Advertisement

2018ರಲ್ಲಿ ಚೀನಾ ಸೈನಿಕರು 326 ಬಾರಿ ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದ್ದಾರೆ; ಕೇಂದ್ರ

09:45 AM Nov 28, 2019 | Nagendra Trasi |

ನವದೆಹಲಿ: ಭಾರತೀಯ ಗಡಿ ಪ್ರದೇಶದಲ್ಲಿ ಕಳೆದ ವರ್ಷದಲ್ಲಿ ಚೀನಾ ಸೈನಿಕರು ಸುಮಾರು 326 ಬಾರಿ ಅಕ್ರಮವಾಗಿ ಒಳಪ್ರವೇಶಿಸಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಲೋಕಸಭೆಗೆ ತಿಳಿಸಿದೆ.

Advertisement

ಚೀನಾ ಪಡೆಗಳು ಅಕ್ರಮವಾಗಿ ಒಳಪ್ರವೇಶಿಸುತ್ತಿರುವ ಘಟನೆಗಳ ಕುರಿತು ಕೇಳಿದ ಪ್ರಶ್ನೆಗೆ ರಕ್ಷಣಾ ಖಾತೆಯ ರಾಜ್ಯ ಸಚಿವ ಶ್ರೀಪಾದ್ ನಾಯ್ಕ್ ಪ್ರತಿಕ್ರಿಯೆ ನೀಡಿದ್ದು, ಕಳೆದ ಮೂರು ವರ್ಷಗಳಲ್ಲಿ ಚೀನಾ ಸೈನಿಕರು ಭಾರತದ ಪ್ರದೇಶದೊಳಕ್ಕೆ ಸುಮಾರು 326 ಬಾರಿ ಅಕ್ರಮವಾಗಿ ಪ್ರವೇಶಿಸಿರುವುದಾಗಿ ಲೋಕಸಭೆಗೆ ಮಾಹಿತಿ ನೀಡಿದರು.

ವರದಿಯ ಪ್ರಕಾರ, 2016ರಲ್ಲಿ 273 ಘಟನೆ, 2017ರಲ್ಲಿ 403 ಘಟನೆ ನಡೆದಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 2019ರ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗುತ್ತಿದ್ದು, ಈವರೆಗೂ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿಸಿದರು.

ಭಾರತ ಮತ್ತು ಚೀನಾದ ಗಡಿ ಪ್ರದೇಶಗಳ ನಡುವಿನ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ ಎಸಿ) ಅನ್ನು ಕರಾರುವಕ್ಕಾಗಿ ಗುರುತಿಸಿಲ್ಲ. ಉಭಯ ದೇಶಗಳು ಎಲ್ ಎಸಿ ಕುರಿತು ಭಿನ್ನ ಅಭಿಪ್ರಾಯ ಹೊಂದಿರುವುದಾಗಿ ಸಚಿವರು ವಿವರಿಸಿದ್ದಾರೆ. ಈ ನಿಟ್ಟಿನಲ್ಲಿ ಎಲ್ ಎಸಿಯಲ್ಲಿ ಭಾರತ ಮತ್ತು ಚೀನಾ ತಮ್ಮದೇ ತಿಳಿವಳಿಕೆ ನೆಲೆಯಲ್ಲಿ ಪಹರೆ ನಡೆಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next