Advertisement
ನಗರದ ಭಜರಂಗಸೇನೆಯ ಕಚೇರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡ್ರಗ್ಸ್ ದಂಧೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಇದ್ದಾರೆ. ಕೇವಲ ನಟಿಯರನ್ನು ಗುರಿ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ರಾಜಕಾರಣಿಗಳೇ ಚುನಾವಣೆ ಪ್ರಚಾರಕ್ಕೆ ನಟ-ನಟಿಯರನ್ನು ಕರೆಸುತ್ತಾರೆ. ಯಾಕೆ ಕರೆಸಬೇಕು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ರಾಜಕಾರಣಿಗಳು ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್ ಎಲ್ಲ ಇವೆ. ರಾಜಕಾರಣಿಗಳಿಗೆ ಡ್ರಗ್ ನಿಂದ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿದ್ದಾರೆ. ವೈನ್ ಹಾಗೂ ಡ್ರಗ್ಸ್ ಲಾಬಿ ರಾಜಕೀಯವನ್ನು ಹಿಡಿದಿಟ್ಟುಕೊಂಡಿದೆ ಎಂದರು. ಇದನ್ನೂ ಓದಿ: ಜಮೀರ್ ಒಬ್ಬ ಗುಜರಿ ಗಿರಾಕಿ, ಗಳಿಸಿದ್ದೆಲ್ಲಾ ಅನೈತಿಕವಾಗಿಯೇ: ರೇಣುಕಾಚಾರ್ಯ ವಾಗ್ದಾಳಿ
Related Articles
ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಶಾಮೀಲಾಗಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್ ಅಹಮದ್ ಖಾನ್‌ರನ್ನು ಸರ್ಕಾರ ಬಂಧಿಸುತ್ತಿಲ್ಲ ಎಂದು ಕಿಡಿಕಾರಿದರು.
Advertisement
ಲವ್ ಜಿಹಾದ್-ಡ್ರಗ್ಸ್ ಗೂ ಸಂಬಂಧನಟಿ ಸಂಜನಾ ಗಂಡ ಡಾ.ಅಜೀಜ್ ಕೂಡ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಸಂಬಂಧವಿದೆ. ಇದಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದಕ್ಕೆ ಮೂಲ ಪುರುಷ. ಅಜೀಮ್ ಅಸ್ತಾನ ಎಂಬ ದೇಶದ್ರೋಹಿ ಸೇರಿದಂತೆ ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಬಾಲಿವುಡ್ ನಶೆ ಜಾಲದಲ್ಲಿ ಸಾರಾ ಆಲಿಖಾನ್, ರಾಕುಲ್ ಪ್ರೀತ್, ಮುಖೇಶ್ ಚಾಬ್ರಾ!ಬಾಯ್ಬಿಟ್ಟ ರಿಯಾ ಬಿಜೆಪಿ ಧಮ್ ತೋರಿಸಬೇಕು
ಬಿಜೆಪಿ ಸರ್ಕಾರ ಧಮ್ ತೋರಿಸಬೇಕು. ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಸೇರಿದಂತೆ ಎಲ್ಲರನ್ನು ಬಂಧಿಸಬೇಕು. ಪಾದರಾಯನಪುರ, ಕೆ.ಜೆ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಾಟೆಯಲ್ಲಿ ಡ್ರಗ್ಸ್, ಗಾಂಜಾ ಕಾರಣವಾಗಿದೆ. ಕೂಡಲೇ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.