Advertisement

ತಾಜಿಕಿಸ್ಥಾನ ಜೈಲಿನಲ್ಲಿ ದೊಂಬಿ, 24 ಐಸಿಸ್‌ ಉಗ್ರರು ಸೇರಿದಂತೆ 32 ಸಾವು

09:11 AM May 21, 2019 | Team Udayavani |

ದುಶಾನ್‌ಬೆ (ತಾಜಿಕಿಸ್ಥಾನ್‌) : ತಾಜಿಕಿಸ್ಥಾನದ ದುಶಾನ್‌ಬೆ ಯಲ್ಲಿನ ಬಂಧೀಖಾನೆಯಲ್ಲಿ ನಡೆದಿರುವ ಭಾರೀ ದೊಂಬಿ, ಮಾರಾಮಾರಿಯಲ್ಲಿ 32 ಜನರು ಮೃತಪಟ್ಟಿದ್ದಾರೆ.

Advertisement

ಇವರಲ್ಲಿ 24 ಮಂದಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಮತ್ತು ಮೂವರು ಗಾರ್ಡ್‌ ಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಭಾನುವಾರ ಸಂಜೆ ರಾಜಧಾನಿ ದುಶಾಂಬೆ ಸಮೀಪದ ಬಂಧೀಖಾನೆಯಲ್ಲಿ ಭಾರೀ ದೊಂಬಿ ಸಂಭವಿಸಿದಾಗ ಐಸಿಸ್‌ ಉಗ್ರ ಕೈದಿಗಳು ಐವರು ಕೈದಿಗಳನ್ನು ಮತ್ತು ಮೂವರು ಗಾರ್ಡ್‌ ಗಳನ್ನು ಕೊಂದರು ಎಂದು ಕಾನೂನು ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next