಾಯಕ ಹಾಗೂ ಸಂಗೀತಕಾರ ಹೃದಯನಾಥ ಮಂಗೇಶ್ಕರ್‌, ರಾಧಾ ಮಂಗೇಶಕರ ಮತ್ತು ವಿಭಾವರಿ ಆಪಟೆ-ಜೋಶಿ ಅವರ ಭಾವ ಸರಗಮ ಭಕ್ತಿ ಸಂಗೀತ ಕಾರ್ಯಕ್ರಮ ಜರಗಲಿದೆ. ಜು. 7ರಿಂದ ಜು. 16ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜು. 16ರಂದು ಗುರುಪೂರ್ಣಿಮೆಯ ಉತ್ಸವ ಅಂಗವಾಗಿ ಮುಂಜಾನೆ 8ರಿಂದ 10ರವರೆಗೆ ಶ್ರೀ ಸ್ವಾಮಿ ಸಮರ್ಥ ಸಾರಾಮೃತ ಪಾರಾಯಣ, ಮುಂಜಾನೆ 10ರಿಂದ 11ರವರೆಗೆ ನಾಮಸ್ಮರಣ ಮತ್ತು ಶ್ರೀಗುರು ಪೂಜೆ, ಮುಂಜಾನೆ 11ಕ್ಕೆ ಮಹಾನೈವೇದ್ಯ ಕಾರ್ಯಕ್ರಮ, ಸಂಜೆ 4ರಿಂದ ಪಲ್ಲಕ್ಕಿ ಉತ್ಸವ ನೇರವೆರಲಿದೆ ಎಂದು ಮಂಡಳದ ಕಾರ್ಯದರ್ಶಿ ಶ್ಯಾಮರಾವ್‌ ಮೋರೆ ತಿಳಿಸಿದರು.

ಸೊಲ್ಲಾಪುರ ಸಂಸದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ, ಮಾಢಾ ಸಂಸದ ರಣಜಿತಸಿಂಹ ನಿಂಬಾಳ್ಕರ್‌, ಮಾಜಿ ಸಚಿವ ಹಾಗೂ ಶಾಸಕ ಸಿದ್ಧರಾಮ ಮೆØàತ್ರೆ, ಸುದರ್ಶನ ಖಾನವಿಲ್ಕರ್‌, ಪ್ರಭಾವತಿ ಗುಳವೆ, ಜಗನ್ನಾಥ ಥೋರಾತ್‌, ಬಾಳಾಸಾಹೇಬ್‌ ದಾಭೇಕರ, ಅತುಲ್‌ ಬೇಹರೆ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಂಡಳದ ಪ್ರಮುಖ ಕಾರ್ಯಕಾರಿ ವಿಶ್ವಸ್ತ ಅಮೋಲ್‌ರಾಜೆ ಭೋಸ್ಲೆ ಅವರು ತಿಳಿಸಿದರು. ಮಂಡಳದ ಉಪಾಧ್ಯಕ್ಷ ಅಭಯ ಖೋಬರೆ, ಕೋಶಾಧಿಕಾರಿ ಲಾಲಾ ರಾಠೊಡ್‌, ಸಂಪಾದಕ ಅಭಯ ದೀವಾಣಜಿ, ಅಮೋಲ ಶಿಂಧೆ, ಸಜ್ಜನ ನಿಚಳ, ಶೋಭಾ ಬೊಲ್ಲಿ, ಸಯಾಲಿ ಜೋಶಿ, ಡಾ| ಸುನೀಲ್‌ ಘಾಟೆ, ರಾಜು ಲಿಂಬಿ ತೋಟೆ, ಮಹಾಂತೇಶ ಸ್ವಾಮಿ,
ಪ್ರಶಾಂತ ಭಗರೆ, ಪ್ರವೀಣ್‌ ದೇಶಮುಖ್‌ ಮೊದಲಾದ
ವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next