ಚಂಡೀಗಢ: ಪಂಜಾಬ್ ನಲ್ಲಿ 158 ಜನರಿಗೆ ಬ್ಲಾಕ್ ಫಂಗಸ್ ತಾಗಿರುವುದು ದೃಢವಾಗಿದೆ. ಆದರೆ ಅವರಲ್ಲಿ 32 ಮಂದಿಗೆ ಈ ಹಿಂದೆ ಕೋವಿಡ್ 19 ಸೋಂಕಿತರಾದ ಬಗ್ಗೆ ಹಿನ್ನೆಲೆಯಿಲ್ಲ. ಆದರೂ ಅವರಿಗೆ ಬ್ಲಾಕ್ ಫಂಗಸ್ ತಾಗಿರುವುದು ಅಚ್ಚರಿಗೆ ಮತ್ತು ಆತಂಕಕ್ಕೆ ಕಾರಣವಾಗಿದೆ.
ಇತರ ಖಾಯಿಲೆಗಳಿಗೆ ಔಷಧಿ ಪಡೆಯುವಾಗ ಸ್ಟೀರಾಯ್ಡ್ ನ ಅತೀಯಾದ ಬಳಕೆಯಿಂದ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ:ಬಿಜೆಪಿ ಶಾಸಕಿಗೆ ಭದ್ರತೆಯೇ ಹೊರೆ! ಗುಡಿಸಲಿನಲ್ಲಿ ವಾಸ, ಪತಿ ದಿನಗೂಲಿ ನೌಕರ
ಯಾವುದೇ ರೋಗಕ್ಕೆ ಚಿಕಿತ್ಸೆ ಪಡೆಯುವಾಗ ಹೆಚ್ಚಿನ ಪ್ರಮಾಣದ ಸ್ಟೀರಾಯ್ಡ್ ಬಳಸಿದರೆ ಅವರಿಗೆ ಬ್ಲಾಕ್ ಫಂಗಸ್ ದಾಳಿ ಮಾಡುವ ಸಾಧ್ಯತೆಯಿದೆ. ಬ್ಲಾಕ್ ಫಂಗಸ್ ಏನೂ ಭಯಾನಕ ಖಾಯಿಲೆಯಲ್ಲ. ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು ಎಂದು ಪಂಜಾಬ್ ನ ಬ್ಲಾಕ್ ಫಂಗಸ್ ನೋಡಲ್ ಅಧಿಕಾರಿ ಡಾ. ಗಗನ್ ದೀಪ್ ಸಿಂಗ್ ಹೇಳಿದ್ದಾರೆ.
ಪಂಜಾಬ್ ರಾಜ್ಯದಲ್ಲಿ ಬ್ಲಾಕ್ ಫಂಗಸ್ ನ್ನು ಸಾಂಕ್ರಾಮಿಕ ರೋಗಗಳ ಪಟ್ಟಿಗೆ ಸೇರಿಸಲಾಗಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬ್ಲಾಕ್ ಫಂಗಸ್ ಗೆ ಔಷಧಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.